ಜುಬಿಲಿಯಂಟ್‌ನಲ್ಲಿ ಜೂನ್ 1ರಿಂದ ಔಷಧ ಉತ್ಪಾದನೆ ಆರಂಭ!
ನಂಜನಗೂಡಿನ ನಂಜಿನಿಂದಾಗಿ ಮುಚ್ಚಲ್ಪಟ್ಟಿದ್ದ ಮೈಸೂರು ಜುಬಿಲಿಯಂಟ್ ಕಾರ್ಖಾನೆಯಲ್ಲಿ ಜೂನ್ 1ರಿಂದ ಔಷಧ ಉತ್ಪಾದನೆ ಆರಂಭವಾಗಲಿದೆ. ಆರಂಭದಲ್ಲಿ ಕಾರ್ಖಾನೆಯ ಹಲವು ಕಾರ್ಮಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ನಂಜನಗೂಡು ರಾಜ್ಯದಲ್ಲಿ ಸುದ್ದಿ ಮಾಡಿತ್ತು.
ಮೈಸೂರು(ಮೇ 28): ನಂಜನಗೂಡಿನ ನಂಜಿನಿಂದಾಗಿ ಮುಚ್ಚಲ್ಪಟ್ಟಿದ್ದ ಮೈಸೂರು ಜುಬಿಲಿಯಂಟ್ ಕಾರ್ಖಾನೆಯಲ್ಲಿ ಜೂನ್ 1ರಿಂದ ಔಷಧ ಉತ್ಪಾದನೆ ಆರಂಭವಾಗಲಿದೆ. ಆರಂಭದಲ್ಲಿ ಕಾರ್ಖಾನೆಯ ಹಲವು ಕಾರ್ಮಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ನಂಜನಗೂಡು ರಾಜ್ಯದಲ್ಲಿ ಸುದ್ದಿ ಮಾಡಿತ್ತು.
ಕೊರೊನಾ ನಂಜಿನಿಂದ ನಲುಗಿದ್ದ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಪ್ರೊಡಕ್ಷನ್ ಶುರುವಾಗಿದೆ. ಜೂನ್ 1ರಿಂದ ಔಷಧ ಉತ್ಪಾದನೆ ಆರಂಭವಾಗಲಿದೆ. ನಂಜನಗೂಡಿನ ಕಾರ್ಖಾನೆಯಲ್ಲಿ ಬಿರುಸಿನ ಸಿದ್ಧತೆ ನಡೆದಿದೆ.
60 ದಿನಗಳ ನಂತ್ರ ಜುಬಿಲಿಯೆಂಟ್ ಕಾರ್ಖಾನೆ ಪುನರಾರಂಭ
ಎರಡು ತಿಂಗಳ ಬಳಿಕ ಕಾರ್ಖಾನೆಯ ಬಾಗಿಲು ಓಪನ್ ಆಗಿದ್ದು, ಈಗಾಗಲೇ ಕೆಲವು ಕಾರ್ಮಿಕರನ್ನು ಕರೆಸಿ ವಿವಿಧ ಕೆಲಸಗಳ ಆರಂಭ ಮಾಡಲಾಗಿದೆ. ಕೆಲಸಕ್ಕೆ ಹಾಜರಾಗಲು ಉಳಿದವರಿಗೂ ಸೂಚನೆ ನೀಡಲಾಗಿದೆ.
ಕೋವಿಡ್–19 ಚಿಕಿತ್ಸೆಗೆ ಬಳಸುವ ಔಷಧವೂ ಸೇರಿ ಹಲವು ಮಹತ್ವದ ಔಷಧಗಳಿಗೆ ವ್ಯಾಪಕ ಬೇಡಿಕೆ ಉಂಟಾಗಿದೆ. ಬೇಡಿಕೆ ಇರುವುದರಿಂದ ಘಟಕ ಆರಂಭಿಸಲು ಅನುಮತಿ ನೀಡಬೇಕೆಂದು ಕಾರ್ಖಾನೆಯ ಪ್ರಮುಖರು ಮನವಿ ಮಾಡಿಕೊಂಡಿದ್ದಾರೆ. ಪುನರಾರಂಭಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ರಾಜ್ಯ ಸರ್ಕಾರ ರಚಿಸಿರುವ ಸಮಿತಿ ಸದಸ್ಯರು ಎರಡು ದಿನದ ಹಿಂದೆ ಕಾರ್ಖಾನೆಗೆ ಬಂದು ಪರಿಶೀಲನೆ ನಡೆಸಿದ್ದರು.
ನಂಜನಗೂಡು ಜುಬಿಲಿಯಂಟ್ ಕೇಸ್ ತನಿಖೆ ಸಿಬಿಐಗೆ..?
ಕಾರ್ಖಾನೆ ಬಾಗಿಲು ತೆರೆದ ದಿನ ಉದ್ಯೋಗಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಸೇರಿ ಆರೋಗ್ಯ ತಪಾಸಣೆ ನಡೆಸಿ ಒಳಗೆ ಬಿಡಲಾಗಿತ್ತು. ಹಾಗೆಯೇ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಲಾಗಿತ್ತು.