ಬೆಂಗಳೂರು(ಡಿ.12): ನೈಋುತ್ಯ ರೈಲ್ವೆಯು ಬೈಯಪ್ಪನಹಳ್ಳಿ ರೈಲ್ವೆ ಯಾರ್ಡ್‌ನಲ್ಲಿ ರೀಮೌಲ್ಡಿಂಗ್‌ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ವಿಜಯವಾಡ- ಬೆಂಗಳೂರು ಕಂಟೋನ್ಮೆಂಟ್‌- ವಿಜಯವಾಡ ಪ್ಯಾಸೆಂಜರ್‌ ರೈಲು ಸಂಚಾರ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಫೆ.28ರ ವರೆಗೆ ಬೆಂಗಳೂರು ಕಂಟೋನ್ಮೆಂಟ್‌- ಧರ್ಮಾವರಂ ಮಾರ್ಗದಲ್ಲಿ ಮೆಮು ವಿಶೇಷ ರೈಲು (ವಿದ್ಯುತ್‌ ಚಾಲಿತ) ಸಂಚಾರ ಆರಂಭಿಸಿದೆ.

ಬೆಳಗ್ಗೆ 7.20ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣದಿಂದ ಹೊರಡಲಿರುವ ಈ ವಿಶೇಷ ಮೆಮು ರೈಲು (ಸಂಖ್ಯೆ 06521) ಮಧ್ಯಾಹ್ನ 12.30ಕ್ಕೆ ಧರ್ಮಾವರಂ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 12.45ಕ್ಕೆ ಹೊರಡುವ ರೈಲು (ಸಂಖ್ಯೆ 06522) ಸಂಜೆ 5.25ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ರೈಲು ನಿಲ್ದಾಣ ತಲುಪಲಿದೆ.

ಸರ ಕಿತ್ತು ಪರಾರಿ ಆಗುತ್ತಿದ್ದವನಿಗೆ ಆಟೋ ಗುದ್ದಿಸಿ ಹಿಡಿದು ಚಾಲಕ!

ಈ ರೈಲು ಎರಡೂ ಕಡೆ ಸಂಚಾರದ ವೇಳೆ ಬೆಂಗಳೂರು ಪೂರ್ವ, ಬೈಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ರಾಜಾನುಕುಂಟೆ, ದೊಡ್ಡಬಳ್ಳಾಪುರ, ವಡ್ಡರಹಳ್ಳಿ, ಮಾಕಳಿದುರ್ಗ, ತೊಂಡೆಬಾವಿ, ಸೋಮೇಶ್ವರ, ಗೌರಿಬಿದನೂರು, ವಿದುರಾಶ್ವತ್ಥ, ದೇವರಪಲ್ಲೆ, ಹಿಂದೂಪುರ, ಮಲುಗುರ್‌, ಚಕೇರಲಪಲ್ಲಿ, ರಂಗಪಲ್ಲಿ, ಪೆನುಕೊಂಡ, ನಾರಾಯಣಪುರಂ, ಶ್ರೀಸತ್ಯಸಾಯಿ ಪ್ರಶಾಂತಿ ನಿಲಯಂ, ಕೊಟ್ಟಚೆರುವು ಮತ್ತು ಬಸಮಪಲ್ಲೆ ರೈಲು ನಿಲ್ದಾಣಗಳಲ್ಲಿ ನಿಂತು ಹೊರಡಲಿದೆ. ಭಾನುವಾರ ಹೊರತುಪಡಿಸಿ, ಉಳಿದೆಲ್ಲ ದಿನಗಳಲ್ಲಿ ಈ ರೈಲು ಸೇವೆ ಇರಲಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಉಡುಪಿ, ಕಲಬುರಗಿ ಪ್ರತ್ಯೇಕ ಪ್ರಕರಣ: ತುಮಕೂರು ವಿದ್ಯಾರ್ಥಿ ಸೇರಿ ಮೂವರು ಜಲಸಮಾಧಿ