ಬೊಮ್ಮಾಯಿ, ಯಡಿಯೂರಪ್ಪನವರ ಕೈಗೊಂಬೆನಾ? ಆನಂದ ಸಿಂಗ್ ಹೇಳಿದ್ದಿಷ್ಟು
* ಗಣೇಶ ಚತುರ್ಥಿಯಂದು ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ
* ಸುರಪುರ ಶಾಸಕ ರಾಜುಗೌಡಗೆ ಸಚಿವ ಸ್ಥಾನ ನೀಡುವುದು ಔಚಿತ್ಯಪೂರ್ಣ
* ಸರ್ಕಾರಕ್ಕೆ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ
ಹೊಸಪೇಟೆ(ಆ.07): ಬಿ.ಎಸ್.ಯಡಿಯೂರಪ್ಪ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಡಿಯೂರಪ್ಪ ಹಿರಿಯ, ಮುತ್ಸದಿ ನಾಯಕರು. ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿಬೆಳೆಸಿದವರು. ಸರ್ಕಾರಕ್ಕೆ ಅವರ ಮಾರ್ಗದರ್ಶನ ಇದ್ದೇ ಇರುತ್ತದೆ. ಅಂದ ಮಾತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರ ಕೈಗೊಂಬೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯಾವುದಾರೂ ಖಾತೆ ನೀಡಿದರೂ ಸರಿ ನಿಭಾಯಿಸುತ್ತೇನೆ. ಅಭಿವೃದ್ಧಿ ಸಲುವಾಗಿ ಪ್ರಮುಖ ಖಾತೆಯನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಕೇಳಿದ ಖಾತೆ ನೀಡಿದರೆ ಮತಷ್ಟು ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ. ಇಂತಹದ್ದೇ ಖಾತೆ ಎಂದು ಬಹಿರಂಗ ಪಡಿಸಲು ಆಗುವುದಿಲ್ಲ ಎಂದರು.
ಕೇಳಿದ ಖಾತೆ ಕೊಟ್ಟಿಲ್ಲ: ರಾಜೀನಾಮೆ ಬಗ್ಗೆ ಮಾತನಾಡಿದ ಸಚಿವ ಸಿಂಗ್!
ಚೌತಿಯಂದು ನೂತನ ಜಿಲ್ಲೆಗೆ ಚಾಲನೆ:
ಗಣೇಶ ಚತುರ್ಥಿಯಂದು ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಗೆ ಅದ್ಧೂರಿ ಸಮಾರಂಭ ನಡೆಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿ ಸೇರಿದಂತೆ ಗಣ್ಯರನ್ನು ಆಹ್ವಾನಿಸಲಾಗುವುದು.
ರಾಜುಗೌಡರಿಗೆ ಸಚಿವ ಸ್ಥಾನ:
ಸುರಪುರ ಶಾಸಕ ರಾಜುಗೌಡಗೆ ಸಚಿವ ಸ್ಥಾನ ನೀಡುವುದು ಔಚಿತ್ಯಪೂರ್ಣ. ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಯಡಿಯೂರಪ್ಪನವರು ಸಮ್ಮತಿ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡ ರಾಜುಗೌಡಗೆ ಸಚಿವ ಸ್ಥಾನ ನೀಡುವ ಕುರಿತು ಭರಸವೆ ನೀಡಿದ್ದಾರೆ ಎಂದರು.