ಮಡಿಕೇರಿ(ಏ.28): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಪರಿಣಾಮ ಜಿಲ್ಲೆಯಲ್ಲಿ ಹಾಲು ಮಾರಾಟ ಪ್ರಮಾಣ ಗಣನೀಯವಾಗಿ ಕುಸಿದಿದೆ. ಲಾಕ್‌ಡೌನ್‌ನ ಸಡಿಲಿಕೆ ದಿನ ಹೊರತುಪಡಿಸಿ ಜಿಲ್ಲೆಯಲ್ಲಿ ಅಂದಾಜು 15 ಸಾವಿರಕ್ಕೂ ಅಧಿಕ ಲೀಟರ್‌ ಹಾಲು ಮಾರಾಟ ಇಳಿಮುಖಗೊಂಡಿದೆ. ಲಾಕ್‌ಡೌನ್‌ ಇದ್ದರೂ ಹಾಲು ಉತ್ಪಾದಕರಿಂದ ಕೊಡಗು ಜಿಲ್ಲೆಯಲ್ಲಿ ಹಾಲು ಸಂಗ್ರಹಕ್ಕೆ ಯಾವುದೇ ಅಡ್ಡಿಯಾಗುತ್ತಿಲ್ಲ. ಆದರೆ ಹಾಲು ಮಾರಾಟ ಮಾತ್ರ ಕುಸಿತ ಕಂಡಿದೆ.

ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ 48 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಸಡಿಲಿಕೆ ದಿನ ಹೊರತುಪಡಿಸಿದ ದಿನಗಳಲ್ಲಿ 33 ಸಾವಿರ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದೆ. ಸಡಿಲಿಕೆ ನೀಡಲಾಗಿರುವ ದಿನದಲ್ಲಿ 40ರಿಂದ 43 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿದೆ.

ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನ: ಪ್ರಕರಣ ದಾಖಲು

ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮೂರು ದಿನ ಮಾತ್ರ ಸಡಿಲಿಕೆ ನೀಡಲಾಗಿದೆ. ಉಳಿದ ದಿನಗಳಲ್ಲಿ ಬೆಳಗ್ಗೆ 6ರಿಂದ 8 ಗಂಟೆ ವರೆಗೆ ಹಾಲು ಖರೀದಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಹಾಲಿನ ಮಾರಾಟ ಕುಸಿದಿದೆ. ಪ್ರತಿ ದಿನ ಜಿಲ್ಲೆಯಲ್ಲಿ 15 ಸಾವಿರ ಲೀಟರ್‌ ಹಾಲು ಕೊಡಗಿನ ಹಾಲು ಉತ್ಪಾದಕರಿಂದ ಸಂಗ್ರಹವಾಗುತ್ತದೆ. ಉಳಿದಂತೆ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಹಾಗೂ ಸಕಲೇಶಪುರದಿಂದ 35 ಸಾವಿರ ಲೀಟರ್‌ ಹಾಲು ತರಿಸಿಕೊಳ್ಳಲಾಗುತ್ತದೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ 30 ಹಾಗೂ ಮಡಿಕೇರಿ ತಾಲೂಕಿನಲ್ಲಿ 1 ಒಟ್ಟು 31 ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸುಮಾರು 2,261 ಮಂದಿ ಹಾಲು ಉತ್ಪಾದಕರು ಹಾಲನ್ನು ಹಾಸನ ಹಾಲು ಒಕ್ಕೂಟ ವ್ಯಾಪ್ತಿಗೆ ಒಳಪಡುವ ಕೂಡಿಗೆ ಹಾಲಿನ ಡೇರಿಗೆ ನೀಡುತ್ತಾರೆ. ತಿಂಗಳಿಗೆ 4.45 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ದಿನಕ್ಕೆ ಅಂದಾಜು 15 ಸಾವಿರ ಹಾಲು ಸಂಗ್ರಹವಾಗುತ್ತಿದೆ.

ಅಮೆರಿಕದ ಪ್ರತಿ 7 ಕೊರೋನಾ ವೀರರಲ್ಲಿ ಒಬ್ಬ ಭಾರತೀಯ!

ಮಾರಾಟ ಕುಸಿತಕ್ಕೆ ಕಾರಣ: ಲಾಕ್‌ಡೌನ್‌ ನಡುವೆಯೂ ಜಿಲ್ಲೆಯ ಹಾಲು ಉತ್ಪಾದಕರು ಹಾಲು ಸಂಗ್ರಹ ಮಾಡಿ ಕೂಡಿಗೆ ಹಾಲಿನ ಡೇರಿಗೆ ವಿತರಣೆ ಮಾಡುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಿಂದಾಗಿ ಎಲ್ಲ ಅಂಗಡಿಗಳು, ಹೋಟೆಲ್‌ಗಳು, ರೆಸಾರ್ಟ್‌, ಹೋಂಸ್ಟೇ, ಕ್ಯಾಂಟೀನ್‌ಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚು ಹಾಲು ಮಾರಾಟವಾಗುತ್ತಿಲ್ಲ. ಇದರಿಂದಾಗಿ ಹಾಲು ಮಾರಾಟ ಪ್ರಮಾಣ ಕುಸಿತ ಕಂಡಿದೆ.

