ಮತದಾರರನ್ನು ಓಲೈಸಲು ಕಾಂಗ್ರೆಸ್ ಹಣ, ಹೆಂಡದ ಮೊರೆ: ವಿಜಯೇಂದ್ರ
ಮುದಗಲ್(ಏ.03): ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

<p>ಮಸ್ಕಿ ಉಪಚುನಾವಣೆ ನಿಮಿತ್ತ ಮುದಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಮತದಾರರನ್ನು ಓಲೈಸಲು ಕಾಂಗ್ರೆಸ್ ಹಣ, ಹೆಂಡದ ಮೊರೆ ಹೋಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಈಗಿನ ಉಪಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.</p>
ಮಸ್ಕಿ ಉಪಚುನಾವಣೆ ನಿಮಿತ್ತ ಮುದಗಲ್ ಪಟ್ಟಣದಲ್ಲಿ ಮಾತನಾಡಿದ ಅವರು, ಮತದಾರರನ್ನು ಓಲೈಸಲು ಕಾಂಗ್ರೆಸ್ ಹಣ, ಹೆಂಡದ ಮೊರೆ ಹೋಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಈಗಿನ ಉಪಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ತಿಳಿಸಿದ್ದಾರೆ.
<p>ಮಸ್ಕಿ ಉಪಚುನಾವಣೆಗೆ ಪಕ್ಷದ ವರಿಷ್ಠರು ನನಗೆ ನೀಡಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ಇಂದಿನಿಂದ ಉಪಚುನಾವಣೆ ಪ್ರಚಾರ ಕಾರ್ಯ ಆರಂಭಿಸಿದ್ದು, ಮುದಗಲ್ ಪಟ್ಟಣದಲ್ಲಿಯೇ ವಾಸ್ತವ್ಯ ಮಾಡಿ ಅಖಾಡಕ್ಕೆ ರೂಪುರೇಷಗಳನ್ನು ಮಾಡಲಾಗುವುದು ಎಂದರು.</p>
ಮಸ್ಕಿ ಉಪಚುನಾವಣೆಗೆ ಪಕ್ಷದ ವರಿಷ್ಠರು ನನಗೆ ನೀಡಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ಇಂದಿನಿಂದ ಉಪಚುನಾವಣೆ ಪ್ರಚಾರ ಕಾರ್ಯ ಆರಂಭಿಸಿದ್ದು, ಮುದಗಲ್ ಪಟ್ಟಣದಲ್ಲಿಯೇ ವಾಸ್ತವ್ಯ ಮಾಡಿ ಅಖಾಡಕ್ಕೆ ರೂಪುರೇಷಗಳನ್ನು ಮಾಡಲಾಗುವುದು ಎಂದರು.
<p>ಈ ಸಂದರ್ಭದಲ್ಲಿ ಹಟ್ಟಿಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಸುರಪುರ ಶಾಸಕ ರಾಜೂಗೌಡ, ಹಾಸನ ಶಾಸಕ ಪ್ರೀತಂ ಗೌಡರು, ಕುರಿ ಉಣ್ನೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಇದ್ದರು.</p>
ಈ ಸಂದರ್ಭದಲ್ಲಿ ಹಟ್ಟಿಚಿನ್ನದ ಗಣಿ ಕಂಪನಿಯ ಅಧ್ಯಕ್ಷ ಮಾನಪ್ಪ ವಜ್ಜಲ್, ಸುರಪುರ ಶಾಸಕ ರಾಜೂಗೌಡ, ಹಾಸನ ಶಾಸಕ ಪ್ರೀತಂ ಗೌಡರು, ಕುರಿ ಉಣ್ನೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಇದ್ದರು.
<p>ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ಕುರಿತು ಶೀರ್ಘವೇ ಈಶ್ವರಪ್ಪರೊಂದಿಗೆ ಚರ್ಚಿಸಿ ಪರಿಹಸಿಕೊಳ್ಳಲಾಗುವುದು. ಕೆಲ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಿಡಿ ಪ್ರಕರಣವು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಕರಣವು ಎಸ್‌ಐಟಿ ತನಿಖೆಯಡಿಯಲ್ಲಿದ್ದು, ವರದಿ ಸಲ್ಲಿಕೆ ಬಳಿಕ ಸತ್ಯ ಬಹಿರಂಗವಾಗಲಿದೆ. ಯಾರನ್ನು ಬಂಧಿಸಬೇಕು ಎನ್ನುವುದು ತನಿಖಾ ತಂಡವೇ ತೀರ್ಮಾನಿಸುತ್ತದೆ ಎಂದರು.</p>
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಈ ಕುರಿತು ಶೀರ್ಘವೇ ಈಶ್ವರಪ್ಪರೊಂದಿಗೆ ಚರ್ಚಿಸಿ ಪರಿಹಸಿಕೊಳ್ಳಲಾಗುವುದು. ಕೆಲ ಭಿನ್ನಾಭಿಪ್ರಾಯಗಳನ್ನು ಕುಳಿತು ಬಗೆಹರಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಿಡಿ ಪ್ರಕರಣವು ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ಪ್ರಕರಣವು ಎಸ್‌ಐಟಿ ತನಿಖೆಯಡಿಯಲ್ಲಿದ್ದು, ವರದಿ ಸಲ್ಲಿಕೆ ಬಳಿಕ ಸತ್ಯ ಬಹಿರಂಗವಾಗಲಿದೆ. ಯಾರನ್ನು ಬಂಧಿಸಬೇಕು ಎನ್ನುವುದು ತನಿಖಾ ತಂಡವೇ ತೀರ್ಮಾನಿಸುತ್ತದೆ ಎಂದರು.