ರಾಮ​ನ​ಗರ (ಮಾ.03): ಪ್ರವಾ​ಸೋ​ದ್ಯಮ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ​ಸಿ​ಡಿ ಕಿಂಗ್‌ ಅಂತಾ ಗೊತ್ತಿದೆ. ಅವರ ಬಳಿ ಇ​ರುವ ನನ್ನ ​ಸಿ​ಡಿ​ಯನ್ನು ನಾಳೆ ಬೆಳ​ಗ್ಗೆಯೇ ಬಿಡು​ಗಡೆ ಮಾಡಿ ತೋರಿ​ಸಲಿ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಸವಾ​ಲು ಹಾಕಿ​ದರು.

ನಗರದಲ್ಲಿ ಮಂಗಳವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವರು, ನನ್ನ ​ಸಿಡಿ ಬಿಡು​ಗಡೆ ಮಾಡಲು ಸೂಕ್ತ ಸಂದ​ರ್ಭ​ಕ್ಕಾಗಿ ಕಾಯು​ವುದು ಬೇಡ. ನಾಳೆ ಬೆಳಗ್ಗೆಯೇ ಬಿಡು​ಗಡೆ ಮಾಡಲಿ. ಅದೆ​ಲ್ಲ​ವನ್ನು ಎದು​ರಿ​ಸುವ ಶಕ್ತಿ​ಯನ್ನು ರಾಮ​ನ​ಗ​ರದ ಜನರು ನೀಡಿ​ದ್ದಾರೆ. ನನ್ನ ಹತ್ತಿರ ಅವ​ರ ಆಟ​ಗಳು ನಡೆ​ಯು​ವು​ದಿಲ್ಲ ಎಂದು ಕಿಡಿ​ಕಾ​ರಿ​ದರು.

'ಜೆಡಿಎಸ್‌ನವರು ಬಿಜೆಪಿಗರ ಮನೆ ಬಾಗಿಲಿಗೆ ಬರ್ತಿದ್ದಾರೆ : ಸಿಎಂರಿಂದ ಸಪೋರ್ಟ್'

ಚನ್ನ​ಪ​ಟ್ಟಣ ಮಾತ್ರ​ವಲ್ಲ ರಾಜ್ಯದ ಯಾವುದೇ ಮೂಲೆ​ಯ​ಲ್ಲಾ​ದರೂ ಯೋಗೇ​ಶ್ವರ್‌ ರಾಜ​ಕಾ​ರ​ಣಕ್ಕೆ ಬರಲಿ, ಅವರ ಸವಾ​ಲನ್ನು ಸ್ವೀಕ​ರಿಸಿ ಎದು​ರಿ​ಸಲು ನಾನಲ್ಲ, ನನ್ನ ಕಾರ್ಯ​ಕರ್ತರೇ ಸಾಕು. ಕಳೆದ ಚನ್ನ​ಪ​ಟ್ಟಣ ವಿಧಾ​ನ​ಸಭಾ ಕ್ಷೇತ್ರ​ದಿಂದ ಸ್ಪರ್ಧಿ​ಸಿ​ದ್ದ ನಾನು ಚುನಾ​ವ​ಣೆ​ಯನ್ನೇ ನಡೆ​ಸ​ಲಿಲ್ಲ. ಕೇವಲ ನಾಮ​ಪತ್ರ ಸಲ್ಲಿಸಿ ಹೋಗಿದ್ದೆ. ಒಂದು ದಿನವೂ ಬಂದು ಕ್ಷೇತ್ರ​ದಲ್ಲಿ ಪ್ರಚಾರ ಮಾಡಲಿಲ್ಲ. ನನ್ನ ಕಾರ್ಯ​ಕ​ರ್ತರೇ ಚುನಾ​ವಣೆ ನಡೆ​ಸಿ​ದರು. ಇದನ್ನು ಯೋಗೇ​ಶ್ವರ್‌ ಬಹು​ಶಃ ಮರೆ​ತಿ​ರ​ಬೇಕು ಎಂದು ಹೇಳಿ​ದರು.

ಯೋಗೇ​ಶ್ವರ್‌ ಬಗ್ಗೆ ಚರ್ಚೆ ನಡೆ​ಸು​ವುದೇ ಅನ​ವ​ಶ್ಯಕ. ಪದೇ ಪದೇ ಚರ್ಚಿಸಿ ಅವರ ಮಟ್ಟಕ್ಕೆ ಇಳಿ​ಯಲು ನನಗೆ ಇಷ್ಟ​ವಿಲ್ಲ. ರಾಜ​ಕಾ​ರಣ ಮಾಡುವ ಸಂದ​ರ್ಭ​ದಲ್ಲಿ ರಾಜ​ಕಾ​ರಣ ಮಾಡು​ತ್ತೇನೆ. ಅವ​ರಿಗೆ ಇರುವ ಕೆಲಸ ನೋಡಿ​ಕೊ​ಳ್ಳಲಿ ಎಂದು ಹೇಳಿದರು.