ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿ: ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಕಂಪ್ಲೀಟ್ ಬ್ರೇಕ್ !

ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ| ಹೊಸ ಮಾದರಿಯ ಕೊರೋನಾ ತಡೆಯಲು ರಾಜ್ಯದಿಂದ ಹೊಸ ನಿಯಮ| ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೂ ಬ್ರೇಕ್

Night curfew imposed in Karnataka from 10 PM to 6 AM pod

ಬೆಂಗಳೂರು(ಡಿ.23) ಹೊಸ ಮಾದರಿಯ ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಹೇರಲಾಗಿದೆ. ಇಂದಿನಿಂದ ಆರಂಭವಾಗಿ ಮುಂದಿನ ಒಂಭತ್ತು ದಿನಗಳವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ವಿಧಿಸಲಾಗಿದೆ.

"

ಈ ವಿಚಾರವಾಗಿ ಮಾಹಿತಿ ನೀಡಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್  ಇಂದಿನಿಂದ ಜಾರಿಯಾಗಿ ಜನವರಿ 2ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದಿದ್ದಾರೆ.

ಕ್ರಿಸ್‌ಮಸ್, ಹೊಸ ವರ್ಷಾಚರಣೆ ಇಲ್ಲ

ಇದೇ ಸಂದರ್ಭದಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ವಿಶೇಷ ಆಚರಣೆಗೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ತುರ್ತು ಸೇವೆಗಳಿಗಷ್ಟೇ ಮಾತ್ರ ಅವಕಾಶ ನೀಡಲಾಗುತ್ತದೆ ಎಂದಿದ್ದಾರೆ. ಈ ಮೂಲಕ ಹೊಸ ವೈರಸ್ ತಡೆಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

"

ಬ್ರಿಟನ್‌ನಿಂದ ಬಂದವರೆಗೆ ಕ್ವಾರಂಟೈನ್

ಇದೇ ವೇಳೆ ಕ್ವಾರಂಟೈನ್ ಕುರಿತಾಗಿಯೂ ಉಲ್ಲೇಖಿಸಿರುವ ಸಚಿವ ಸುಧಾಕರ್ ಬ್ರಿಟನ್‌ನಿಂದ ಬಂದವರಿಗೆ 28 ದಿನ ಕಡ್ಡಾಯ ಕ್ವಾರಂಟೈನ್ ಇರಲಿದೆ. ಏರ್‌ಪೋರ್ಟ್‌ನಲ್ಲೇ ಎಲ್ಲಾ ಪ್ರಯಾಣಿಕರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ ಎಂದಿದ್ದಾರೆ.

ನೈಟ್ ಕರ್ಫ್ಯೂ ವೇಳೆ ಏನೆಲ್ಲಾ ಲಭ್ಯ?

ನೈಟ್‌ ಕರ್ಫ್ಯೂ ವೇಳೆ ಕೇವಲ ಹಾಲು, ತರಕಾರಿ, ಔಷಧ ವಿತರಣೆ ವಾಹನಗಳ ಸಂಚಾರಕ್ಕಷ್ಟೇ ಅವಕಾಶವಿರಲಿದ್ದು, ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೆ ಯಾವುದೇ ನಿರ್ಬಂಧವಿರಲಾರದು. ಅಲ್ಲದೇ ಆಸ್ಪತ್ರೆ, ಆಂಬುಲೆನ್ಸ್, ಮೆಡಿಕಲ್ ಸ್ಟೋರ್‌ಗಳಿಗೆ ಈ ಬಂದ್‌ನಿಂದ ವಿನಾಯ್ತಿ ನೀಡಲಾಗಿದೆ.

ಈ ಮೇಲಿನ ವ್ಯವಸ್ಥೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯವಸ್ಥೆಗಳು ಬಂದ್ ಆಗಲಿವೆ. ಹೋಟೆಲ್, ಬಾರ್ ಎಂಡ್ ರೆಸ್ಟೋರೆಂಟ್ ಎಲ್ಲವೂ ಮುಚ್ಚಲಿವೆ. 

Latest Videos
Follow Us:
Download App:
  • android
  • ios