Asianet Suvarna News Asianet Suvarna News

ಶಿಗ್ಗಾಂವಿ: ಮಾನಸಿಕ ಅಸ್ವಸ್ಥ ವೃದ್ಧೆ ನೇಣಿಗೆ ಶರಣು

* ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ನಡೆದ ಘಟನೆ
* ತನ್ನ ಸೀರೆಯಿಂದ ನೇಣು ಹಾಕಿಕೊಂಡ ಮಾನಸಿಕ ಅಸ್ವಸ್ಥ ವೃದ್ಧೆ
* ಈ ಸಂಬಂಧ ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

Mentally Ill Woman Committed to Suicide at Shiggon in Haveri grg
Author
Bengaluru, First Published Aug 4, 2021, 9:10 AM IST
  • Facebook
  • Twitter
  • Whatsapp

ಶಿಗ್ಗಾಂವಿ(ಆ.04): ಮಾನಸಿಕ ಅಸ್ವಸ್ಥ ವೃದ್ಧೆಯೊಬ್ಬರು ನೇಣಿಗೆ ಶರಣಾದ ಘಟನೆ ಪಟ್ಟಣದ ಅಂಬೇಡ್ಕರ್‌ ಓಣಿಯ ಮನೆಯೊಂದರಲ್ಲಿ ಸಂಭವಿಸಿದೆ. ನೇಣಿಗೆ ಶರಣಾದ ವೃದ್ಧ ಮಹಿಳೆಯನ್ನು ವಿಜಯಲಕ್ಷ್ಮಿ ಕೋಂ ರಾಮಪ್ಪ ಧಾರವಾಡ (65) ಎಂದು ತಿಳಿದು ಬಂದಿದೆ. 

ಮೃತ ವೃದ್ಧೆ ಮಾನಸಿಕ ಅಸ್ವಸ್ಥಳಾಗಿದ್ದು ಆಸ್ಪತ್ರೆಗೆ ತೋರಿಸಿದರೂ ಫಲಕಾರಿಯಾಗಿರಲಿಲ್ಲ. ಜೊತೆಗೆ ಊಟವನ್ನೂ ಮಾಡುತ್ತಿರಲಿಲ್ಲ, ಸುಮ್ಮನೆ ಇರುತ್ತಿದ್ದಳು. ಅಕೆಯನ್ನು ಮನೆಯವರೇ ಸಮಾಧಾನಪಡಿಸಿ ಊಟ ಮಾಡಿಸುತ್ತಿದ್ದರು.

3 ವರ್ಷದಲ್ಲಿ 24,000 ಮಕ್ಕಳ ಆತ್ಮಹತ್ಯೆ!

ಸೊಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸೀರೆಯಿಂದ ನೇಣು ಹಾಕಿಕೊಂಡಿದ್ದಾಳೆ. ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios