Asianet Suvarna News Asianet Suvarna News

ಮೇಲುಕೋಟೆ ಪರಿಚಾರಕ ಅಪ್ರಮೇಯಂ ನರಸಿಂಹ ಅಯ್ಯಂಗಾರ್ ನಿಧನ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ವಂಶಪಾರಂಪರ್ಯ ಪರಿಚಾರಕರಾದ ಅಪ್ರಮೇಯಂ ನರಸಿಂಹಯ್ಯಂಗಾರ್  ನಿಧನರಾಗಿದ್ದಾರೆ.  

Melukote attendant Aprameyam Narasimha Iyengar passed away gow
Author
First Published Oct 20, 2022, 7:25 PM IST | Last Updated Oct 20, 2022, 7:25 PM IST

ಮಂಡ್ಯ (ಅ.20): ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ವಂಶಪಾರಂಪರ್ಯ ಪರಿಚಾರಕರಾದ ಅಪ್ರಮೇಯಂ ನರಸಿಂಹಯ್ಯಂಗಾರ್ (72) ನಿಧನರಾಗಿದ್ದಾರೆ. ಕೆಲದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ಬುಧವಾರ ಪಾಶ್ವವಾಯು ಭಾದಿಸಿತ್ತು. ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ. ಕಳೆದ 60 ವರ್ಷಗಳಿಂದ ಚೆಲುವನಾರಾಯಣ ಸ್ವಾಮಿ ದೇಗುಲದ ಪರಿಚಾರಿಕೆ. ನಮ್ಮಾಳ್ವಾರ್, ಸುದರ್ಶನಾಳ್ವಾರ್ ಇತರ ಸನ್ನಿಧಿಗಳ ನಿರ್ವಹಣೆಯ ಜೊತೆಗೆ ದೇವಾಯದ ಪವಿತ್ರೋತ್ಸವಕ್ಕೆ ವೈಭವದ ಮೆರಗು ತಂದುಕೊಟ್ಟಿದ್ದರು.  ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದ ಅವರು ನಿರಂತರ ಸೇವಾ ಕೈಂಕರ್ಯಕ್ಕಾಗಿ ಜೀವನ ಮುಡಿಪಾಗಿಟ್ಟಿದ್ದರು. ಮೃತರಿಗೆ ಪತ್ನಿ ಓರ್ವಪುತ್ರ, ಮೂವರು ಸಹೋದರರು,ಇಬ್ಬರು ಸಹೋದರಿಯರಿದ್ದಾರೆ. ಪರಿಚಾರಕ ಸಂಪ್ರದಾಯದಂತೆ ಚೆಲುವನಾರಾಯಣನ ಮಾಲೆ ಮರ್ಯಾದೆಯೊಂದಿಗೆ ಮೃತರ ಅಂತ್ಯಕ್ರಿಯೆ ಮೇಲುಕೋಟೆಯಲ್ಲಿ ನಡೆಯಿತು.

ಮೇಲುಕೋಟೆಯಲ್ಲಿ 25 ವರ್ಷಗಳ ಬಳಿಕ ಮಹಾಮಳೆ
ಮೇಲುಕೋಟೆ: ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ 25 ವರ್ಷಗಳ ಬಳಿಕ ಮಹಾಮಳೆ ಇತಿಹಾಸ ಸೃಷ್ಟಿಸಿದೆ. ಐತಿಹಾಸಿಕ ಕೊಳಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ದಕ್ಷಿಣ ಭಾರತದಲ್ಲೇ ಎರಡನೇ ಅತಿದೊಡ್ಡ ಪಂಚಕಲ್ಯಾಣಿಯಲ್ಲಿ ಗರಿಷ್ಟಪ್ರಮಾಣದ ನೀರು ಸಂಗ್ರಹವಾಗಿ ಕಣ್ಣಿಗೆ ರಸದೌತಣ ನೀಡುತ್ತಿದೆ. ಮೇಲುಕೋಟೆಯ ಪವಿತ್ರವಾದ ಅಷ್ಟತೀರ್ಥಗಳು ತುಂಬಿ ತುಳುಕುತ್ತಿವೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಗೆ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯ ಎಲ್ಲಾ ಕೊಳಗಳು ತುಂಬಿವೆ. ಒಂದೊಂದು ಕೊಳದಲ್ಲೂ 15 ರಿಂದ 20 ಅಡಿಗಳಷ್ಟುನೀರು ಸಂಗ್ರಹವಾಗಿದೆ. ಕಲ್ಯಾಣಿ ಹಾಗೂ ಇಲ್ಲಿನ ಐತಿಹಾಸಿಕ ಕೊಳಗಳ ಮನಮೋಹಕ ಸೊಬಗು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

