Asianet Suvarna News Asianet Suvarna News

ಸೂಟ್‌ ಬೂಟ್‌ ಸರ್ಕಾರದಿಂದ ಕೆ.ಆರ್‌.ಕ್ಷೇತ್ರಕ್ಕೆ 6 ಸಾವಿರ ಮನೆ: ಸಚಿವ ಸಿ.ಸಿ.ಪಾಟೀಲ್‌

ಬಹಳ ಮಂದಿ ಮೋದಿ ಸರ್ಕಾರವನ್ನು ಸೂಟ್‌ಬೂಟ್‌ ಸರ್ಕಾರ ಎಂದು ಆರೋಪಿಸಿದರು. ಸ್ವಾಮಿ ನೀವಿದ್ದಾಗ ಮೈಸೂರು ನಗರಕ್ಕೆ, ಕೆ.ಆರ್‌.ಕ್ಷೇತ್ರಕ್ಕೆ ಎನು ಕೊಟ್ಟಿದ್ದಿರಿ?. ಅದೇ ಸೂಟ್‌ಬೂಟ್‌ ಸರ್ಕಾರ ಶನಿವಾರ 6 ಸಾವಿರ ಮನೆಗಳನ್ನು ನೀಡುತ್ತಿದೆ. 

minister cc patil talks about pm narendra modi government at mysuru gvd
Author
First Published Sep 26, 2022, 12:31 AM IST

ಮೈಸೂರು (ಸೆ.26): ಬಹಳ ಮಂದಿ ಮೋದಿ ಸರ್ಕಾರವನ್ನು ಸೂಟ್‌ಬೂಟ್‌ ಸರ್ಕಾರ ಎಂದು ಆರೋಪಿಸಿದರು. ಸ್ವಾಮಿ ನೀವಿದ್ದಾಗ ಮೈಸೂರು ನಗರಕ್ಕೆ, ಕೆ.ಆರ್‌.ಕ್ಷೇತ್ರಕ್ಕೆ ಎನು ಕೊಟ್ಟಿದ್ದಿರಿ?. ಅದೇ ಸೂಟ್‌ಬೂಟ್‌ ಸರ್ಕಾರ ಶನಿವಾರ 6 ಸಾವಿರ ಮನೆಗಳನ್ನು ನೀಡುತ್ತಿದೆ. ಅಂತಹ ಒಂದು ಅದ್ಬುತವಾದ ಕೊಡುಗೆಯನ್ನು ಪರಮಾತ್ಮನಂತಿರುವ ಮೋದಿ ಅವರು ಕೊಟ್ಟಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ ಅಂಗವಾಗಿ ಕೃಷ್ಣರಾಜ ಕ್ಷೇತ್ರದಲ್ಲಿ ಆಯೋಜಿಸಿರುವ ನರೇಂದ್ರ ಮೋದಿ ಯುಗ ಉತ್ಸವದ 8ನೇ ದಿನದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನಾನಾ ಸವಲತ್ತು ವಿತರಿಸಿ ಅವರು ಮಾತನಾಡಿ, ಯಾರು ಮೋದಿ ಅವರನ್ನು ವ್ಯಾಪಕವಾಗಿ ಟೀಕೆ ಮಾಡುತ್ತಾರೋ ಅವರು ಆತ್ಮ ಮುಟ್ಟಿಕನ್ನಡಿ ಮುಂದೆ ನಿಂತು ನರೇಂದ್ರ ಮೋದಿ ಕೆಟ್ಟವರೆಂದು ಹೇಳಲಿ, ಸತ್ತರೂ ಹೇಳಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ಪ್ರಧಾನಿಯಾಗಿ ಸದೃಢ ಭಾರತ, ಸಮೃದ್ಧಿ ಭಾರತ ನಿರ್ಮಾಣ ಆಗಿದೆ ಎಂದರು.

ದೇಶದಪ್ರಧಾನಿ ಮಾಡುವ ಕೆಲಸವನ್ನು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಯಾರೋ ಒಬ್ಬಿಬ್ಬರ ಭ್ರಷ್ಟಾಚಾರದ ಕುರಿತು ಎಚ್ಚರಿಸಿದ ರಾಮದಾಸ್‌ ಅವರಾಗಿದ್ದಾರೆ. ಬಹಳ ಅದ್ಬುತವಾದ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾನು ಮಂತ್ರಿಯಾಗಿ ಏನೆಲ್ಲಾ ಮಾಡಬೇಕೆಂದು ಯೋಚಿಸುತ್ತಿದ್ದೇನೆ. ಜನಪರವಾಗಿ ಕೆಲಸವನ್ನು ಮಾಡಿದಂತಹ ವ್ಯಕ್ತಿ ಆ ಕ್ಷೇತ್ರದ ಜನಪ್ರತನಿಧಿಯಾದಾಗ ಎನೆಲ್ಲಾ ಸಾಧನೆ ಮಾಡಬಹುದೆಂಬುದಕ್ಕೆ ರಾಮದಾಸ್‌ ಅವರು ಸಾಕ್ಷಿಯಾಗಿದ್ದಾರೆ ಎಂದರು.

