Asianet Suvarna News Asianet Suvarna News

ಹಾಲು ಸೇವಿಸುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ: ಎಸ್.ಆರ್.ಗೌಡ

ಹಾಲು ಸೇವಿಸುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ರೈತರು ಪ್ರತಿ ಕುಟುಂಬದಲ್ಲೂ ಹಸುವನ್ನು ಸಾಕಾಣಿಕೆ ಮಾಡಿ ಎಂದು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು. 

Milk Consuming  increase Immunity  in Children   : SR Gowda snr
Author
First Published Sep 25, 2023, 8:35 AM IST

 ಶಿರಾ:  ಹಾಲು ಸೇವಿಸುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ರೈತರು ಪ್ರತಿ ಕುಟುಂಬದಲ್ಲೂ ಹಸುವನ್ನು ಸಾಕಾಣಿಕೆ ಮಾಡಿ ಎಂದು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು. ಕಳ್ಳಂಬೆಳ್ಳ, ಹಾಲ್ದೊಡ್ಡೇರಿ ಹಾಗೂ ದೊಡ್ಡನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸರಕಾರವೂ ಸಹ ಕ್ಷೀರಭಾಗ್ಯದ ಮೂಲಕ ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ. ಮನುಷ್ಯ ಏನೆಲ್ಲಾ ಆಹಾರ ತಯಾರಿಸುತ್ತಾನೆ. ಆದರೆ, ಎಲ್ಲಾ ಆಹಾರವನ್ನೂ ಮೀರಿಸುವ ಶಕ್ತಿ ಹಾಲಿಗಿದೆ ಎಂದರು.

ಅತಿ ಹೆಚ್ಚು ಹಾಲು ಸರಬರಾಜು ಮಾಡಿದ ರೈತರಿಗೆ, ಸಂಘದ ನಿರ್ದೇಶಕರಿಗೆ, ಸದಸ್ಯರುಗಳಿಗೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಹೈನುಗಾರರ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ತುಮಕೂರು ಹಾಲು ಒಕ್ಕೂಟದ ಸಮಾಲೋಚಕರಾದ ಶ್ರೀನಿವಾಸ್, ಹಿರಿಯ ಸಹಕಾರಿಗಳಾದ ದೋ ರಂಗನಾಥ್ ಗೌಡ, ಕಳ್ಳಂಬೆಳ್ಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕಾಂತರಾಜು, ಹಾಲ್ದೊಡ್ಡೇರಿ ಸಂಘದ ಅಧ್ಯಕ್ಷ ರಾಜಣ್ಣ, ದೊಡ್ಡನಹಳ್ಳಿ ಸಂಘದ ಅಧ್ಯಕ್ಷ ಅಮರನಾಥ್ ಹಾಜರಿದ್ದರು. 

Follow Us:
Download App:
  • android
  • ios