ಇಂಗ್ಲೆಂಡಿನಿಂದ ಬಳ್ಳಾರಿಗೆ ಬಂದ 15 ಮಂದಿ: ಆನಂದ ಸಿಂಗ್ ಕೊಟ್ರು ಮಹತ್ವದ ಸಂದೇಶ
ಕೇಂದ್ರ ಮತ್ತು ರಾಜ್ಯ ಸರಕಾರದ ಗೈಡ್ ಲೈನ್ಸ್ ಅನುಸಾರ ಕ್ರಮ| ಪ್ಯಾನಿಕ್ ಅಗ್ಬೇಡಿ, ಕಡ್ಡಾಯವಾಗಿ ಎಸ್ಎಂಎಸ್ ಪಾಲಿಸಿ: ಸಚಿವ ಆನಂದ ಸಿಂಗ್|
ಬಳ್ಳಾರಿ(ಡಿ.23): ಕೋವಿಡ್ ಹಾಗೂ ರೂಪಾಂತರ ಕೊರೋನಾಗೆ ಸಂಬಂಧಿಸಿದಂತೆ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಮಾಡಿ. ಬಳ್ಳಾರಿಗೆ ಬ್ರಿಟನ್‌ದ 15 ಜನರು ಬಂದಿದ್ದು, ಕೋವಿಡ್ ನಿಯಮಾನುಸಾರ ಅವರಿಗೆ ಕ್ವಾರಂಟೈನ್ ಹಾಗೂ ಇನ್ನಿತರ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
ನಗರದ ಸರಕಾರಿ ಅತಿಥಿ ಗೃಹದಲ್ಲಿ ತಮ್ಮನ್ನು ಬುಧವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸ್ಥಿತಿಗತಿ ಹಾಗೂ ರೂಪಾಂತರ ಕೊರೋನಾ ಕುರಿತು ಚರ್ಚೆ ಮಾಡಲಿಕ್ಕೆ ಬಂದಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದ ಗೈಡ್ ಲೈನ್ಸ್ ಅನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಕಂಪ್ಲೀಟ್ ಬ್ರೇಕ್ !
ಶಾಲೆಗಳ ಓಪನ್ ಮಾಡುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸಚಿವ ಸಿಂಗ್, ಮಕ್ಕಳ ಭವಿಷ್ಯ, ಕೋವಿಡ್ ಹಾಗೂ ರೂಪಾಂತರ ಕೊರೋನಾ ಕಣ್ಣೆದುರಿಗೆ ಬಂದಿದ್ದು, ಎಲ್ಲರೂ ಅಭಿಪ್ರಾಯಗಳನ್ನು ಆಲಿಸಿ ಸರಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಹಳೆಯ ವಿಮ್ಸ್ ಅಪರೇಷನ್ ಥಿಯೇಟರ್ ಡೆಮಾಲಿಷ್ ಮಾಡಿ ಡಿಎಂಎಫ್ ಅಡಿ 7ಕೋಟಿ ರೂ. ಒದಗಿಸಿ ಕಾಮಗಾರಿ ಆರಂಭಿಸಲಾಗುವುದು. ಬಳ್ಳಾರಿ ವಿಭಜನೆ ವಿರುದ್ಧದ ಹೋರಾಟಗಾರರೊಂದಿಗೆ ಚರ್ಚಿಸಲಾಗುವುದು ಮತ್ತು ಅವರು ಅವರ ಅಹವಾಲುಗಳನ್ನು ಆಲಿಸಲಾಗುವುದು ಎಂದರು.