Kolar : 10ಕ್ಕೆ ಲೀಡ್.ಪ್ರತಿ ಲೀಟರ್ ಹಾಲಿಗೆ 2 ರು. ಹಚ್ಚಳ
ಪ್ರತಿ ಲೀಟರ್ ಹಾಲಿಗೆ 2 ರು.ನಂತೆ ಹೆಚ್ಚಿಸಿ ಹಾಲು ಉತ್ಪಾದಕರಿಗೆ 29.90 ರು. ನಂತೆ ಹಾಲು ಖರೀದಿ ದರ ಹೆಚ್ಚಿಸಲು ಗುರುವಾರ ನಡೆದ ಹಾಲು ಒಕ್ಕೂಟದ ಆಡಳಿತ ಮಂಡಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೋಲಾರ (ನ.11): ಪ್ರತಿ ಲೀಟರ್ ಹಾಲಿಗೆ 2 ರು.ನಂತೆ ಹೆಚ್ಚಿಸಿ ಹಾಲು ಉತ್ಪಾದಕರಿಗೆ 29.90 ರು. ನಂತೆ ಹಾಲು ಖರೀದಿ ದರ ಹೆಚ್ಚಿಸಲು ಗುರುವಾರ ನಡೆದ ಹಾಲು ಒಕ್ಕೂಟದ ಆಡಳಿತ ಮಂಡಲಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಒಕ್ಕೂಟದ ಅಧ್ಯಕ್ಷರು ಹಾಗೂ ಮಾಲೂರಿನ ಶಾಸಕರಾದ ನಂಜೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿ ಖಾಸಗಿಯವರ ಹಾವಳಿ ಹೆಚ್ಚಾಗಿದೆ. ಎಫ್.ಎಸ್.ಎಸ್.ಎ.ಐ. ಮಾನದಂಡಗಳನ್ನು ಅನುಸರಿಸದೇ ಕಡಿಮೆ ಗುಣಮಟ್ಟದ ಹಾಲನ್ನು (Milk) ಹಾಗೂ ಸಂಘಗಳಿಂದ ತಿರಸ್ಕೃತಗೊಳ್ಳುತ್ತಿರುವ ಹಾಲನ್ನು ಹೆಚ್ಚಿನ ದರ ನೀಡಿ ಖರೀದಿಸುತ್ತಿರುವ ಖಾಸಗಿಯವರ (Private) ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಹಾಲಿನ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿದೆ ಎಂದು ನಿರ್ಧರಿಸಲಾಯಿತು.
ಇದನ್ನು ಗಮನದಲ್ಲಿರಿಸಿಕೊಂಡು ಹಾಲಿನ ಶೇಖರಣೆ ವೃದ್ಧಿಸಲು ಹಾಗೂ ಹಾಲು ಉತ್ಪಾದಕರಿಗೆ ಪ್ರೋತ್ಸಾಹಿಸಲು ಪ್ರಸ್ತುತ ಇರುವ ಹಾಲು ಖರೀದಿ ದರವನ್ನು ಸಂಘದಿಂದ ಉತ್ಪಾದಕರಿಗೆ 8.5% ಎಸ್.ಎನ್.ಎಫ್. ಶೇ.4 ಫ್ಯಾಟ್ ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ ರು. 27.90 ರಿಂದ ರು.2 ಗಳನ್ನು ಹೆಚ್ಚಿಸಿ, ನ.16ರ ಬೆಳಗಿನ ಸರತಿಯಿಂದ ಉತ್ಪಾದಕರಿಗೆ ರು. 29.90 ರಂತೆ ಹಾಗೂ ಒಕ್ಕೂಟದಿಂದ ಸಂಘಕ್ಕೆ ಪ್ರತಿ ಕೆ.ಜಿಗೆ ರು. 31.15 ರಂತೆ ಪಾವತಿಸಲು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಕಳೆದ ಅ.14ರಲ್ಲಿ ನಂದಿನಿ ಹಾಲು ಮತ್ತು ಇತರೆ ಖಾಸಗಿ ಬ್ರಾಂಡ್ ಗಳ ಹಾಲಿನ ಕನಿಷ್ಠ ಮಾರಾಟ ಗರಿಷ್ಠ ದರ ಲೀಟರ್‌ಗೆ ನಂದಿನಿ ರು. 