ಬಾಲ್ಯ​ದಿಂದಲೂ ಕ್ರೀಡೆ​ಯ​ಲ್ಲಿ​ರಲಿ ಆಸ​ಕ್ತಿ-ಹೊರಟ್ಟಿ|ಸ ಕರ್ನಾಟಕ ವಿಶ್ವವಿದ್ಯಾಲಯ 69ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ|ಕ್ರೀಡಾ ನಿರ್ದೇಶಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಮೂಡುವಂತೆ ಪ್ರಯತ್ನಿಸಬೇಕು| ಕ್ರೀಡೆಗಾಗಿ ಮೀಸಲಿಟ್ಟಹಣ ದುರುಪಯೋಗವಾಗಬಾರದು|

ಧಾರವಾಡ(ಡಿ.11): ಬಾಲ್ಯ​ದಿಂದಲೂ ಕ್ರೀಡೆ​ಯಲ್ಲಿ ಆಸಕ್ತಿ ಹೊಂದ​ಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದೆಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ ಎಂದು ವಿಧಾನ ಪರಿ​ಷತ್‌ ಸದಸ್ಯ ಬಸ​ವ​ರಾಜ ಹೊರಟ್ಟಿ ಹೇಳಿ​ದ್ದಾರೆ.

ಆರ್‌.​ಎನ್‌. ಶೆಟ್ಟಿ ಕ್ರೀಡಾಂಗ​ಣ​ದಲ್ಲಿ ಸೋಮ​ವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯ 69ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಅಮೃತಧಾರೆ ಕ್ರೀಡಾ ಕೈಪಿಡಿಯನ್ನು ಬಿಡುಗಡೆ ಮಾಡಿದ ಅವರು, ಇತ್ತೀಚಿಗೆ ಕ್ರೀಡೆಯ ಕಡೆಗೆ ಆಸಕ್ತಿ ಕಡಿಮೆ ಆಗುತ್ತಿದೆ. ಓದಿನ ಕಡೆಗೆ ಒಲವು ಹೆಚ್ಚುತ್ತಿದೆ. ಕ್ರೀಡಾ ನಿರ್ದೇಶಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಮೂಡುವಂತೆ ಪ್ರಯತ್ನಿಸಬೇಕು. ಕ್ರೀಡೆಗಾಗಿ ಮೀಸಲಿಟ್ಟಹಣ ದುರುಪಯೋಗವಾಗಬಾರದು ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಮಾರಂಭಕ್ಕೆ ಚಾಲನೆ ನೀಡಿದ ಕವಿವಿ ಪ್ರಭಾರಿ ಕುಲಪತಿ ಎ.ಎಸ್‌. ಶಿರಾಳಶೆಟ್ಟಿ, ಈ ಕ್ರೀಡಾ​ಕೂಟ ಆಯೋ​ಜಿ​ಸಲು ಜೆಎ​ಸ್ಸೆಸ್‌ ಸಂಸ್ಥೆ ಮುಂದೆ ಬಂದಿದ್ದು ಸಂತೋ​ಷದ ಸಂಗ​ತಿ. ಎಲ್ಲ ಕ್ರೀಡಾಪಟುಗಳು ಸಕ್ರೀಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದರು.

