Asianet Suvarna News Asianet Suvarna News

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ: ಸಚಿವ ಆನಂದ್‌ ಸಿಂಗ್‌

*  464 ಕೋಟಿ ವೆಚ್ಚದ ಕಾಮಗಾರಿಗೆ ನಾಳೆ ಚಾಲನೆ ನೀಡುವ ಮುಖ್ಯಮಂತ್ರಿ
*  ಹೊಸ ಜಿಲ್ಲೆಯಲ್ಲಿ ಅಭಿವೃದ್ಧಿ ಮಂತ್ರ ಜಪ
*  ಒಟ್ಟು 55 ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ 
 

Minister Anand Singh Talks Over Development in the Vijayanagara district grg
Author
Bengaluru, First Published Oct 1, 2021, 2:14 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಅ.01):  ನೂತನ ವಿಜಯನಗರ(Vijayanagara) ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಹೊಸ ಜಿಲ್ಲೆಗೆ 464 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಬಂಪರ್‌ ಗಿಫ್ಟ್‌ ಅನ್ನು ರಾಜ್ಯ ಸರ್ಕಾರ ದಯಪಾಲಿಸುತ್ತಿದೆ. ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಅ. 2ರಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ 55 ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ಐತಿಹಾಸಿಕ ಜಿಲ್ಲೆಗೆ ಅಭಿವೃದ್ಧಿ ಸ್ಪರ್ಶ ನೀಡಲು ಹೊರಟಿದೆ.

ಯಾವ್ಯಾವ ಕಾಮಗಾರಿಗೆ ಚಾಲನೆ:

ನಗರದ ಹಂಪಿ(Hampi) ರಸ್ತೆಯಿಂದ ಬಳ್ಳಾರಿ(Ballari) ರಸ್ತೆ ವರೆಗೆ (ಬೈಪಾಸ್‌) ಚತುಷ್ಪಥರಸ್ತೆ ನಿರ್ಮಾಣ 11 ಕೋಟಿ, ನಗರದಲ್ಲಿ 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ 11 ಕೋಟಿ, ನಗರದ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾಮಗಾರಿಗೆ 10 ಕೋಟಿ, ಹಂಪಿಯಿಂದ ವಯಾ ಕಮಲಾಪುರ ಪಾಪಿನಾಯಕನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿಗೆ 10 ಕೋಟಿ, ನಗರದಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ 9 ಕೋಟಿ, ವೆಂಕಟಾಪುರದಿಂದ ಪಂಪಾ ವಿದ್ಯಾಪೀಠ ವಿಜಯನಗರ ಕ್ಷೇತ್ರದ ಕೊನೆಯ ಭಾಗದವರೆಗೆ ರಸ್ತೆ ಅಭಿವೃದ್ಧಿಗೆ 8.25 ಕೋಟಿ ಕಾಮಗಾರಿಗಳು ಸೇರಿದಂತೆ 24 ಕಾಮಗಾರಿಗಳು 99.66 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿವೆ. ಈ ಕಾಮಗಾರಿಗಳು ಸ್ವತಃ ಮುಖ್ಯಮಂತ್ರಿ ಅವರೇ ಉದ್ಘಾಟಿಸಲಿದ್ದಾರೆ.

ಹೊಸಪೇಟೆ: ವಿಜಯನಗರ ಉದಯಕ್ಕೆ ಭವ್ಯ ವೇದಿಕೆ..!

ಹೊಸ ಕಾಮಗಾರಿಗಳು:

ನಗರದ ಹೊಸಪೇಟೆ-ಬಳ್ಳಾರಿ ರಸ್ತೆ ಕಾಲುವೆಯಿಂದ ಇಂಗಳಗಿ ಕ್ರಾಸ್‌ ವರೆಗೆ ರಸ್ತೆ ಅಭಿವೃದ್ಧಿ 30 ಕೋಟಿ, ಹಂಪಿ ರಸ್ತೆಯ ಅನಂತಶಯನ ಗುಡಿಯಿಂದ ಕಮಲಾಪುರ ವರೆಗೆ ಚತುಷ್ಪಥರಸ್ತೆ ಅಭಿವೃದ್ಧಿ 30 ಕೋಟಿ, ನಗರದಲ್ಲಿ 250 ಹಾಸಿಗೆ ಆಸ್ಪತ್ರೆ ನಿರ್ಮಾಣ 105 ಕೋಟಿ ವೆಚ್ಚದಲ್ಲಿ, ಹೊಸಪೇಟೆ ನಗರದ ಅನಂತಶಯನ ಗುಡಿ ರೈಲ್ವೆಗೇಟ್‌ಗೆ ಮೇಲ್ಸೇತುವೆ ನಿರ್ಮಾಣ 26 ಕೋಟಿ ವೆಚ್ಚದಲ್ಲಿ, ಹೊಸಪೇಟೆ ನಗರದಲ್ಲಿ ಬಾಲಕಿಯರ ಶಾಲೆ, ಬಾಲಕಿಯರ ಪದವಿ ಪೂರ್ವ ಕಾಲೇಜ್‌ ಮತ್ತು ಮುನ್ಸಿಪಲ್‌ ಬಾಲಕಿಯರ ಶಾಲೆ ಕಟ್ಟಡ 24 ಕೋಟಿ ಸೇರಿದಂತೆ 364.22 ಕೋಟಿ ವೆಚ್ಚದ ಒಟ್ಟು 55 ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಶುರುವಾಗಿವೆ. ಹಂಪಿಯ ಸ್ಮಾರಕಗಳನ್ನು ಜಿರ್ಣೋದ್ಧಾರಗೊಳಿಸುವ ಕಾರ್ಯಕ್ಕೂ ಸರ್ಕಾರ ಯೋಜನೆ ರೂಪಿಸಿದೆ. ಇನ್ನೂ ಪಾಪಿನಾಯಕನಹಳ್ಳಿ ಬಳಿ 250 ಕೋಟಿ ವೆಚ್ಚದಲ್ಲಿ ಈಗಾಗಲೇ ಏತ ನೀರಾವರಿ ಕಾಮಗಾರಿ ನಡೆದಿದೆ. ಈ ಯೋಜನೆಗೆ ಇನ್ನೂ 250 ಕೋಟಿ ಬೇಡಿಕೆಯನ್ನು ಸಚಿವ ಆನಂದ್‌ ಸಿಂಗ್‌ ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಇನ್ನೂ ಹಂಪಿ ಉತ್ಸವಕ್ಕೆ ಪ್ರತಿ ವರ್ಷ 10 ಕೋಟಿ ನಿಗದಿಗೊಳಿಸಲು ಸಚಿವ ಆನಂದ್‌ ಸಿಂಗ್‌(Anand Singh) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯದ ನೂತನ ಜಿಲ್ಲೆಯಾಗಿರುವ ವಿಜಯನಗರಕ್ಕೆ ಡಿಸಿ, ಎಸ್ಪಿ ನೇಮಿಸಿದ ಸರ್ಕಾರ

ಹೊಸ ಜಿಲ್ಲೆಗೆ ಜಿಲ್ಲಾಡಳಿತ ಕಚೇರಿ, ಮೆಡಿಸಿಟಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಇನ್ನಷ್ಟು ಅನುದಾನ ಒದಗಿಸಲು ಸರ್ಕಾರಕ್ಕೆ ಕೋರಿದ್ದಾರೆ. ಇದಕ್ಕೆ ಸಿಎಂ ಪೂರಕವಾಗಿ ಸ್ಪಂದಿಸಿ ಇನ್ನಷ್ಟು ಅನುದಾನ ಹೊಸ ಜಿಲ್ಲೆಗೆ ಘೋಷಣೆ ಮಾಡಲಿದ್ದಾರೆ ಎಂಬ ಆಶಯವೂ ಮೊಳೆತಿದೆ.

ವಿಜಯನಗರ ಜಿಲ್ಲೆಯಲ್ಲಿ 464 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆಗೆ ಅಭಿವೃದ್ಧಿ ಕೊಡುಗೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios