'ಹಾಲಿನಿಂದ ಕೊರೋನಾ ದೂರ : ಬೇರೆ ರೋಗಗಳಿಗೂ ಮದ್ದು'

ಹಾಲಿನಿಂದ ಅನೇಕ ರೀತಿಯ ರೋಗಗಳ ಎದುರಿಸಲು ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಕೊರೋನಾ ಸೇರಿದಂತೆ ವಿವಿಧ ರೀತಿಯ  ರೋಗಗಳನ್ನು ತಡೆಯಲು ಹಾಲು ಸಹಕಾರಿ ಎಂದು ಹಾಲು ಒಕ್ಕೂಟದ ಮುಖಂಡರು ಹೇಳಿದರು. 

Milk Boost our Immunity Power says Tumakuru Milk Producers organisation Director snr

ಶಿರಾ (ಮಾ.22): ಆಹಾರದಲ್ಲಿ ಹಾಲಿನ ಉತ್ಪನ್ನಗಳಿಗೆ ಸರಿಸಮನಾದ ಆಹಾರ ಯಾವುದು ಇಲ್ಲ. ಹಾಲು ಹಾಗೂ ಹಾಲಿನ ಉತ್ಪನ್ನ ಸೇವಿಸಿದರೆ ಕೋರೊನಾ ಸೇರಿದಂತೆ ಯಾವುದೇ ರೋಗಗಳು ಮನುಷ್ಯನಿಗೆ ಬಾರದಂತೆ ರೋಗನಿರೋಧಕ ಶಕ್ತಿಯು ಮನುಷ್ಯನಲ್ಲಿ ಹೆಚ್ಚುತ್ತದೆ ಎಂದು ರಾಜ್ಯ ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ಹೇಳಿದರು.

ಅವರು ನಗರದ ಚಂಗಾವರ ರಸ್ತೆಯಲ್ಲಿರುವ ಶಿಥಲೀಕರಣ ಕೇಂದ್ರ ಆವರಣದಲ್ಲಿ ಶನಿವಾರ ವಿವಿಧ ಫಲಾನುಭವಿಗಳಿಗೆ ಚೆಕ್‌ ವಿತರಿಸಿ ಮಾತನಾಡಿದರು.

ಜನರು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಹಾಲಿನ ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ ಎಂದರು.

ಕುದುರೆ ಹಾಲು ಮಾರಿ ಮಿಲಿಯೇನರ್‌ ಆದ ಬ್ರಿಟಿಷ್‌ ರೈತ! .

ಗುಂಪು ರಾಸು ವಿಮೆಯ 15, ಹೈನುಗಾರರ ಮರಣ ಪರಿಹಾರ 7 ಕುಟುಂಬಗಳಿಗೆ, ವೈದ್ಯಕೀಯ ವೆಚ್ಚ 1, ಹುಲ್ಲಿನ ತಾಕಿಗೆ ಬೆಂಕಿ 1, ಪಡ್ಡೆ ರಾಸು ವಿಮೆ 10 ಸೇರಿದಂತೆ 34 ಫಲಾನುಭವಿಗಳಿಗೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ 1.50 ಲಕ್ಷ ರು. ಸೇರಿ 15 ಲಕ್ಷ ರು.ಗಳ ಚೆಕ್‌ಗಳನ್ನು ವಿತರಿಸಲಾಯಿತು. ತಾ.ಪಂ. ಉಪಾಧ್ಯಕ್ಷ ರಂಗನಾಥ್‌ ಗೌಡ, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಿ.ವೀರಣ್ಣ, ಸಹಾಯಕ ವ್ಯವಸ್ಥಾಪಕ ಮಧುಸೂಧನ್‌, ಸಮಾಲೋಚಕರಾದ ಪ್ರವೀಣ್‌.ಬಿ.ಕೆ ಸೇರಿದಂತೆ ಹಲವರು ಹಾಜರಿದ್ದರು.

Latest Videos
Follow Us:
Download App:
  • android
  • ios