'ಬಾದಾಮೀಲೂ ಸಿದ್ದರಾಮಯ್ಯ ಸೋಲೋದು ಖಚಿತ'
ಸಿದ್ದರಾಮಯ್ಯ ಹೇಳಿಕೆಗೆ ಸಾಕಷ್ಟು ವಿರೋಧವಿದೆ| ಸಿದ್ದರಾಮಯ್ಯ ಕೊಡಗಿನ ಜನರ ಕ್ಷಮೆಯಾಚಿಸಬೇಕು| ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಅಸ್ತಿತ್ವ ಉಳಿಸಿಕೊಳ್ಳಲಿಲ್ಲ| ಬಾದಾಮಿಯಲ್ಲಿ ನಾನು ಮತ್ತೆ ಸ್ಪರ್ಧಿಸಲು ಸಿದ್ಧನಿದ್ದೇನೆ: ಶ್ರೀರಾಮುಲು|
ಗುಳೇದಗುಡ್ಡ(ಡಿ.25): ಚಾಮುಂಡೇಶ್ವರಿ ಕ್ಷೇತ್ರದಂತೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲುವುದು ಖಚಿತ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.
ಗುರುವಾರ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಬಿಜೆಪಿ ಕಾರ್ಯಕರ್ತರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಅಸ್ತಿತ್ವ ಉಳಿಸಿಕೊಳ್ಳಲಿಲ್ಲ. ಬಾದಾಮಿಯಲ್ಲಿ ನಾನು ಮತ್ತೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದರು.
HDK ಹಣಿಯಲು ಸಿದ್ದು 'ರಾಮ' ವ್ಯೂಹ.. ಏನಿದು ಪ್ಲಾನ್!
ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಉಪಮುಖ್ಯಮಂತ್ರಿಯಾದರು. ಅಲ್ಲಿ ಪಕ್ಷವನ್ನು ಬೈದುಕೊಂಡೇ ದೊಡ್ಡವರಾದವರು. ಈಗ ಕಾಂಗ್ರೆಸ್ಸಿನಲ್ಲಿ ಅದನ್ನೇ ಮಾಡುತ್ತಿದ್ದಾರೆ. ತಮ್ಮ ಸೋಲಿಗೆ ಕೆಲ ಸ್ವಪಕ್ಷಿಯರೇ ಕಾರಣ ಎಂದು ಹೇಳುತ್ತಿದ್ದಾರೆ. ಒಮ್ಮೆ ಹಾಗಾದರೆ ಅವರು ಕಾಂಗ್ರೆಸ್ ಬಿಟ್ಟು ಹೊರಬರಬೇಕಿತ್ತು ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಇದೆ ವೇಳೆ ಸಿದ್ದರಾಮಯ್ಯ ಅವರು ಕೊಡಗಿನ ಜನರು ಗೋಮಾಂಸ ತಿನ್ನುತ್ತಾರೆ ಎಂದಿರುವ ಕುರಿತು ಮಾತನಾಡಿದ ಅವರು, ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧವಿದೆ. ಸಿದ್ದರಾಮಯ್ಯ ಅವರು ಕೊಡಗಿನ ಜನರ ಕ್ಷಮೆಯಾಚಿಸಬೇಕು ಎಂದು ಹೇಳಿದರು.