ಕೊಪ್ಪಳ(ಡಿ.29): ಪೇಜಾವರ ವಿಶ್ವೇಶತೀರ್ಥರು ದೇವರ ಸಮಾನರು. ಅವರ ಕೊಡುಗೆ ಅಪಾರವಾದದ್ದು, ಇಷ್ಟು ಬೇಗನೆ ಅಗಲಿ ಹೋಗ್ತಾರೆ ಎಂದು ನಾವು ತಿಳಿದುಕೊಂಡಿರಲಿಲ್ಲ ಎಂದು ಶ್ರೀಗಳ ಅಗಲಿಕೆಗೆ ಸಚಿವ ಶ್ರೀರಾಮಲು ಸೂಚಿಸಿದ್ದಾರೆ. 

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಸ್ತಂಗತ

ಭಾನುವಾರ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್‌ನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಗುರುಗಳ ಒಡನಾಟ ನಮ್ಮೊಂದಿಗೆ ಬಹಳ ಇತ್ತು. 2014 ರಿಂದಲೂ ಅವರು ನನಗೆ ಆಶೀರ್ವಾದ ಮಾಡುತ್ತಾ ಬಂದಿದ್ದರು. ಸಮಾಜದ ಹೋರಾಟದಲ್ಲಿ ಗುರುಗಳು ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. 

ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಶ್ರೀಗಳ ಅಂತ್ಯಸಂಸ್ಕಾರ

ಶ್ರೀಗಳು ಎಲ್ಲ ಸಮಾಜದವರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಶ್ರೀಗಳು ನಮ್ಮನ್ನ ಬಿಟ್ಟು ಅಗಲಿಲ್ಲ, ಅವರು ನಮ್ಮ ಮದ್ಯೆ ಇರ್ತಾರೆ, ಅವರ ತೋರಿದ ಮಾರ್ಗದರ್ಶನದಲ್ಲಿ ನಾವು ನಡಿತೀವಿ ಎಂದ ಸಚಿವ ರಾಮಲು ಅವರು ತಿಳಿಸಿದ್ದಾರೆ. 

"