ಸೋಶಿಯಲ್ ಮೀಡಿಯಾದಿಂದಾಗಿ 8 ವರ್ಷದ ನಂತರ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ..!
ಸೋಶಿಯಲ್ ಮೀಡಿಯಾದಿಂದ ತೊಂದರೆಗಳೆಷ್ಟಿವೆಯೋ ಹಾಗೆಯೇ ಸರಿಯಾಗಿ ಉಪಯೋಗಿಸಿದಲ್ಲಿ ಅಷ್ಟೇ ಪ್ರಯೋಜನವೂ ಇದೆ ಎಂಬುದು ಮತ್ತೊಮ್ಮೆ ನಿಜವಾಗಿದೆ. ಕಳೆದ 8 ವರ್ಷಗಳಿಂದ ಕುಟುಂಬದಿಂದ ದೂರವಾಗಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಸಾಮಾಜಿಕ ಜಾಲತಾಣದ ಮೂಲಕವೇ ಮತ್ತೆ ತನ್ನ ಕುಟುಂಬ ಸೇರುವಂತಾಗಿದೆ.
ಚಿಕ್ಕಮಗಳೂರು(ನ.24): ಸೋಶಿಯಲ್ ಮೀಡಿಯಾದಿಂದ ತೊಂದರೆಗಳೆಷ್ಟಿವೆಯೋ ಹಾಗೆಯೇ ಸರಿಯಾಗಿ ಉಪಯೋಗಿಸಿದಲ್ಲಿ ಅಷ್ಟೇ ಪ್ರಯೋಜನವೂ ಇದೆ ಎಂಬುದು ಮತ್ತೊಮ್ಮೆ ನಿಜವಾಗಿದೆ.
ಕಳೆದ 8 ವರ್ಷಗಳಿಂದ ಕುಟುಂಬದಿಂದ ದೂರವಾಗಿ ಅಲೆದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಸಾಮಾಜಿಕ ಜಾಲತಾಣದ ಮೂಲಕವೇ ಮತ್ತೆ ತನ್ನ ಕುಟುಂಬ ಸೇರುವಂತಾಗಿದೆ.
ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷ
ಕಳೆದ 6 ತಿಂಗಳಿನಿಂದ ತರೀಕೆರೆ ಪಟ್ಟಣದಲ್ಲಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥ ಪ್ರಸಾದ್ ಎಂಬಾತನ ಬಗ್ಗೆ ಅದೇ ಊರಿನ ಅಡಿಕೆ ವ್ಯಾಪರಿಯೊಬ್ಬರು ವಿಡಿಯೋ ಮಾಡಿ ಪೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ಕುಟುಂಬಸ್ಥರನ್ನು ತಲುಪಿ ಅವರು ಬಂದು ಪ್ರಸಾದ್‌ನನ್ನು ಸೇರಿಕೊಂಡಿದ್ದಾರೆ.
45 ವರ್ಷದ ಪ್ರಸಾದ್ ಮನೆಯಿಂದ ದೂರವಾಗಿ 8 ವರ್ಷಗಳೇ ಕಳೆದಿತ್ತು. ಎಲ್ಲೆಲ್ಲಿಯೋ ಓಡಾಡಿ ತರೀಕೆರೆಗೆ ತಲುಪಿದ್ದರು. ಅಡಿಕೆ ವ್ಯಾಪಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿ ವೈರಲ್ ಆಗಿತ್ತು. ಮಲೆಯಾಳ ಬಾಷೆ ಮಾತನಾಡುತ್ತಿದ್ದ ಪ್ರಸಾದ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿ ಅವರು ಮನೆಯವರನ್ನು ಸೇರಲು ಸಾಧ್ಯವಾಗಿದೆ.
ಕೊಡಚಾದ್ರಿ ಬೆಟ್ಟವೇರಿದ ಕುಂದಾಪುರ ಪೊಲೀಸರು!.
ಕೇರಳದ ವಯಾನಾಡು ಜಿಲ್ಲೆಯ ನೆರವಾರಂ ಮೂಲದ ಮಾನಸಿಕ ಅಸ್ವಸ್ಥ ಪ್ರಸಾದ್ ಸದ್ಯ ಕುಟುಂಬಸ್ಥರೊಂದಿಗಿದ್ದಾರೆ. ವಿಡಿಯೋ ನೋಡಿದ ಕುಟುಂಬಸ್ಥರು ಪೊಲೀಸರ ಸಹಾಯದಿಂದ 8 ವರ್ಷದ ನಂತರ ಪ್ರಸಾದ್‌ನನ್ನು ಸೇರಿದ್ದಾರೆ. 8 ವರ್ಷದ ಹಿಂದೆ ಪ್ರಸಾದ್ ವಯನಾಡಿನ ತನ್ನ ಮನೆಯಿಂದ ಕಾಣೆಯಾಗಿದ್ದ.
ಮಂಗಳೂರು ಬಂದರಿಗೆ ಬಂತು ಐಷಾರಾಮಿ ಪ್ರವಾಸಿ ನೌಕೆ..!