ಪ್ರತಿ ದಿನ ಉಚಿತ ಹಾಲು: ಸರ್ಕಾರದ ಆದೇಶದಂತೆ ಕೂಡಿಗೆ ಹಾಲು ಡೇರಿ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಪ್ರತಿ ದಿನ ಬಡವರಿಗೆ 3000 ಲೀಟರ್‌ ಹಾಲನ್ನು ವಿತರಣೆ ಮಾಡಲಾಗುತ್ತದೆ. ಮಡಿಕೇರಿಯಲ್ಲಿ 860, ಕುಶಾಲನಗರ 655, ವಿರಾಜಪೇಟೆ 656 ಹಾಗೂ ಸೋಮವಾಪರೇಟೆಯಲ್ಲಿ 750 ಲೀಟರ್‌ ಹಾಲನ್ನು ಬಡವರಿಗೆ ವಿತರಿಸಲಾಗುತ್ತಿದೆ.

ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು!

ಲಾಕ್‌ಡೌನ್‌ನಿಂದಾಗಿ ಹಾಲು ಸಂಗ್ರಹಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮೂರು ದಿನ ಮಾತ್ರ ಲಾಕ್‌ಡೌನ್‌ ಸಡಿಲಿಕೆ ಇರುವುದರಿಂದ ಹಾಲಿನ ಮಾರಾಟ ಕುಸಿದಿದೆ. ಇತರೆ ದಿನಗಳಲ್ಲಿ ಹಾಲು ಖರೀದಿಗೆ ಎರಡು ಗಂಟೆ ಮಾತ್ರ ಅವಕಾಶವಿದೆ. ಪ್ರತಿ ದಿನ ಅಂದಾಜು 15 ಸಾವಿರ ಲೀಟರ್‌ ಹಾಲು ಮಾರಾಟ ಇಳಿಮುಖಗೊಂಡಿದೆ. ಜಿಲ್ಲೆಯಲ್ಲಿ 48 ಸಾವಿರ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಆದರೆ ಸಡಿಲಿಕೆ ಹೊರತುಪಡಿಸಿದ ದಿನಗಳಲ್ಲಿ ಒಟ್ಟು 33 ಸಾವಿರ ಲೀಟರ್‌ ಮಾತ್ರ ಮಾರಾಟವಾಗುತ್ತಿದೆ ಎಂದು ಕೂಡಿಗೆ ಹಾಲು ಡೇರಿ ಸಹಾಯಕ ವ್ಯವಸ್ಥಾಪಕ ನಂದೀಶ್‌ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನಲ್ಲಿ 30 ಹಾಗೂ ಮಡಿಕೇರಿ ತಾಲೂಕಿನಲ್ಲಿ 1 ಒಟ್ಟು 31 ಹಾಲು ಉತ್ಪಾದಕರ ಸಂಘದಿಂದ 2,261 ಮಂದಿ ಹಾಲು ಉತ್ಪಾದಕರು ಕೂಡಿಗೆ ಡೇರಿಗೆ ನೀಡುತ್ತಿದ್ದಾರೆ. ತಿಂಗಳಿಗೆ 4.45 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಜಿಲ್ಲೆಯ ಹಾಲು ಉತ್ಪಾದಕರಿಂದ ದಿನಕ್ಕೆ ಅಂದಾಜು 15 ಸಾವಿರ ಸಂಗ್ರಹವಾಗುತ್ತಿದೆ. ಲಾಕ್‌ಡೌನ್‌ನಿಂದ ಹಾಲು ಸಂಗ್ರಹಕ್ಕೆ ಅಡ್ಡಿಯಾಗಿಲ್ಲ ಎಂದು ಹಾಸನ ಹಾಲು ಒಕ್ಕೂಟ ವಿಸ್ತರಣಾಧಿ​ಕಾರಿ ವೀಣಾ ತಿಳಿಸಿದ್ದಾರೆ.

ಸಬ್‌ ರಿಜಿಸ್ಟ್ರಾರ್‌ ಕಚೇರಿ, ಆಸ್ತಿ ನೊಂದಣಿ ಆರಂಭಕ್ಕೆ ನಿರ್ಧಾರ

ಲಾಕ್‌ಡೌನ್‌ನಿಂದಾಗಿ ಹಾಲು ಉತ್ಪಾದಕರು ಹೈನುಗಾರಿಕೆಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ 200 ಲೀಟರ್‌ ಹಾಲು ಸಂಗ್ರಹವಾಗುತ್ತಿತ್ತು. ಕೊರೋನಾದ ಭಯದ ವಾತಾವರಣ ಇರುವುದರಿಂದಾಗಿ ಈಗ ಕೇವಲ 100 ಲೀಟರ್‌ ಮಾತ್ರ ಸಂಗ್ರಹವಾಗುತ್ತಿದೆ. ಆದರೆ ಮೊದಲಿನಷ್ಟುಹಾಲು ಮಾರಾಟವಾಗುತ್ತಿಲ್ಲ ಎಂದು ಮರಗೋಡು ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಮಂದ್ರಿರ ಮೋಹನ್‌ ದಾಸ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತಕಾಡು