Asianet Suvarna News Asianet Suvarna News

ಸಿಎಂ ವಿರುದ್ಧ ಷಡ್ಯಂತ್ರ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ರಾಮುಲು ಖಡಕ್ ವಾರ್ನಿಂಗ್

ಖಾಸಗಿ ಆಸ್ಪತ್ರೆ ಗಳ ಧೋರಣೆ ಗಮನಿಸಿದ್ರೆ ರಾಜಕೀಯ ಷಡ್ಯಂತ್ರ ಮಾಡಿದಂಗೆ ಅನಿಸುತ್ತಿದೆ. ನಮ್ಮ ಸಿಎಂ ಮೇಲೆ ಷಡ್ಯಂತ್ರ ಮಾಡಲಾಗ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Minister b sriramulu warns private hospitals against charging high bill for covid19 patients
Author
Bangalore, First Published Jul 30, 2020, 1:09 PM IST

ಬೆಂಗಳೂರು(ಜು.30): ಖಾಸಗಿ ಆಸ್ಪತ್ರೆ ಗಳ ಧೋರಣೆ ಗಮನಿಸಿದ್ರೆ ರಾಜಕೀಯ ಷಡ್ಯಂತ್ರ ಮಾಡಿದಂಗೆ ಅನಿಸುತ್ತಿದೆ. ನಮ್ಮ ಸಿಎಂ ಮೇಲೆ ಷಡ್ಯಂತ್ರ ಮಾಡಲಾಗ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆ ಗಳ ಧೋರಣೆ ಗಮನಿಸಿದರೆ ರಾಜಕೀಯ ಷಡ್ಯಂತ್ರ ಮಾಡಿದಂತಿದೆ. ಈ ರೀತಿಯ ಅನುಮಾನ ಬರುವಂತಿದೆ ಆಸ್ಪತ್ರೆ ವರ್ತನೆ. ಖಾಸಗಿ ಆಸ್ಪತ್ರೆಯ ವರ್ತನೆ ಸಹಿಸೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಧನದಾಹಿ ಆಸ್ಪತ್ರೆಗಳಿಗೆ ಬ್ರೇಕ್: ಸಚಿವ ಸುಧಾಕರ್‌ಗೆ ಡಿಐಜಿ ರೂಪಾ ಹೊಸ ರಿಕ್ವೆಸ್ಟ್..!

ಸುವರ್ಣ ನ್ಯೂಸ್ ಬೆಳಕಿಗೆ ತಂದಿರುವ ವಿಚಾರ ಗಂಭೀರವಾಗಿ ಪರಿಗಣಿಸುತ್ತೇನೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪೆಸಗಿರುವ ಖಾಸಗಿ ಆಸ್ಪತ್ರೆ ಮೇಲೆ ಕ್ರಮ ಜರುಗಿಸುವಲ್ಲಿ ಹಿಂದೇಟು ಹಾಕಲ್ಲ ಎಂದು ಹೇಳಿದ್ದಾರೆ.

ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗಿರೋ ಮಾಹಿತಿ ಪಟ್ಟಿ ಮಾಡ್ಕೊಂಡಿದ್ದೇನೆ. ಎಲ್ಲಾ ತಪ್ಪಿತಸ್ಥ ಖಾಸಗಿ ಆಸ್ಪತ್ರೆಯ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಹೆಚ್ಚು ಹಣ ವಸೂಲಿ ಮಾಡಿದರೇ ಕ್ರಿಮಿನಲ್‌ ಕೇಸ್‌: ಐಜಿಪಿ ರೂಪಾ

ನಮ್ಮ ಸಿಎಂ ಮೇಲೆ ಷಡ್ಯಂತ್ರ ಮಾಡಲಾಗ್ತಿದೆ. ಸರ್ಕಾರ ಹೇಳಿದ್ರೂ ಕೇಳ್ತಿಲ್ಲ ನೀವು.ಮಾನವೀಯತೆ ನಿಮಗೆ ಇದ್ದಂಗಿಲ್ಲ‌. ಎಲ್ಲಾ ಕಮರ್ಷಿಯಲ್ ಆಗಿ ನೋಡಬಾರದು. ನೀವು ಸಹಕಾರ ಕೊಡಲೇಬೇಕು. ಇದು ಮನವಿ ಅಂತಾನಾದ್ರೂ ತಿಳ್ಕೊಳ್ಳಿ. ಆದೇಶನಾದ್ರೂ ತಿಳ್ಕೊಳ್ಳಿ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನಮ್ಮ ಮೆಟ್ರೋಗೆ ನಿರ್ಬಂಧ ಮುಂದುವರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲವೂ ಅನ್ ಲಾಕ್ ಆಗುತ್ತಿದೆ. ಮುಂದಿನ ಹಂತದಲ್ಲಿ ನಮ್ಮ ಮೆಟ್ರೋ ಸಹ ಅನ್ ಲಾಕ್ ಆಗುತ್ತೆ. ಮೆಟ್ರೋ ಆರಂಭಕ್ಕೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತೆ. ಇದರ ಬಗ್ಗೆ ಕೇಂದ್ರದ ಗಮನಕ್ಕೆ ತರುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios