Asianet Suvarna News Asianet Suvarna News

Single Use Plastic ವಿಶ್ವದಲ್ಲೇ ಅತೀ ಕಡಿಮೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ದೇಶ ಭಾರತ!

  • ಪರಿಸರ ಸರಂಕ್ಷಣೆಯತ್ತ ಭಾರತದ ದಿಟ್ಟ ಹೆಜ್ಜೆ
  • ವಿಶ್ವದ ಪ್ರಮುಖ ಆರ್ಥಿಕ ದೇಶಗಳಲ್ಲಿ ಭಾರತಕ್ಕೆ ಆಗ್ರಸ್ಥಾನ
  • ಅತೀ ಕಡಿೆ ಏಕಬಳಕೆ ಪ್ಲಾಸ್ಟಿಕ್ ಬಳಕೆ, ಭಾರತದ ಸಾಧನೆ
India Consumes lowest single use plastic among major economies of the world ckm
Author
Bengaluru, First Published Mar 23, 2022, 6:30 PM IST

ನವದೆಹಲಿ(ಮಾ.23): ಪರಿಸರಕ್ಕೆ ಮಾರಕವಾಗಿರುವ ಹಾಗೂ ವಿಶ್ವದಲ್ಲಿನ ಹಲವು ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗಿರುವ ಪ್ಲಾಸ್ಟಿಕ್ ಬಳಕೆಗೆ ವಿಶ್ವವೇ ನಿರ್ಬಂಧ ಹೇರುತ್ತಿದೆ. ಈ ನಿಟ್ಟಿನಲ್ಲಿ  ಭಾರತ ದಿಟ್ಟ ಹೆಜ್ಜೆ ಇಟ್ಟಿದೆ. ವಿಶ್ವದ ಪ್ರಬಲ ಆರ್ಥಿಕ ದೇಶಗಳ ಪೈಕಿ ಅತೀ ಕಡಿಮೆ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ದೇಶ ಭಾರತ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಸ್ಟ್ರೇಲಿಯಾ, ಅಮೆರಿಕ, ಸೌತ್ ಕೊರಿಯಾ, ಚೀನಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ಪೈಕಿ ಭಾರತದಲ್ಲಿ ತಲಾವಾರು 4 ಕೆಜಿ ಎಕ ಬಳಕೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅತೀ ಹೆಚ್ಚು ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ದೇಶ ಆಸ್ಟ್ರೇಲಿಯಾ. ಈ ದೇಶದಲ್ಲಿ ಪರ್ ಕ್ಯಾಪಿಟಾ 59 ಕೆಜಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇನ್ನು ಅಮೆರಿಕ ತಲಾವಾರು 53 ಕೆಜಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದೆ.

ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ನಿಷೇಧ; ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ!

ಚೀನಾದಲ್ಲಿ ಪರ್ ಕ್ಯಾಪಿಟಾಗೆ 18 ಕೆಜಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದರೆ, ಸೌತ್ ಕೊರಿಯಾದಲ್ಲಿ 44 ಕೆಜಿ, ಯುಕೆಯಲ್ಲಿ 44 ಕೆಜಿ, ಜಪಾನ್‌ನಲ್ಲಿ 37 ಕೆಜಿ ಹಾಗೂ ಫ್ರಾನ್ಸ್ 36 ಕೆಜಿ, ಸ್ಪೇನ್ 34, ಜರ್ಮನಿ 22 ಕೆಜಿ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ.

ಭಾರತದಲ್ಲಿ ಏಕಬಳಕೆ ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರಲಾಗಿದೆ. ಕಟ್ಟು ನಿಟ್ಟಿನ ನಿಮಯ ಇದೇ ವರ್ಷದ ಜೂನ್ ತಿಂಗಳಿನಿಂದ ಜಾರಿಯಾಗಲಿದೆ. ತೀವ್ರ ಪರಿಸರ ಮಾಲಿನ್ಯ ಹಾಗೂ ಅನಾಹುತಕಾರಿ ತ್ಯಾಜ್ಯಕ್ಕೆ ಕಾರಣವಾಗುವ ‘ಏಕಬಳಕೆ ಪ್ಲಾಸ್ಟಿಕ್‌’ ಮೇಲೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮರ ಸಾರಿದೆ. ಪ್ಲಾಸ್ಟಿಕ್‌ ಕಪ್‌, ತಟ್ಟೆ, ಚಮಚ, ಸ್ಟ್ರಾದಂತಹ ಏಕಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳ ಉತ್ಪಾದನೆ, ಮಾರಾಟ, ಆಮದು ಹಾಗೂ ಸಂಗ್ರಹಣೆಯನ್ನು ಅದು ನಿಷೇಧಿಸಿದ್ದು, 2022ರ ಜುಲೈ 1ರಿಂದ ಈ ಆದೇಶ ಜಾರಿಗೆ ಬರಲಿದೆ.ಇನ್ನೊಂದೆಡೆ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳ ದಪ್ಪವನ್ನು ಹಾಲಿ ಇರುವ 50 ಮೈಕ್ರಾನ್‌ನಿಂದ 75 ಮೈಕ್ರಾನ್‌ಗೆ ಏರಿಕೆ ಮಾಡಲಾಗಿದೆ. ಈ ನಿಯಮ 2021 ಸೆಪ್ಟೆಂಬರ್‌ 30ರಿಂದ ಜಾರಿಗೆ ಬರಲಿದೆ. ಬಳಿಕ 2022ರ ಡಿ.31ರಿಂದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳ ದಪ್ಪವನ್ನು 120 ಮೈಕ್ರಾನ್‌ಗೆ ಹೆಚ್ಚಿಸಬೇಕು ಎಂದು ಅದು ಆದೇಶಿಸಿದೆ. ಈ ಎರಡೂ ಕ್ರಮಗಳಿಂದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಮರುಬಳಕೆ ಸಾಧ್ಯವಾಗಲಿದೆ.

