ಕಲಬುರಗಿ/ಉಡುಪಿ(ಡಿ. 11) ಕಲಬುರಗಿ ಮತ್ತು ಉಡುಪಿ ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಮೂವರು ನೀರು ಪಾಲಾಗಿದ್ದಾರೆ. ಬುಧವಾರ ಏಳು ಕುಟುಂಬಗಳಿಗೆ ಕರಾಳ ದಿನವಾಗಿ ಮಾರ್ಪಟ್ಟಿದೆ.

ಕಲಬುರಗಿ:  ಈಜಲು ಹೋಗಿ ಇಬ್ಬರು ಕುರಿಗಾಯಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸೇಡಂ ತಾಲೂಕಿನ ಅರೆಬೊಮ್ನಳ್ಳಿ ಗ್ರಾಮದ ನರವೀರ(22) ಮತ್ತು ಯಲ್ಲಪ್ಪ ಯಳ್ಳುರ(28) ಮೃತ ದುರ್ದೈವಿಗಳು.

ಮೃತರು ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ನಿವಾಸಿಗಳು. ನದಿಗೆ ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ. ಸ್ಥಳೀಯರ ಸಹಾಯದಿಂದ ಮೃತ ದೇಹಗಳನ್ನು  ಅಗ್ನಿ ಶಾಮಕದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಡುಪಿ: ಮೂರು ದಿನದಲ್ಲಿ ಎರಡು ಚಿರತೆ ಸೆರೆ

ಉಡುಪಿ: ಸಮುದ್ರಕ್ಕೆ ಈಜಲು ತೆರಳಿದ 5 ಮಂದಿ ವಿದ್ಯಾರ್ಥಿಗಳಲ್ಲಿ ಓರ್ವ ಮೃತಪಟ್ಟಿದ್ದು ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಬೈಂದೂರು ತಾಲೂಕು ಕೊಡೇರಿ ಎಂಬಲ್ಲಿ ದುರ್ಘಟನೆ ಸಂಭವಿಸಿದೆ.

ಸಮುದ್ರದ ನೀರಿನ‌‌‌ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳನ್ನು ಮೀನುಗಾರರು ರಕ್ಷಣೆ ಮಾಡಿದ್ದಾರೆ. ನೀರಿನ‌ ಸೆಳೆತಕ್ಕೆ ಸಿಲುಕಿ ತುಮಕೂರು ಮೂಲದ  ಬಿಕಾಂ‌ ವಿದ್ಯಾರ್ಥಿ ನಿರಂಜನ್(17) ಮೃತಪಟ್ಟಿದ್ದಾರೆ. ಗುರುವಾರ ನಡೆಯುವ ಕೋಡಿಹಬ್ಬಕ್ಕೆ ಸ್ನೇಹಿತನ‌ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ಈಜಲು ತೆರಳಿದ್ದರು.