Mysuru Dasara 2022: ದಸರಾ ಭದ್ರತೆಗೆ 5485 ಪೊಲೀಸರ ನಿಯೋಜನೆ: ಪೊಲೀಸ್‌ ಆಯುಕ್ತ ಚಂದ್ರಗುಪ್ತ

ನನ್ನ ಇಲಾಖೆ ಕೆಲಸ ಕಡಿಮೆ ಇದೆ. ಆದರೆ, ಸ್ವಯಂ ಉದ್ಯೋಗ ಸಾಲ ಸೌಲಭ್ಯ ಕಲ್ಪಿಸಿ, ಉದ್ಯೋಗ ಮೇಳ ಆಯೋಜಿಸುವ ಮೂಲಕ ಆ ಕುಟುಂಬಗಳು ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ. ಇಂತಹ ಯೋಜನೆಗಳನ್ನು ಬಹುತೇಕ ಚುನಾಯಿತ ಪ್ರತಿನಿಧಿಗಳು ಜಾರಿಗೆ ತಂದರೆ ದೇಶ ನಂದನವನ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.

ಅಧಿಕಾರಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುವುದಿಷ್ಟೇ ಶುದ್ಧ ಹಸ್ತಿತ್ವ ನಮ್ಮ ಪ್ರತಿನಿಧಿ ಇದ್ದರಷ್ಟೇ ಸಾಲದು, ಅವರು ಕೊಡುವ ಯೋಜನೆ ಬಡವರಿಗೆ ತಲುಪಲು ನಡೆದು ಬರುವ ಮೆಟ್ಟಿಲು ಶುದ್ಧ ಹಸ್ತ ಇರಬೇಕು. ಅಂತಹ ನಡೆಗೆ ತಡೆ ಹಾಕುವ ಕೆಲಸ ಆಗಬೇಕು. 5, 10 ಸಾವಿರಕ್ಕೆ ಇಂದು ಕೊಟ್ಟರೆ ನಾಳೆ ಚುನಾವಣೆ ಬಂದ ಸಂದರ್ಭದಲ್ಲಿ ನೀವೆನೂ ಕೊಟ್ಟಿಲ್ಲ ನಾವೆ ರೊಕ್ಕ ಕೊಟ್ಟಿದ್ದೇವೆ ಎನ್ನುತ್ತಾರೆ. ಅಂತಹ ವ್ಯವಸ್ಥೆ ಆಗಬಾರದು. ಅಂತಹ ವ್ಯವಸ್ಥೆಗೆ ನಮ್ಮ ಪಕ್ಷದ ಕಾರ್ಯಕರ್ತರು ತಡೆಯನ್ನು ಹಾಕಬೇಕು ಎಂದರು.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ ಬಳಸಿ ಹೆಚ್ಚು ಕಾಲ ಬಾಳಿಕೆ ಬರುವ ರಸ್ತೆಗೆ ರಾಮದಾಸ್‌ ಅವರೊಟ್ಟಿಗೆ ಸೇರಿ ಚಾಲನೆ ನೀಡಿದ್ದೇವೆ. ವಿನೂತನ ಹಾಗೂ ಹೊಸ ತಂತ್ರಜ್ಞಾನದಲ್ಲಿ ರಾಜ್ಯ ದಲ್ಲಿ ಇಂತಹದೊಂದು ಕಾರ್ಯಕ್ರಮ ಜಾರಿಗೆ ಬರುತ್ತಿದೆ. ಹೂವಿನ ಜತೆ ನಾರು ಸ್ವರ್ಗ ಸೇರಿತೆಂಬ ಮಾತಿನಂತೆ ರಾಮದಾಸ್‌ ಅವರ ಪ್ರಯತ್ನ ದಿಂದ ನಮ್ಮ ಇಲಾಖೆಯ ಘನತೆಯೂ ಹೆಚ್ಚಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಎಸ್‌.ಎ.ರಾಮದಾಸ್‌, ರಾಜ್ಯದಲ್ಲಿ ಮೊದಲನೇ ಬಾರಿಗೆ ಪ್ರಧಾನಿಗಳು ಸಿಂಗಲ್‌ ಯೂಸಡ್‌ ಪ್ಲಾಸ್ಟಿಕ್‌ ನಿಷೇಧಿಸುತ್ತಿರುವುದಾಗಿ ಹೇಳಿದ್ದರು. ಹೀಗಾಗಿ ಅವುಗಳನ್ನು ಸಂಗ್ರಹಿಸಿ ಅದನ್ನು ಬೆಂಗಳೂರಿನಲ್ಲಿ ಕರಗಿಸಿ ಕ್ಲಿಸ್ಟರ್‌ಗಳನ್ನು ಮಾಡಿದ್ದು, ಅವುಗಳನ್ನು ಬಳಸಿ .4 ಕೋಟಿ ವೆಚ್ವದಲ್ಲಿ ನ್ಯಾಯಾಲಯದ ಎದುರಿನ ನರಸರಾಜ ರಸ್ತೆ ಬಲ್ಲಾಳ್‌ ವೃತ್ತದವರೆಗಿನ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು, ಪ್ಲಾಸ್ಟಿಕ್‌ ರಸ್ತೆ ಮೊದಲು ಪ್ರಾರಂಭಿಸಿದ ಕೀರ್ತಿ ನಮ್ಮದಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಹೆಚ್ಚುವರಿ ಆಯುಕ್ತೆ ರೂಪ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಗಣೇಶ್‌ ಭೋವಿ, ರಾಜು, ಕೃಷ್ಣಯ್ಯ, ಇಇ ಹರೀಶ್‌, ಆಶ್ರಯ ಸಮಿತಿ ಸದಸ್ಯ ವಿದ್ಯಾಅರಸ್‌, ಹೇಮಂತ್‌ಕುಮಾರ್‌, ಗೌರಿ ಇದ್ದರು.