ಪ್ಲಾಸ್ಟಿಕ್ ಪರ್ಯಾಯ 'ಚಾಲೆಂಜ್': ವಿಜೇತರಿಗೆ ಕೇಂದ್ರದಿಂದ 3 ಲಕ್ಷ ಬಹುಮಾನ!

2018ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು, ಏಕಬಳಕೆ ಪ್ಲಾಸ್ಟಿಕ್‌ ಅನ್ನು ಭಾರತ 2022ರ ಒಳಗೆ ನಿರ್ಮೂಲನೆ ಮಾಡಲಿದೆ ಎಂದು ಘೋಷಿಸಿದ್ದರು. ಅದಕ್ಕೆ ಅನುಗುಣವಾಗಿ ‘ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣಾ ತಿದ್ದುಪಡಿ ನಿಯಮ-2021’ರ ಅಧಿಸೂಚನೆ ಪ್ರಕಟಿಸಲಾಗಿದೆ. 100 ಮೈಕ್ರಾನ್‌ಗಿಂತ ತೆಳುವಾಗಿರುವ ಪ್ಲಾಸ್ಟಿಕ್‌ ಉತ್ಪನ್ನಗಳಾದ ಪ್ಲಾಸ್ಟಿಕ್‌ ಕಪ್‌ಗಳು, ಚಮಚ, ಪ್ಲೇಟ್‌ಗಳು, ಪ್ಯಾಕೆಟ್‌, ಬಲೂನ್‌ಗಳ ಪ್ಲಾಸ್ಟಿಕ್‌ ಕಡ್ಡಿಗಳು, ಪ್ಲಾಸ್ಟಿಕ್‌ ಇಯರ್‌ ಬಡ್‌ಗಳು, ಚಾಕು, ಎಳೆನೀರು/ಜ್ಯೂಸ್‌ ಸ್ಟ್ರಾ, ಸ್ವೀಟ್‌ ಬಾಕ್ಸ್‌ಗಳಿಗೆ ಬಳಸುವ ತೆಳುವಾದ ಪ್ಲಾಸ್ಟಿಕ್‌ ಫಿಲಂಗಳು, ಆಮಂತ್ರಣ ಪತ್ರಿಕೆ, ಸಿಗರೇಟು ಪ್ಯಾಕ್‌, ಪ್ಲಾಸ್ಟಿಕ್‌ ಧ್ವಜಗಳು, ಪಿವಿಸಿ ಬ್ಯಾನರ್‌ಗಳ ಉತ್ಪಾದನೆ, ಮಾರಾಟ, ಬಳಕೆ, ಆಮದು ನಿಷೇಧಕ್ಕೆ ಒಳಗಾಗಲಿವೆ. ಕರಗುವ ಶಕ್ತಿಯೇ ಇಲ್ಲದ ಥರ್ಮಾಕೋಲ್‌ ಕೂಡ ಬ್ಯಾನ್‌.

ಹಡಗಿನಲ್ಲೂ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ
ಮಾಲಿನ್ಯಕಾರಕ ಏಕಬಳಕೆ (ಸಿಂಗಲ್‌ ಯೂಸ್‌) ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ಈಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಅ.2ರಿಂದ ರೈಲುಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧಿಸಿರುವ ಸರ್ಕಾರ, ಜನವರಿ 1ರಿಂದ ಹಡಗುಗಳಲ್ಲಿ ಈ ಕ್ರಮ ಜಾರಿಗೆ ತರಲು ತೀರ್ಮಾನಿಸಿದೆ.

ಐಸ್‌ಕ್ರೀಂ ಕಂಟೇನರ್‌ಗಳು, ಹಾಟ್‌ ಡಿಶ್‌ ಕಪ್‌ಗಳು, ತಟ್ಟೆಗಳು, ಹಾಲಿನ ಬಾಟಲಿಗಳು, ಫುಡ್‌ ಪ್ಯಾಕೇಜ್‌, ಟ್ರೇ, ಕಸದ ಬ್ಯಾಗ್‌ಗಳು ಹಾಗೂ ಚಿಫ್ಸ್‌ ಪ್ಯಾಕೆಟ್‌ಗಳು ಹಡಗಿನಲ್ಲಿ ಬಳಸುವ ಏಕಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವಂತೆ ಆಗಸ್ಟ್‌ 15ರಂದು ಮಾಡಿದ ಮನವಿ ಮೇರೆಗೆ ಕೇಂದ್ರ ಸರ್ಕಾರದ ಹಡಗು ಮಹಾನಿರ್ದೇಶನಾಲಯವು ಇವುಗಳ ಮೇಲೆ ನಿಷೇಧ ಹೇರುವ ಆದೇಶ ಹೊರಡಿಸಿದೆ. ಬರೀ ಭಾರತೀಯ ಹಡಗುಗಳಷ್ಟೇ ಅಲ್ಲ, ಭಾರತೀಯ ಜಲಸೀಮೆಯಲ್ಲಿ ಸಂಚರಿಸುವ ವಿದೇಶಿ ಹಡಗುಗಳಿಗೆ ಕೂಡ ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಅನ್ವಯವಾಗಲಿದೆ.

Follow Us:
Download App:
  • android
  • ios