ಬಂಗಾಲ ವಾರಿಯ​ರ್‍ಸ್ ತಂಡದ ಪ್ರೊ ಕಬಡ್ಡಿ ಪಟು ಸುಕೇಶ ಹೆಗಡೆ, ಯಾವ ಆಟದಲ್ಲಿ ನಮಗೆ ಆಸಕ್ತಿ ಇದೆಯೋ ಆ ಆಟದ ಬಗ್ಗೆ ಶ್ರದ್ಧೆ ಹೊಂದಿ​ರ​ಬೇಕು. ಆಟ​ದಲ್ಲಿ ಯಶಸ್ಸು ಕಾಣಲು ಕಠಿ​ಣ​ವಾದ ಪರಿ​ಶ್ರಮ ಅಗತ್ಯ. ನಾನೂ ಕೂಡಾ ಅಥ್ಲೇಟ್‌ ಇದ್ದೆ, ಕಬಡ್ಡಿಯನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ​ದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೆಎ​ಸ್ಸೆಸ್‌ ಕಾರ್ಯದರ್ಶಿ ಡಾ. ನ. ವಜ್ರಕುಮಾರ, ಜೀವನದಲ್ಲಿ ಯಶಸ್ಸು ಕಾಣಲು ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ ಬೇಕು ಎಂದರು. ಸಂಸ್ಥೆಯ ವಿತ್ತಾ​ಧಿಕಾರಿ ಡಾ. ಅಜಿತ ಪ್ರಸಾದ ಪ್ರಾಸ್ತಾ​ವಿ​ಕ ಮಾತುಗಳನ್ನಾಡಿದರು. ಪ್ರಾಚಾರ್ಯ ಡಾ.ಜಿ. ಕೃಷ್ಣಮೂರ್ತಿ ಸ್ವಾಗತಿಸಿದರು, ಡಾ. ಜಿನದತ್ತ ಹಡಗಲಿ, ರಂಜನಾ ಬಾದ್ರಿ ನಿರೂಪಿಸಿದರು. ಜಿನ್ನಪ್ಪ ಕುಂದಗೊಳ ವಂದಿಸಿದರು. ಡಾ. ಸೂರಜ್‌ ಜೈನ್‌, ಮಹಾವೀರ ಉಪಾದ್ಯೆ ಇದ್ದರು.

ಪ್ರಥಮ ದಿನದ ಕ್ರೀಡಾಕೂಟದ ಅಂತ್ಯದಲ್ಲಿ ಇಲ್ಲಿನ ಜೆಎ​ಸ್ಸೆಸ್‌ ಸಂಸ್ಥೆ ನಾಲ್ಕು ಬಂಗಾರದ ಪದಕ, ಆರು ಬೆಳ್ಳಿಯ ಪದಕ, ಎರಡು ಕಂಚಿನ ಪದಕ ಪಡೆಯುವ ಮೂಲಕ ಒಟ್ಟು 12 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಮೊದಲನೇ ದಿನವೇ ಎರಡು ದಾಖಲೆ ನಿರ್ಮಾಣ ಮಾಡ​ಲಾ​ಯಿತು. ಹೊನ್ನಾವರದ ಎಸ್‌.ಡಿ.ಎಂ ಪದವಿ ಕಾಲೇಜಿನ ನಾಗರಾಜಗೌಡ ಎತ್ತರ ಜಿಗಿತದಲ್ಲಿ ತನ್ನದೇ ಹೆಸರಿನಲ್ಲಿದ್ದ 1.89 ಮೀ. ಎತ್ತರವನ್ನು 1.90 ಎತ್ತರ ಜಿಗಿಯುವುದರ ಮೂಲಕ ಮೊದಲ ದಾಖಲೆಯನ್ನು ನಿರ್ಮಾಣ ಮಾಡಿದ್ದಾನೆ.ಅದೇ ರೀತಿ ಪುರುಷರ 200 ಮೀ ಓಟದಲ್ಲಿ ಹುಬ್ಬ​ಳ್ಳಿಯ ಕೆ.ಎಲ್‌.ಇ ಯ ಎಸ್‌.ಕೆ ಆಟ್ರ್ಸ ಮತ್ತು ಎಚ್‌.ಎಸ್‌.ಕೆ. ಸೈನ್ಸ ಕಾಲೇಜಿನ ವಿನಾಯಕ ಸೊಟ್ಟಣ್ಣವರ 21.78 ಸೆಕೆಂಡ್‌ನಲ್ಲಿ ಓಟವನ್ನು ಕ್ರಮಿಸುವುದರ ಮೂಲಕ ಇದರ ಹಿಂದೆ ಇದ್ದ 21.80 ಸೆಕೆಂಡ್‌ ದಾಖಲೆಯನ್ನು ಮುರಿದರು.