Asianet Suvarna News Asianet Suvarna News

ಕಾಲೇಜು ವಿದ್ಯಾರ್ಥಿಗಳಿಗೆ 5ರು.ಗೆ ಮಧ್ಯಾಹ್ನದ ಬಿಸಿಯೂಟ

ಕಾಲೇಜು ವಿದ್ಯಾರ್ಥಿಗಳಿಗೆ 5 ರು.ಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಆಹಾತ ವ್ಯರ್ಥ ಮಾಡುವುದನ್ನು ತಪ್ಪಿಸಲು 5 ರು ಪಡೆಯಲಾಗುತ್ತಿದೆ. 

mid Day meal For College Students in Hosadurga for 5 Rs  snr
Author
Bengaluru, First Published Mar 16, 2021, 3:45 PM IST

 ಹೊಸದುರ್ಗ (ಮಾ.16):  ರಾಜ್ಯದಲ್ಲಿ ಕೋರೋನಾದ 2ನೇ ಅಲೆ ಹೆಚ್ಚುತ್ತಿರುವುದರ ನಡುವೆಯೂ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮಕ್ಕಳಿಗೆ 5 ರು. ದರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಶಾಸಕ ಗೂಳಿಹಟ್ಟಿಶೇಖರ್‌ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲೆಂದು ಕಾಲೇಜಿನ ಉಪನ್ಯಾಸಕರ ಮನವಿಯ ಮೇರೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ಊಟಕ್ಕೆ 20 ರೂ. ತಗುಲಲಿದ್ದು, ಮಕ್ಕಳಿಗೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಬೇಕೆಂಬ ಬಯಕೆ ನಮ್ಮದಾಗಿತ್ತು. ಆದರೆ, ಉಪನ್ಯಾಸಕರು ಮಕ್ಕಳಿಗೆ ಅನ್ನದ ಬೆಲೆ ತಿಳಿಯಬೇಕು. ಇಲ್ಲವಾದರೆ ಊಟವನ್ನು ಬಿಸಾಕುತ್ತಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಕ್ಕಳಿಂದ 5 ರು. ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್‌ ಕಾರಣದಿಂದ ಭೌತಿಕ ತರಗತಿಗಳು ಕಳೆದ ಒಂದು ವರ್ಷದಿಂದ ಸ್ಥಗಿತೊಂಡಿದ್ದವು. ಆದರೆ, ಕಳೆದ ಜನವರಿಯಿಂದ ತರಗತಿಗಳು ಪ್ರಾರಂಭಗೊಂಡಿವೆ. ಪರೀಕ್ಷೆ ಸಮಯ ಹತ್ತಿರವಿದ್ದು, ಬಹುತೇಕ ಪಠ್ಯಕ್ರಮ ಮುಗಿಯದ ಕಾರಣ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತರಗತಿ ನಡೆಸಬೇಕಾಗಿರುವ ಅನಿವಾರ್ಯತೆ ಇರುವುದರಿಂದ ಗ್ರಾಮೀಣ ಮಕ್ಕಳು ಮಧ್ಯಾಹ್ನದ ವೇಳೆ ಹಸಿವಿನಿಂದ ಬಳಸಬಾರದು ಎನ್ನುವ ಸದುದ್ದೇಶದಿಂದ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ವೈದ್ಯ ಸೀಟು ನಿರಾಕರಿಸಿದರೆ 25 ಲಕ್ಷ ರು ದಂಡ? ...

ಪ್ರಾಂಶುಪಾಲ ಮಲ್ಲಪ್ಪ ಮಾತನಾಡಿ, ಕಾಲೇಜಿನಲ್ಲಿ ಸುಮಾರು 700 ವಿದ್ಯಾರ್ಥಿಗಳಿದ್ದು ಕೋವಿಡ್‌ ಕಾರಣದಿಂದ ಭೌತಿಕ ತರಗತಿಗಳನ್ನು ಜನವರಿಯಿಂದ ಪ್ರಾರಂಭಿಸಲಾಗಿದ್ದು, ದ್ವಿತೀಯ ಪಿಯು ಪರೀಕ್ಷೆಗೆ ಇನ್ನೆರೆಡು ತಿಂಗಳು ಇವೆ. ಆದರೆ, ಪಠ್ಯ ಚುಟವಟಿಕೆಗಳು ಇನ್ನೂ ಪೂರ್ಣಗೊಳ್ಳದ ಕಾರಣ ತರಗತಿಗಳನ್ನು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದಿಂದ ಹೆಚ್ಚು ಮಕ್ಕಳು ಬರುತ್ತಿರುವುದರಿಂದ ಮಧ್ಯಾಹ್ನ ಊಟವಿಲ್ಲದೆ ತಲೆ ಸುತ್ತಿ ಬೀಳುವ ಪ್ರಸಂಗಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಇನ್ನೆರೆಡು ತಿಂಗಳು ಮಧ್ಯಾನದ ಊಟವನ್ನು ನೀಡುವ ಯೋಜನೆಯನ್ನು ಶಾಸಕರ ನಿರ್ದೇಶನದಂತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸರ್ಕಾರದ ಮದ್ಯಾನದ ಬಿಸಿಯೂಟ ಯೋಜನೆ ಕಾಲೇಜು ಮಕ್ಕಳಿಗೆ ಇಲ್ಲ ಆಲ್ಲದೆ ಪ್ರೌಡಶಾಲೆಗಳನ್ನು ಪ್ರಾರಂಭಿಸಿದ್ದರೂ ಕೋವಿಡ್‌ ಕಾರಣದಿಂದ ಸ್ಥಗಿತಗೊಳಿಸಿದೆ. ಆದರೂ, ಕಾಲೇಜು ಮಕ್ಕಳ ಶೈಕ್ಷಣಿಕ ದೃಷ್ಠಿಯಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ ಕಾಲೇಜು ಅಭಿವೃದ್ಧಿ ಮಂಡಳಿಯ ನೇತೃತ್ವದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಊಟವೊಂದಕ್ಕೆ 20 ರು.ತಗುಲಿದ್ದು ಶಾಸಕರು 15 ರು. ಭರಿಸಲಿದ್ದಾರೆ. ಮಕ್ಕಳಿಂದ 5 ರು.ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಪುರಸಭಾಧ್ಯಕ್ಷ ಶ್ರೀನಿವಾಸ್‌, ಪುರಸಭಾ ಸದಸ್ಯ ದೊಡ್ಡಯ್ಯ ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಹಾಜರಿದ್ದರು.

Follow Us:
Download App:
  • android
  • ios