ಸಿದ್ದರಾಮಯ್ಯಗೆ ಕಾನೂನಿನ ಅರಿವು, ಇದೆಯೋ ಇಲ್ಲವೋ ತಿಳಿದಿಲ್ಲ| ಕಾನೂನು ತಜ್ಞರಿಂದ ಮಾಹಿತಿ ಪಡೆಯಲಿ ಎಂದು ಟೀಕಿಸಿದ ರಾಮುಲು| ಈಶ್ವರಪ್ಪ ಹಾಗೂ ಯಡಿಯೂರಪ್ಪ ಗೆಳೆಯರು. ಚುನಾವಣೆ ಬಳಿಕೆ ಗೋಡೆಗಳ ಮಧ್ಯೆ ಕುಳಿತ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ನಂಬಿಕೆಯಿದೆ ಎಂದ ಸಚಿವ ಶ್ರೀರಾಮುಲು| 

ಮಸ್ಕಿ(ಏ.03):  ಸಚಿವ ಕೆ.ಎಸ್‌.ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಮಾತ್ರಕ್ಕೆ ಸರ್ಕಾರವನ್ನು ವಜಾಗೊಳಿಸಬೇಕೆಂದು ಏನಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ. 

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನಿನ ಅರಿವು, ಇದೆಯೋ ಇಲ್ಲವೋ ತಿಳಿದಿಲ್ಲ. ಕಾನೂನು ತಜ್ಞರಿಂದ ಮಾಹಿತಿ ಪಡೆಯಲಿ ಎಂದು ಟೀಕಿಸಿದರು. ಈಶ್ವರಪ್ಪ ಹಾಗೂ ಯಡಿಯೂರಪ್ಪ ಗೆಳೆಯರು. ಚುನಾವಣೆ ಬಳಿಕೆ ಗೋಡೆಗಳ ಮಧ್ಯೆ ಕುಳಿತ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ನಂಬಿಕೆಯಿದೆ ಎಂದರು.

ಮತದಾರರನ್ನು ಓಲೈಸಲು ಕಾಂಗ್ರೆಸ್‌ ಹಣ, ಹೆಂಡದ ಮೊರೆ: ವಿಜಯೇಂದ್ರ

ಹಿಂದಿನ ಸರ್ಕಾರದಲ್ಲಿಯೂ ಹಸ್ತಕ್ಷೇಪದ ಆರೋಪಗಳು ಕೇಳಿ ಬಂದಿದ್ದವು. ಎಸ್‌.ಎಂ.ಕೃಷ್ಣ ಸಿಎಂ ಆದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆದ ಸಂದರ್ಭದಲ್ಲಿ ಎಚ್‌.ಡಿ.ರೇವಣ್ಣ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಆರೋಪಗಳಿದ್ದವು. ಅಂದು ಯಾಕೆ ಸಿದ್ದರಾಮಯ್ಯ ಸರ್ಕಾರ ವಜಾಗೊಳಿಸಲು ಆಗ್ರಹಿಸಲಿಲ್ಲ ಎಂದು ಪ್ರಶ್ನಿಸಿದರು.