Asianet Suvarna News Asianet Suvarna News

Haveri: 12 ಕೋಟಿ ವೆಚ್ಚದಲ್ಲಿ ಗಾರ್ಮೆಂಟ್ಸ್‌ ಘಟಕಕ್ಕೆ ಚಾಲನೆ: ಸಚಿವ ಬಿ.ಸಿ.ಪಾಟೀಲ್‌

ತಾಲೂಕಿನ ಬಡ ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರ ಬಹುದಿನಗಳ ಬೇಡಿಕೆಯಂತೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಬಸವಶ್ರೀ ಗಾರ್ಮೆಂಟ್ಸ್‌ ನಿರ್ಮಾಣವಾಗುತ್ತಿದ್ದು, ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Minister BC Patil launched the Garments unit at a cost of 12 crores At Haveri gvd
Author
First Published Oct 28, 2022, 11:58 PM IST

ರಟ್ಟೀಹಳ್ಳಿ (ಅ.28): ತಾಲೂಕಿನ ಬಡ ವರ್ಗದ ಹಾಗೂ ವಿಶೇಷವಾಗಿ ಮಹಿಳೆಯರ ಬಹುದಿನಗಳ ಬೇಡಿಕೆಯಂತೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಬಸವಶ್ರೀ ಗಾರ್ಮೆಂಟ್ಸ್‌ ನಿರ್ಮಾಣವಾಗುತ್ತಿದ್ದು, ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು. ತಾಲೂಕಿನ ಮಾಸೂರು ಗ್ರಾಮದಲ್ಲಿ ನೂತನವಾಗಿ ಬಸವಶ್ರೀ ಗಾರ್ಮೆಂಟ್ಸ್‌ ನಿರ್ಮಾಣದ ಗುದ್ದಲಿಪೂಜೆಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈ ಹಿಂದೆ ತಾಲೂಕಿನ ಮತದಾರರಿಗೆ ನೀಡಿದ ಭರವಸೆಯಂತೆ ಮಾಸೂರು ಗ್ರಾಮದಲ್ಲಿ ಬಸವಶ್ರೀ ಗಾರ್ಮೆಂಟ್ಸ್‌ನ್ನು ಯೂನಿಯನ್‌ ಬ್ಯಾಂಕ್‌ನ ಸಹಯೋಗದಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ತಾಲೂಕಿನಲ್ಲಿಯ ಪ್ರಥಮ ಕೈಗಾರಿಕೆಯಾಗಿದೆ. ರಟ್ಟೀಹಳ್ಳಿ ಹಾಗೂ ಹಿರೆಕೇರೂರು ತಾಲೂಕಿನ 1500ಕ್ಕೂ ಹೆಚ್ಚು ಜನತೆಗೆ ಉದ್ಯೋಗ ದೊರೆಯುವಂತಾಗುವುದು. ಆ ಮೂಲಕ ಮಹಿಳೆಯರು ಬಡ ವರ್ಗದ ಜನತೆ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವಂತಾಗುವುದು ಎಂದು ಸಂತಸ ವ್ಯಕ್ತಪಡಿಸಿದರು.

ಯಪ್ಪಾ ಹೋರಿ ತೂಫಾನ್ ಹೋದಂಗ ಹೋತಲೇ.. ಇದು ಹಾವೇರಿಯ ಮೈ ನವಿರೇಳಿಸೋ ಹೋರಿ ಹಬ್ಬ!

ಗಾರ್ಮೆಂಟ್ಸ್‌ನ ನಿರ್ವಹಣೆಯನ್ನು ಶಿಗ್ಗಾಂವಿಯ ರಾಘವೇಂದ್ರ ಕೃಷ್ಣಮೂರ್ತಿ ಅವರಿಗೆ ನೀಡಿದ್ದು, ಮುಂದಿನ ದಿನಗಳಲ್ಲಿನ ಆರಂಭಿಕ ಸ್ಥಿತಿಗತಿ ನೋಡಿಕೊಂಡು ಇನ್ನೂ ಹೆಚ್ಚಿನ ಉದ್ಯೋಗ ದೊರೆಯುವಂತಾಗಲು ಹೆಚ್ಚಿನ ಶ್ರಮ ವಹಿಸಲಾಗುವುದು ಎಂದರು. ವನಜಾ ಪಾಟೀಲ್‌, ಸೌಮ್ಯಾ ಪಾಟೀಲ್‌, ದೊಡ್ಡಗೌಡ ಪಾಟೀಲ್‌, ಪ್ರತಾಪ್‌ ಪಾಟೀಲ್‌, ಎಸ್‌.ಎಸ್‌. ಪಾಟೀಲ್‌, ರಾಘವೇಂದ್ರ ಹರವಿಶೆಟ್ಟರ್‌, ಮಾಲತೇಶಗೌಡ ಗಂಗೋಳ, ಸಿದ್ದು ಕರೆಗೌಡ್ರ, ಪ್ರಕಾಶ ಮಕರಿ ಮುಂದಾದವರು ಇದ್ದರು.