37, ಟೋನ್‌್ಡ ಹಾಲು ರು. 44, ಹೆರಿಟೇಜ್ ರು.44, ತಿರುಮಲ ರು.46, ಗೋವರ್ಧನ್ ರು.48 ಹಾಗೂ ಆರೋಗ್ಯ ರು. 46.50 ಗಳಲ್ಲಿ ಮಾರಾಟವಾಗುತ್ತಿದೆ. ನಂದಿನಿ ಹಾಲು ಮತ್ತು ಹೊರ ರಾಜ್ಯಗಳಲ್ಲಿರುವ ಹಾಲು ಉತ್ಪಾದಕರ ಸಂಘಗಳ ಹಾಲಿನ ಗರಿಷ್ಠ ಮಾರಾಟ ದರ ಕರ್ನಾಟಕ ನಂದಿನಿ ರು. 37, ಮಹಾರಾಷ್ಟ್ರ ಅಮುಲ್ ರು. 55, ದೆಹಲಿಯ ಮದರ್ ಡೇರಿ ರು. 40, ಗುಜರಾತ್ ಅಮುಲ್ ರು. 46,ಆಂದ್ರ ಪ್ರದೇಶ ವಿಜಯ ರು 51 ಹಾಗೂ ತಮಿಳು ನಾಡಿನ ಅವಿನ್ ರು. 50 ಮಾರಾಟವಾಗುತ್ತಿದೆ.
ನಂದಿನಿ ಹಾಲಿನ ಮಾರಾಟ ದರ ಪರಿಷ್ಕರಣೆ ಸಂಬಂಧವಾಗಿ ಒಕ್ಕೂಟದ ಆಡಳಿತ ಮಂಡಳಿಯು ಇಂದು ತುರ್ತು ಸಭೆ ನಡೆಸಿ ನಂದಿನಿ ಹಾಲಿನ ಮಾರಾಟ ದರಕ್ಕೆ ರಾಜ್ಯದಲ್ಲಿಯೇ ಮಾರಾಟ ಮಾಡುತ್ತಿರುವ ಖಾಸಗಿ ಬ್ರಾಂಡ್‌ಗಳ ಮಾರಾಟ ದರಗಳು ಹಾಗೂ ಇತರೆ ರಾಜ್ಯಗಳಲ್ಲಿನ ಸಹಕಾರ ಸಂಸ್ಥೆಗಳು ಮಾರಾಟ ಮಾಡುತ್ತಿರುವ ಹಾಲಿನ ಮಾರಾಟ ದರಗಳ ಮೇಲ್ಕಂಡ ಸಂಪೂರ್ಣ ವಿವರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವರಿಕೆ ಮಾಡಿಕೊಟ್ಟರು.
ರಾಜ್ಯ ಸರ್ಕಾರದಿಂದ ತಹಲ್‌ವರೆಗೆ ಹಾಲು ಖರೀದಿ ದರ ಪರಿಷ್ಕರಿಸಿರುವುದಿಲ್ಲ. ಸರ್ಕಾರದ ಈ ನಡೆಯಿಂದhttps://kannada.asianetnews.com/search?topic=-%E0%B2%B9%E0%B2%BE%E0%B2%B2%E0%B2%A8%E0%B3%8D%E0%B2%A8%E0%B3%81 ರಾಜ್ಯವ್ಯಾಪ್ತಿಯಲ್ಲಿ ಹಾಲು ಶೇಖರಣೆ ಕುಂಠಿತಗೊಳ್ಳುತ್ತಿದ್ದು, ಇತರೆ ರಾಜ್ಯಗಳ ಖಾಸಗಿ ಬ್ರಾಂಡ್ ಗಳಿಗೆ ಹೋಲಿಕೆ ಮಾಡಿದ್ದಲ್ಲಿ ನಂದಿನಿ ಹಾಲಿನ ಮಾರಾಟ ದರ ಕಡಿಮೆ ಇರುವುದರಿಂದ, ಕ್ಷೇತ್ರದಲ್ಲಿ ಖಾಸಗಿಯವರ ಹಾವಳಿ ಹೆಚ್ಚಾಗಿ ಸಹಕಾರಿ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದ್ದರು ಸರ್ಕಾರದ ವಿಳಂಬ ನೀತಿಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.
