* ಆನಂದ ಸಿಂಗ್ ಅವರ ತಂದೆ ಪ್ರುತೃರಾಜ್ ಸಿಂಗ್ ವಿಧಿವಶ* ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದ ಪ್ರುತೃರಾಜ್ ಸಿಂಗ್ * ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಪ್ರುತೃರಾಜ್  

ವಿಜಯನಗರ(ಜು.18): ಸಚಿವ ಆನಂದ ಸಿಂಗ್ ಅವರ ತಂದೆ ಪ್ರುತೃರಾಜ್ ಸಿಂಗ್ (87) ಬೆಂಗಳೂರಿನಲ್ಲಿ ಇಂದು(ಭಾನುವಾರ) ನಿಧನರಾಗಿದ್ದಾರೆ. ‌

ಅನಾರೋಗ್ಯದ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಪ್ರುತೃರಾಜ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಮಾಜಿ ಸಂಸದ ಮಾದೇಗೌಡ ನಿಧನ : ಮಂಡ್ಯ ನಿವಾಸದ ಬಳಿ ಅಂತಿಮ ದರ್ಶನ

ವಿಜಯನಗರ ಜಿಲ್ಲೆಯ ಹೊಸಪೇಟೆಯ ಖ್ಯಾತ ಉದ್ಯಮಿಯಾಗಿದ್ದ ಪ್ರುತೃರಾಜ್ ಸಿಂಗ್ ಅವರು ಹಲವು ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿದ್ದರು.