ಚಾಮರಾಜನಗರ(ಜ.03): ಸುಗ್ಗಿ ಬಂತೆದರೆ ಸಾಕು ಕೊಯ್ಲಿಗೆ ಕೂಡುಗೋಲು ಮೊನಚು ಮಾಡಿಕೊಳ್ಳುತ್ತಾ, ಆಳುಗಳು ಸಿದ್ಧವಾಗುತ್ತಿದ್ದರು. ಇದೀಗ ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಇದರಿಂದಾಗಿ ರೈತರಿಗೆ ಕೂಲಿಯಾಳುಗಳ ಪ್ರಮಾಣ ತಗ್ಗಿಸುವ ಸಲುವಾಗಿ ಬೆಂಗಳೂರಿನ ನಿವೃತ್ತ ಸೈನಿಕರೊಬ್ಬರು ಕೂಯ್ಲುಗತ್ತಿ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.

ಈ ಕೂಯ್ಲುಗತ್ತಿ ಮೂಲಕ ಒಬ್ಬ ಒಂದು ಎಕರೆ ಕಟಾವು ಮಾಡಬಹುದಾಗಿದೆ. ಕುಡುಗೋಲು ಮೂಲಕ ಒಂದು ಎಕರೆ ಕಟಾವು ಮಾಡಲು 6ರಿಂದ 8 ಆಳು ಬೇಕು. ಯಂತ್ರಗಳ ಮೂಲಕ ಕಟಾವು ಮಾಡಿಸಿದರೆ 7ರಿಂದ 8 ಸಾವಿರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಟಾವು ಮಾಡುವವರು ಕಡಿಮೆಯಾಗುತ್ತಿದ್ದು, ಆಳುಗಳು ಸಿಗುವುದು ಕಷ್ಟವಾಗುತ್ತಿದೆ. ಇದರಿಂದಾಗಿ ರೈತರು ಯಂತ್ರಗಳು ಮೊರೆ ಹೋಗುತ್ತಿದ್ದಾರೆ.

ಹೊಸವರ್ಷ: ಬಂಡೀಪುರದಲ್ಲಿ ಸಫಾರಿಗೆ ಪ್ರವಾಸಿಗರ ದಂಡು

ಆದರೆ, ಯಂತ್ರಗಳಿಂದ ಕಟಾವು ಮಾಡಿಸಿದರೆ ಹುಲ್ಲು ಹಾಳಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನ ನಿವೃತ್ತ ಸೈನಿಕ ಯು.ಎಂ. ತಾರನಾಥ್‌ ಅವರು ಪರಿಸರ ಸ್ನೇಹಿಯಾಗಿ ರೈತರಿಗೆ ಅನಕೂಲ ಕಲ್ಪಿಸಬೇಕು ಎನ್ನುವ ನಿಟ್ಟಿನಲಿ ಜಿ.ಟಿ. ಎಂಟರ್‌ಪ್ರೈಸಸ್‌ ಮೂಲಕ ಕೊಯ್ಲುಗತ್ತಿಯನ್ನು ಪರಿಚಯಿಸುವ ಮೂಲಕ, ಕತ್ತಿಯ ಬಳಕೆ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಜೋಡಣೆ, ಉಪಯೋಗಿಸುವುದು ಮತ್ತು ರಿಪೇರಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಾರೆ.

ಬಹು ಬೆಳೆ ಕಟಾವು:

ಕೂಯ್ಲು ಕತ್ತಿ ಮೂಲಕ ಭತ್ತ, ರಾಗಿ, ಜೋಳ, ಹಸಿರೆಲೆ ಗೊಬ್ಬರಕ್ಕಾಗಿ ಬೆಳೆಸುವ ಸೆಣಬು, ಡಯಾಂಚ, ಆಲಸಂದೆ, ಹಾಗೂ ಕಳೆಗಳನ್ನು ಕಟಾವು ಮಾಡಬಹುದು. ಕಳೆಯನ್ನು ಕಳೆ ಕೊಚ್ಚುವ ಯಂತ್ರದ ಮೂಲಕ ಕಟಾವು ಮಾಡಿದರೆ ಕಳೆಯನ್ನು ಅಲ್ಲೇ ಪುಡಿ ಪುಡಿ ಮಾಡುತ್ತದೆ. ಕೊಯ್ಲುಗತ್ತಿ ಗುಡ್ಡೆಯಾಕುತ್ತದೆ. ಮಾನವ ಶ್ರಮದ ಮೂಲಕ ಬಳಕೆ ಮಾಡುವುದರಿಂದ ಇಂಧನವೂ ಉಳಿತಾಯವಾಗಲಿದೆ.