ಅಲ್ಲದೇ ಹಾಲಿನ ದರ ಪರಿಷ್ಕರಣೆಗೆ ನನ್ನ ಹಾದಿಯಾಗಿ ರಾಜ್ಯವ್ಯಾಪ್ತಿಯ ಎಲ್ಲಾ 14 ಹಾಲು ಒಕ್ಕೂಟಗಳ ಅಧ್ಯಕ್ಷರುಗಳು, ಆಡಳಿತ ಮಂಡಲಿ ನಿರ್ದೇಶಕರುಗಳು ನಿರಂತರವಾಗಿ ಕಹಾಮ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಮೇಲೆ ಒತ್ತಡ ಹೇರುತ್ತಿದ್ದರು ತಹಲ್ ವರೆಗೂ ಕ್ರಮ ಕæೖಗೊಂಡಿರುವುದಿಲ್ಲ. ನ.15 ರೊಳಗೆ ಹಾಲು ದರ ಹೆಚ್ಚಿಸಿ ಪರಿಷ್ಕರಿಸದಿದ್ದಲ್ಲಿ ರಾಜ್ಯಸರ್ಕಾರದ ವಿರುದ್ಧ ಹಾಲು ಉತ್ಪಾದಕರ ವಿರೋಧ ನೀತಿಯನ್ನು ಪ್ರಶ್ನಿಸಿ, ನಿರಂತರವಾಗಿ ಸರಣಿ-ಧರಣಿಗಳನ್ನು ಹಮ್ಮಿಕೊಳ್ಳಲಾಗುವುದೆಂದು ರಾಜ್ಯದ ಸಮಸ್ತ ಹಾಲು ಉತ್ಪಾದಕರ ಪರವಾಗಿ ಹಾಗೂ ಒಕ್ಕೂಟದ ಆಡಳಿತ ಮಂಡಲಿ ಪರವಾನಗಿ ಸರ್ಕಾರಕ್ಕೆ ಹಾಗೂ ಕಹಾಮಕ್ಕೆ ಈ ಸಂದರ್ಭದಲ್ಲಿ ಅÜಭಿನಂದನæಗಳು ಎಂದು ಅಧ್ಯಕ್ಷ ಕೆ.ವæೖ.ನಂಜೇಗೌಡ ತಿಳಿಸಿದ್ದಾರೆ.
ಸಭೆಯಲ್ಲಿ ಒಕ್ಕೂಟದ ಆಡಳಿತ ಮಂಡಲಿ ಸದಸ್ಯರಾದ ಜಯಸಿಂಹಕೃಷ್ಣಪ್ಪ, ಕೆ.ಎನ್. ನಾಗರಾಜ್, ಮಂಜುನಾಥರೆಡ್ಡಿ, ಜೆ. ಕಾಂತರಾಜ್, ವæೖ.ಬಿ. ಅಶ್ವಥನಾರಾಯಣ, ಆರ್. ಶ್ರೀನಿವಾಸ್, ಎನ್.ಸಿ. ವೆಂಕಟೇಶ್, ಎನ್. ಹನುಮೇಶ್, ಆದಿನಾರಾಯಣರೆಡ್ಡಿ, ಸುನಂದಮ್ಮ, ಕಾಂತಮ್ಮ, ಎಸ್.ವಿ. ಸುಬ್ಬಾರೆಡ್ಡಿ, ಆರಿಫ್ ಉಲ್ಲಾ, ಸಹಕಾರ ಸಂಘಗಳ ಉಪನಿಬಂಧಕರು ಡಾ.ಜಿ.ಟಿ. ರಾಮಯ್ಯ, ಉಪ ನಿರ್ದೇಶಕ ಟಿ.ಟಿ. ವಿನಾಯಗಂ, ವ್ಯವಸ್ಥಾಪಕ ನಿರ್ದೇಶಕ ಡಾ.ಹೆಚ್.ಮಹೇಶ್ ಇದ್ದರು.
10ಕೆಎಲ್‌ಆರ್-7
ಕೋಚಿಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವæೖ.ನಂಜೇಗೌಡ.