KMF ಹಾಲಿನ ದರ ಇಳಿಕೆ : ವ್ಯಾಪಕ ಖಂಡನೆ

ಕೆಎಮ್‌ಎಫ್ ನಿಂದ ಹಾಲು ಉತ್ಪಾದಕರಿಗೆ ನೀಡುವ ದರ ನಿರಂತರವಾಗಿ ಇಳಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

milk price mandya rakshana vedike protest Against KMF

ಶ್ರೀರಂಗಪಟ್ಟಣ (ಆ.19): ಕೆಎಂಎಫ್‌ ಆಡಳಿತ ಮಂಡಳಿ ಹಾಲು ಉತ್ಪಾದಕರಿಗೆ ನೀಡುವ ಹಾಲಿನ ದರವನ್ನು ಪದೇ ಪದೇ 2 ರಿಂದ 3 ರು. ಇಳಿಕೆ ಮಾಡುವ ಕ್ರಮ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್‌ ಬಾಬು ನೇತೃತ್ವದಲ್ಲಿ ಪಟ್ಟಣದಲ್ಲಿ  ಪ್ರತಿಭಟನೆ ನಡೆಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಟ್ಟಡದಲ್ಲಿರುವ ಜಿಲ್ಲಾ ಹಾಲು ಉತ್ಪಾದಕರ ಉಪ ಕಚೇರಿ ಎದುರು ಸೇರಿದ ಸಂಘಟನೆಯ ಪದಾಧಿಕಾರಿಗಳು ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

ಆಯುರ್ವೇದಿಕ್‌ ನಂದಿನಿ ಹಾಲು: ಕೊರೋನಾ ವಿರುದ್ಧ 5 ರೀತಿಯ ಹಾಲಿನ ಉತ್ಪನ್ನ..

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಂಕರ್‌ಬಾಬು ಮಾತನಾಡಿ, ಕೆಎಂಎಫ್‌ ಆಡಳಿತ ಮಂಡಳಿ ಹೊರ ರಾಜ್ಯದ ಹಾಲು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟು ರಾಜ್ಯದ ಹಾಲು ಉತ್ಪಾದಕರಿಗೆ ನಷ್ಟಉಂಟು ಮಾಡುತ್ತಿದೆ. ಸ್ಥಳೀಯ ಗ್ರಾಹಕರನ್ನು ಸೆಳೆಯಲು ದಿನಕ್ಕೊಂದು ಸುಳ್ಳು ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿದರು.

ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್‌ ವಿಧಾನ

ಮದುವೆ ಇತರೆ ಸಮಾರಂಭಗಳಿಗೆ ಐಸ್‌ಕ್ರೀಮ್‌ ಸೇರಿದಂತೆ ಇತರೆ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು ಸಹಕಾರ ನೀಡುತ್ತಿಲ್ಲ, ಕರ್ನಾಟಕ ಹಾಲು ಉತ್ಪಾದನಾ ಸಂಸ್ಥೆಗೆ ನಷ್ಟಉಂಟಾಗುತ್ತಿದೆ. ಕೂಡಲೇ ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳುತ್ತಿರುವ ಹಾಲನ್ನು ನಿಷೇಧಿಸಿ ರಾಜ್ಯದ ಹಾಲು ಉತ್ಪಾದಕರ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ಉಪಕಚೇರಿಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ತಾಲೂಕು ಹಾಲು ಉತ್ಪಾದಕರ ಬಳಗದ ಅಧ್ಯಕ್ಷ ಚಿದಂಬರ್‌, ಸುಮಾ ಸುರೇಂದ್ರ, ಅನುಷಾ, ಕುಮಾರ್‌, ಜಯಲಕ್ಷ್ಮಿ, ಭಾಗ್ಯಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios