Asianet Suvarna News Asianet Suvarna News

ಕೊರೋನಾ ಕಾಟ: 'ಬೆಂಗಳೂರಲ್ಲಿ 10 ಸಾವಿರ ಹಾಸಿಗೆ ಚಿಕಿತ್ಸೆಗೆ ಮೀಸಲು'

ಸೋಂಕು ಲಕ್ಷಣಗಳಿದಿದ್ದರೂ ಪಾಸಿಟಿವ್‌ ವರದಿಗಳು ಬರುತ್ತಿವೆ|ಬೆಂಗಳೂರಲ್ಲಿ ಪ್ರತಿನಿತ್ಯ ಸೋಂಕಿನ ಪ್ರಕರಣಗಳು ಅಧಿಕಗೊಳ್ಳುತ್ತಿವೆ| ಜನರು ಯಾವುದೇ ರೀತಿಯಲ್ಲಿಯೂ ಭಯಗೊಳ್ಳಬೇಕಾದ ಅಗತ್ಯ ಇಲ್ಲ| 

Minister B Sriramulu Talks Over Corona Treatment in Bengaluru
Author
Bengaluru, First Published Jul 3, 2020, 8:10 AM IST

ಬೆಂಗಳೂರು(ಜು.03): ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ 10 ಸಾವಿರ ಹಾಸಿಗೆಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋಂಕು ಲಕ್ಷಣಗಳಿದಿದ್ದರೂ ಪಾಸಿಟಿವ್‌ ವರದಿಗಳು ಬರುತ್ತಿವೆ. ಬೆಂಗಳೂರಲ್ಲಿ ಪ್ರತಿನಿತ್ಯ ಸೋಂಕಿನ ಪ್ರಕರಣಗಳು ಅಧಿಕಗೊಳ್ಳುತ್ತಿವೆ. ಇದರಿಂದ ಹಾಸಿಗೆ ಲಭ್ಯವಾಗುತ್ತಿಲ್ಲ ಎಂದು ಜನರು ಭೀತಿಗೊಳಗಾಗಿದ್ದಾರೆ. ಆದರೆ, ಜನರು ಯಾವುದೇ ರೀತಿಯಲ್ಲಿಯೂ ಭಯಗೊಳ್ಳಬೇಕಾದ ಅಗತ್ಯ ಇಲ್ಲ. ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, 10 ಸಾವಿರ ಹಾಸಿಗೆಗಳನ್ನು ಮೀಸಲಿಡಲು ತೀರ್ಮಾನಿಸಿದೆ ಎಂದು ಹೇಳಿದರು.

ಮತ್ತೆ ಲಾಕ್‌ಡೌನ್‌ ಸಾಧ್ಯವಿಲ್ಲ: ಸಚಿವ ಶ್ರೀರಾಮುಲು

ಬೆಂಗಳೂರಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಕೆಲವೆಡೆ ಸಮಸ್ಯೆಗಳು ಕಂಡು ಬರುತ್ತಿದ್ದು, ಅವುಗಳನ್ನು ಸರಿಪಡಿಸಲಾಗುವುದು. ಎಲ್ಲಿಯೂ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
 

Follow Us:
Download App:
  • android
  • ios