ಸಂಶಯಾಸ್ಪದವಾಗಿ ಮೃತಪಟ್ಟ ನ್ಯೂಸ್‌ ಚಾನೆಲ್‌ ಮಾಲೀಕ 3 ಮದುವೆಯಾಗಿದ್ದ..!

ಕತ್ತಿಯನ್ನು ಉಜ್ಜಿ ಬೇಕಾದ ರೀತಿ ಚೂಪು ಮಾಡಿಕೊಳ್ಳಬುಹುದಾಗಿದ್ದು, ರೈತರು ಕಳೆ ನಿಯಂತ್ರಣ ಮಾಡಲು ಸಾಧ್ಯವಾಗದೆ ಕೂಳಿಯಾಳು ಸಿಗದ ಪರಿಣಾಮ ಇತ್ತೀಚಿನ ದಿನಗಳಲ್ಲಿ ಕಳೆ ನಾಶಕ ಮೊರೆ ಹೋಗುತ್ತಿದ್ದರು. ಇದರಿಂದಾಗಿ ಭೂಮಿ ಸತ್ವ ಕಳೆದುಕೊಂಡು ಹಾಳಾಗುತ್ತಿದ್ದು, ಇದೀಗ ಕೂಯ್ಲುಗತ್ತಿ ಮೂಲಕ ಕಳೆದ ಕತ್ತರಿಸುವುದರಿಂದ ಅಲ್ಲೇ ಸಾವಯವ ಗೊಬ್ಬರವನ್ನು ತಯಾರು ಮಾಡಿಕೊಳ್ಳಲು ಅನುಕೂಲವಾಗಿದೆ. ಹೆಚ್ಚಿನ ಮಾಹಿತಿಗೆ 9845941118 ಸಂಪರ್ಕಿಸಬಹುದು.

ಇಂದು ಕೂಯ್ಲುಗತಿ ಬಳಸಿ ಭತ್ತ ಕಟಾವು ಪ್ರಾತ್ಯಕ್ಷಿಕೆ

ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಡಿ. ಶಾಂತಮಲ್ಲು ಅವರ ಭತ್ತದ ತಾಕಿನಲ್ಲಿ ಕೂಯ್ಲುಗತ್ತಿ ಬಳಿಸಿ ಭತ್ತದ ಕಟಾವು ಪ್ರಾತ್ಯಕ್ಷಿಕೆ ಯನ್ನು ಬೆಂಗಳೂರಿನ ಜಿ.ಟಿ. ಇಂಟರ್‌ ನ್ಯಾಷನಲ್‌ ಮೂಲಕ ಏರ್ಪಡಿಸಲಾಗಿದೆ. ರೈತರಿಗೆ ಭತ್ತದ ಕಟಾವು ಪ್ರಾತ್ಯಕ್ಷಿಕೆ , ಕೂಯ್ಲುಗತ್ತಿ ಜೋಡಣೆ, ಬಳಕೆ, ರಿಪೇರಿ ಮತ್ತು ನಿರ್ವಹಣೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ರೈತ ಬಾಂಧವರು ಸದುಪಯೋಗಪಡಿಸಿಕೊಳ್ಳುವಂತೆ ಜಿ.ಟಿ. ಇಂಟರ್‌ ನ್ಯಾಪನಲ್‌ನ ಯು.ಎಂ. ತಾರನಾಥ್‌ ಮನವಿ ಮಾಡಿದ್ದಾರೆ.

ಇಂದು ಕೂಲಿಯಾಳುಗಳು ಸಿಗುವುದು ಕಷ್ಟ. ಯಂತ್ರಗಳು ರೈತಸ್ನೇಹಿ ಮತ್ತು ಪರಿಸರ ಸ್ನೇಹಿಯಾಗಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡಲು ತೊಂದರೆಯಾಗಿತ್ತು. ಕೂಯ್ಲುಗತ್ತಿ ಬಳಕೆ ಮಾಡುವುದರಿಂದ ಕೂಲಿಯಾಳುಗಳ ಬಳಕೆಯ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಆಲೂರಿನ ಎ.ವಿ. ಮೂರ್ತಿ ತಿಳಿಸಿದ್ದಾರೆ.

-ದೇವರಾಜು ಕಪ್ಪಸೋಗೆ