ಬೆಂಗಳೂರು [ಫೆ.29]: ಇಂದಿರಾ ಕ್ಯಾಂಟೀನ್ ಊಟ ಹಾಗೂ ತಿಂಡಿ ದರ ಪರಿಷ್ಕರಣೆಯಾಗುವ ಸಾಧ್ಯತೆ ಹೆಚ್ಚಿದೆ. 

ಸರ್ಕಾರದಿಂದ ಬಡಜನತೆಗಾಗಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ ಊಟ ತಿಂಡಿ ದರ ಪರಿಷ್ಕರಣೆ ಮಾಡುವ ಬಗ್ಗೆ ಇದೀಗ ಬಿಬಿಎಂಪಿಯಲ್ಲಿ ಚರ್ಚೆ ನಡೆಸಲಾಗುತ್ತಿದೆ. 

ಬಿಬಿಎಂಪಿಯಲ್ಲಿ ಆಹಾರ ಪೂರೈಕೆಗೆ ಅನುದಾನ ಪೂರೈಕೆಯಾಗುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಆರ್ಥಿಕ ಹೊರೆ ತಪ್ಪಿಸಲು ಊಟ ತಿಂಡಿ ದರ ಏರಿಕೆ ಅನಿವಾರ್ಯ ಎಂದು ಪಾಲಿಕೆ ಹೇಳುತ್ತಿದೆ. 

ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 1,675 ನಿರ್ಗತಿಕರಿಂದ ಊಟ, ಸಮೀಕ್ಷೆಯಲ್ಲಿ ಬಹಿರಂಗ!.

ಊಟ ತಿಂಡಿಯ ದರದಲ್ಲಿ ಸರಾ ಸರಿ 5 ರು. ಏರಿಕೆ ಮಾಡುವ ಬಗ್ಗೆ ಪಾಲಿಕೆಯಲ್ಲಿ ಚಿಂತನೆ ನಡೆಯುತ್ತಿದೆ. 

ಇಂದಿರಾ ಕ್ಯಾಂಟೀನ್‌ ಅಡುಗೆ ಮನೆ ಸ್ಥಳಾಂತರಕ್ಕೆ BBMP ನಿರ್ಧಾರ...

ವಾರ್ಷಿಕವಾಗಿ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಗೆ 120 ಕೋಟಿ ರು. ವೆಚ್ಚವಾಗುತ್ತಿದ್ದು, 60 ಕೋಟಿ ರು. ಬಿಬಿಎಂಪಿ ನೀಡುತಿತ್ತು. ಆದರೆ ಇದೀಗ ಸರ್ಕಾರದಿಂದ ಅನುದಾನ ಸಿಗುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಮೊತ್ತ ಸರಿದೂಗಿಸಲು ದರ ಪರಿಷ್ಕರಣೆ ಮಾಡಲು ಚಿಂತನೆ ನಡೆಯುತ್ತಿದೆ.