ಬೆಂಗಳೂರು(ಜು.30): ರೋಗಿಗೆ 24 ಲಕ್ಷ ರೂಪಾಯಿ ವಾಪಾಸ್ ಮರಳಿಸುವಂತೆ ಮಾಡಿ ಸದ್ದು ಮಾಡಿದ ಡಿಐಜಿ ರೂಪಾ ಧನದಾಹಿ ಆಸ್ಪತ್ರೆಗಳಿಗೆ ಬ್ರೇಕ್ ಹಾಕೋಕೆ ಸಿದ್ಧರಾಗಿದ್ದಾರೆ. ಈ ನಿಟ್ಟಿನಲ್ಲಿ ರೂಪಾ ಅವರು ಈಗಾಗಲೇ ತಮ್ಮ ಕೋರಿಕೆ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ.

ಖಾಸಗಿ ಆಸ್ಪತ್ರೆಗಳ ಧನದಾಹಕ್ಕೆ ಕಡಿವಾಣ ಹಾಕಲು ಉತ್ಸಕರಾದ ಡಿಐಜಿ ರೂಪಾ  ನಗರದ ಎಲ್ಲಾ ಆಸ್ಪತ್ರೆಗಳ ಮೇಲೆ ಜವಾಬ್ದಾರಿ ನೀಡಲು ಮನವಿ ಮಾಡಿದ್ದಾರೆ. ನನಗೆ ಹಾಗೂ ಹರ್ಷಗುಪ್ತ ಅವರಿಗೆ ನಗರದ ಎಲ್ಲಾ ಆಸ್ಪತ್ರೆಗಳ ಜವಾಬ್ದಾರಿ ನೀಡಿ ಎಂದು ಅವರು ಟ್ವಿಟರ್‌ ಮೂಲಕ ಮನವಿ ಮಾಡಿದ್ದಾರೆ.

ಹೆಚ್ಚು ಹಣ ವಸೂಲಿ ಮಾಡಿದರೇ ಕ್ರಿಮಿನಲ್‌ ಕೇಸ್‌: ಐಜಿಪಿ ರೂಪಾ

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ಗೆ ಟ್ವಿಟರ್ ಮೂಲಕ ಮನವಿ ಮಾಡಿದ್ದು, ಈಗ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿದ್ದೇವೆ. ಇನ್ನಷ್ಟು ಅಧಿಕಾರ ನೀಡಿ ಎಂದು ಮನವಿ ಮಾಡಿದ್ದಾರೆ.

ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ 24 ಲಕ್ಷ ಹಣವನ್ನು ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಮರಳಿಸಿದ ಘಟನೆ ಇತ್ತೀಚೆಗಷ್ಟೇ ವರದಿಯಾಗಿತ್ತು.

ಮಿಸ್ ದಾವಣೆಗೆರೆ ಆಗಿದ್ರು ಈ ಖಡಕ್ ಐಪಿಎಸ್ ಅಧಿಕಾರಿ!

ಕೊರೋನಾ ಸೋಂಕಿತರಿಂದ ಹಣ ಸುಲಿಗೆ ಮಾಡಿದ್ದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಖಡಕ್‌ ಅಧಿಕಾರಿ ಡಿ,ರೂಪಾ ಅವರಿಗೆ ಟ್ವಿಟರ್‌ನಲ್ಲಿ ಅಭಿನಂದನೆಗಳ ಸುರಿಮಳೆಯಾಗಿತ್ತು. ಖಾಸಗಿ ಆಸ್ಪತ್ರೆ ಸೋಂಕಿತರಿಗೆ ಹಣ ಮರಳಿಸಿರುವ ಬಗ್ಗೆ ರೂಪಾ ಅವರು, ಟ್ವೀಟ್‌ ಮಾಡಿದ್ದರು. ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.