Mysuru Dasara 2022: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ರಾಜಮನೆತನವನ್ನು ಆಹ್ವಾನಿಸಿದ ಸಚಿವ ಸೋಮಶೇಖರ್‌

ನಾನಾ ಸವಲತ್ತು ವಿತರಣೆ: ಉದ್ಯೋಗ ಮೇಳದಲ್ಲಿ ಭಾಗವಹಿಸಿ ನಿರುದ್ಯೋಗಿಗಳಿಗೆ ಸ್ಥಳದಲ್ಲೇ ಸಾಂಕೇತಿಕವಾಗಿ ಎಸ್‌. ಮನೋಜ್‌, ಹರ್ಷವರ್ಧನ್‌, ಅಭಿಷೇಕ್‌, ಮಂಜುನಾಯಕ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು. ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಆಯುಕ್ತೆ ರೂಪಾ ಮಾತನಾಡಿ, ಮೈಸೂರು ನಗರಪಾಲಿಕೆ ಆಶ್ರಯ ಯೋಜನೆಯಡಿ ವರ್ಷದಿಂದ ಅನೇಕ ಅದಾಲತ್‌ ಮೂಲಕ ಶಾಸಕರ ಸೂಚನೆಯಂತೆ ಭ್ರಷ್ಟಾಚಾರ ಮುಕ್ತವಾಗಿ 1008 ಹಕ್ಕು ಖುಲಾಸೆಯಾಗಿ ಹಕ್ಕುಪತ್ರವನ್ನು ಅವರ ಮನೆಗೆ ತೆರಳಿ ನೀಡಿದ್ದೇವೆ. ಅಂಬೇಡ್ಕರ್‌ ವಸತಿ ಯೋಜನೆ ಸೇರಿ ವಿವಿಧ ಯೋಜನೆಯಡಿ ಸಂಪೂರ್ಣ ಗುರಿ ಸಾಧಿದ್ದೇವೆ. 13 ಸಾವಿರ ಅರ್ಜಿ ಪರಿಶೀಲಿಸಿ 8 ಸಾವಿರ ಸಿದ್ಧತೆ ಮಾಡಿದ್ದೇವೆ. 12 ಸಾವಿರ ಮನೆಗೆ ಮಂಜುರಾತಿ ತಂದಿದ್ದು, 6 ಸಾವಿರ ಮಂದಿಗೆ ಅಂಚೆ ಮೂಲಕ ಅಲರ್ಚ್‌ ತಲುಪಿಸಿ ಮೂರನೇ ಹಂತದ ಹಣ ಕಟ್ಟಿಸುವ ಕೆಲಸ ಮಾಡಿದ್ದೇವೆ ಎಂದರು.

Follow Us:
Download App:
  • android
  • ios