ಕಿಸಾನ್‌ ಸಮೃದ್ಧಿ ಕೇಂದ್ರದಲ್ಲಿ ಸಬ್ಸಿಡಿಯಲ್ಲಿ ಕೃಷಿ ಪರಿಕರ: ಈ ಹಿಂದೆ ದೊರೆಯುತ್ತಿದ್ದ ಖಾಸಗಿ ಕಂಪನಿಗಳ ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳು ಇನ್ನು ಮುಂದೆ ಭಾರತ್‌ ಬ್ರ್ಯಾಂಡ್‌ಗಳಲ್ಲಿ ಎಲ್ಲಾ ರಸಗೊಬ್ಬರ ಅಂಗಡಿಗಳಲ್ಲಿ ದೊರೆಲಿವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು. ನಗರದ ಕೆಸಿ ರಸ್ತೆಯಲ್ಲಿರುವ ಶ್ರೀವೆಂಕಟೇಶ್ವರ ಸೀಡ್ಸ್‌ ಮತ್ತು ಫರ್ಟಿಲೈಜ​ರ್‍ಸ್ನಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ‘ಪ್ರಧಾನ ಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರಗಳು’ ರಾಜ್ಯದ 43 ಕಡೆ ಉದ್ಘಾಟನೆಗೊಳ್ಳಲಿವೆ. ಈ ಪೈಕಿ ಬಳ್ಳಾರಿಯೂ ಸಹ ಒಂದು. ಇಲ್ಲಿ ಸಿಗುವಂತಹ ಎಲ್ಲಾ ರಸಗೊಬ್ಬರಗಳು ಭಾರತ್‌ ಬ್ರ್ಯಾಂಡ್‌ಗಳಲ್ಲಿ ದೊರೆಯಲಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಯೂರಿಯಾ ಗೊಬ್ಬರ 1 ಚೀಲಕ್ಕೆ .1666ಗಳಿಷ್ಟಿದ್ದು ಕಿಸಾನ್‌ ಸಮೃದ್ಧಿ ಕೇಂದ್ರದಲ್ಲಿ ಬರೀ .266ಗೆ ದೊರೆಯಲಿದೆ. ಇನ್ನುಳಿದ .1400ಗಳನ್ನು ಸಬ್ಸಿಡಿ ರೂಪದಲ್ಲಿ ಕೇಂದ್ರ ಸರ್ಕಾರ ನೀಡಲಿದೆ. ಅದರಂತೆಯೇ 1 ಚೀಲ ಡಿಎಪಿ ಗೊಬ್ಬರಕ್ಕೆ ದರ .3850ಗೆ ಕೇಂದ್ರ ಸರ್ಕಾರ .2500 ಸಬ್ಸಿಡಿ ನೀಡಲಿದೆ. ಅಂದರೆ ಬರೀ .1350ಗಳಿಗೆ ಒಂದು ಚೀಲ ಡಿಎಪಿ ಸಿಗಲಿದೆ. ಹೀಗೆ ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಕಿಸಾನ್‌ ಸಮೃದ್ಧಿ ಕೇಂದ್ರದಲ್ಲಿ ಸಬ್ಸಿಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಇನ್ಮುಂದೆ ಒಂದೇ ಅಂಗಡಿಯಲ್ಲಿ ಎಲ್ಲಾ ತರಹದ ರಸಗೊಬ್ಬರಗಳು, ಔಷಧಿಗಳು, ಕೃಷಿ-ಪರಿಕರಗಳು ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳು, ಕೀಟ ನಾಶಕಗಳು ಸೇರಿದಂತೆ ಇನ್ನಿತರೆ ಕೃಷಿ ಪೂರಕ ವಸ್ತುಗಳನ್ನು ಸಕಾಲದಲ್ಲಿ ಸೂಕ್ತ ಬೆಲೆಗಳಲ್ಲಿ ಒದಗಿಸಿಕೊಡುವುದೇ ರಾಜ್ಯದ ಪ್ರಧಾನಮಂತ್ರಿ ಕಿಸಾನ್‌ ಸಮೃದ್ಧಿ ಕೇಂದ್ರ ಯೋಜನೆಯ ಮುಖ್ಯ ಉದ್ದೇಶವಾಗಿದೆ. 

ಹಾವೇರಿ: ಶಿಗ್ಗಾಂವಿ ಜನರ ಋುಣದಲ್ಲಿದ್ದೇನೆ, ಸಿಎಂ ಬೊಮ್ಮಾಯಿ

ಇದರ ಜೊತೆಗೆ ಕೇಂದ್ರದಲ್ಲಿ ಮಣ್ಣು, ಬೀಜ, ರಸಗೊಬ್ಬರ ವಿಶ್ಲೇಷಣೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ರೈತರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ, ವಿವಿಧ ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಬೇಸಾಯಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ ಕುರಿತು ರೈತರಿಗೆ ಕೇಂದ್ರದಲಿ ತಿಳಿಸಿಕೊಡಲಾಗುವುದು. ಕೇಂದ್ರದಿಂದ ರೈತಾಪಿ ಜನರು ಹೆಚ್ಚು ಅನುಕೂಲ ಪಡೆದುಕೊಳ್ಳಲು ಸಾಧ್ಯವಿದ್ದು ಸದುಪಯೋಗ ಪಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಂಡುಕೊಳ್ಳಬೇಕು ಎಂದು ಹೇಳಿದರು.

Follow Us:
Download App:
  • android
  • ios