ಮೇಲುಕೋಟೆ ಚೆಲುವನಾರಾಯಣನಿಗೂ ತಟ್ಟಿದ ಧರ್ಮಸಂಕಟ

ಕಳೆದ 25 ವರ್ಷಗಳ ಹಿಂದೆ ಇಲ್ಲಿನ ಕೊಳಗಳು ತುಂಬಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಮತ್ತೆ ಮಹಾಮಳೆಗೆ ಇತಿಹಾಸ ಮರುಕಳಿಸಿ ನೋಡುಗರ ಕಣ್ಮನ ಸೆಳೆಯುತ್ತಿವೆ. ಒಂದು ಸಾವಿರ ವರ್ಷಗಳ ಹಿಂದೆ ಭಗವದ್‌ ಋುಷಿಮುನಿಗಳು ತಪಸ್ಸು ಮಾಡಿದ ಸ್ಥಳಗಳಲ್ಲಿ ಹಾಗೂ ರಾಮಾನುಜಾಚಾರ್ಯರು ಜೀರ್ಣೋದ್ಧಾರ ಮಾಡಿದ ವೇದ ಪುಷ್ಕರಣಿ, ಯಾದವಾತೀರ್ಥ, ದರ್ಬತೀರ್ಥ, ಪಲಾಶರ ತೀರ್ಥ, ಪದ್ಮತೀರ್ಥ, ನರಸಿಂಹ ತೀರ್ಥ, ನಾರಾಯಣ ತೀರ್ಥಗಳು ತುಂಬಿ ಕೋಡಿಬಿದ್ದಿವೆ.

ಮೇಲುಕೋಟೆ ಬಾಹುಬಲಿ ನಿಧನ: ಪ್ರಯಾಸವಿಲ್ಲದೆ ನಿತ್ಯವೂ ಬೆಟ್ಟಕ್ಕೆ ನೀರು ಹೊತ್ತು ತರುತ್ತಿದ್ದ ಅಯ್ಯಂಗಾರ್‌!

ಜೊತೆಗೆ ಅಕ್ಕತಂಗಿ ಕೊಳ್ಳ, ಬೆಟ್ಟದ ಕೊಳ, ತೆಪ್ಪಕೊಳ, ಪುಟ್ಟನರಸೀ ಕೊಳ, ಚೊತ್ತಿಕೊಳ ಸೇರಿದಂತೆ ಎಲ್ಲಾ ಕೊಳಗಳೂ ಸಹ ಭರ್ತಿಯಾಗಿ ಚೆಲುವಯ್ಯನ ಕ್ಷೇತ್ರದಲ್ಲಿ ಇತಿಹಾಸ ನಿರ್ಮಾಣವಾಗಿದೆ. ವೇದಪುಷ್ಕರಣಿಯಲ್ಲಿ ಮಂಟಪದ ಒಳಭಾಗವಿರುವ ದತ್ತಪಾದುಕೆಯ ಸುತ್ತ ಮಳೆ ನೀರು ಆವರಿಸಿದೆ. ಮೇಲುಕೋಟೆ ಕೊಳಗಳು ಆಕರ್ಷಕ ಮೆಟ್ಟಿಲುಗಳ ಜೊತೆಗೆ ನಿರ್ಮಾಣವಾಗಿದೆ. ಮಳೆ ನೀರು ಸಂಗ್ರಹದ ಉದ್ದೇಶವನ್ನೂ ಒಳಗೊಂಡಿವೆ.

Latest Videos
Follow Us:
Download App:
  • android
  • ios