ಚಿಕ್ಕಬಳ್ಳಾಪುರ: 'ಬಿಜೆಪಿ ಗೆದ್ದರೆ ಮಾತ್ರ ಮೆಡಿಕಲ್ ಕಾಲೇಜು'..!

ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು, ಕಾಂಗ್ರೆಸ್ ಗೆದ್ದರೆ ಕನಕಪುರಕ್ಕೆ ವೈದ್ಯಕೀಯ ಕಾಲೇಜು. ಇದರಲ್ಲಿ ಯಾವುದು ಬೇಕು ಎಂಬುದನ್ನು ಜಿಲ್ಲೆಯ ಜನತೆ ಯೇ ನಿರ್ಧರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.

medical college will build in chikkaballapur if only bjp win byelection says ct ravi

ಚಿಕ್ಕಬಳ್ಳಾಪುರ(ನ.16): ಪ್ರಸ್ತುತ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು, ಕಾಂಗ್ರೆಸ್ ಗೆದ್ದರೆ ಕನಕಪುರಕ್ಕೆ ವೈದ್ಯಕೀಯ ಕಾಲೇಜು. ಇದರಲ್ಲಿ ಯಾವುದು ಬೇಕು ಎಂಬುದನ್ನು ಜಿಲ್ಲೆಯ ಜನತೆ ಯೇ ನಿರ್ಧರಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರಕ್ಕೆ ಅಭಿವೃದ್ಧಿ ಬೇಕೇ ಅಥವಾ ಗೂಂಡಾಗಿರಿ ಬೇಕೆ ಎಂಬುದು ಪ್ರಮುಖ ಪ್ರಶ್ನೆಯಾಗಿದ್ದು, ಆಯ್ಕೆ ಮತದಾರರ ಮುಂದಿದೆ ಎಂದು ಹೇಳಿದ್ದಾರೆ.

ಸುಧಾಕರ್ ಗೆದ್ದರೆ ಕೇಬಲ್ ಕಾರ್:

ಡಾ. ಸುಧಾಕರ್ ಅವರನ್ನು ಗೆಲ್ಲಿಸಿ ಸಚಿವರನ್ನಾಗಿ ಮಾ ಡುವ ಹೊಣೆ ಜಿಲ್ಲೆಯ ಪ್ರತಿಯೊಬ್ಬ ಮತದಾರನ ಮೇಲಿದೆ. ಅನರ್ಹ ಶಾಸಕರನ್ನು ಸೋಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ರವಿ, ಚುನಾವಣೆ ಯುದ್ಧ ವಿದ್ದಂತೆ ಮಹಾಭಾರತದಲ್ಲಿ ಅತಿರಥ ಮಹಾ ರಥರು ಕೌರವ ಪಾಳೆಯದಲ್ಲಿದ್ದರೆ, ಶ್ರೀಕೃಷ್ಣ ನೊಬ್ಬನೇ ಪಾಂಡವರ ಪಾಳೆಯದಲ್ಲಿದ್ದ. ಆದರೆ ಕೊನೆಗೆ ಗೆದ್ದಿದ್ದು, ಧರ್ಮ ಎಂಬುದು ಮರೆಯುವಂತಿಲ್ಲ ಎಂದಿದ್ದಾರೆ. ಪ್ರಸ್ತುತ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರನ್ನು ಗೆಲ್ಲಿಸಿ, ವಿಶ್ವ ಪ್ರಸಿದ್ಧ ನಂದಿ ಗಿರಿಧಾಮಕ್ಕೆ ನಾನು ಕೇಬಲ್ ಕಾರ್ ನೀಡುತ್ತೇನೆ ಎಂದಿದ್ದಾರೆ.

ಅನ್ಯಾಯ ತಪ್ಪಿಸಲು ಸುಧಾಕರ್ ಬಿಜೆಪಿಗೆ

ಸಂಸದ ಪಿ.ಸಿ. ಮೋಹನ್ ಮಾತನಾಡಿ, ಕಳೆದ 70 ವರ್ಷಗಳಿಂದ ನಿರಂತರವಾಗಿ ಜಿಲ್ಲೆಗೆ ಆಗಿರುವ ಅನ್ಯಾಯ ತಪ್ಪಿಸಲು ಡಾ.ಕೆ. ಸುಧಾಕರ್ ಬಿಜೆಪಿ ಸೇರಿದ್ದಾರೆ. 70 ವರ್ಷದಿಂದ ಬಾಕಿ ಇದ್ದ ಕೆಲಸಗಳು ಕೇವಲ 100 ದಿನದಲ್ಲಿ ಮಾಡುವಲ್ಲಿ ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ. ಮಂಜುನಾಥ್ ಮಾತನಾಡಿ, ಸುಧಾಕರ್ ಅವರು ಬಿಜೆಪಿ ಸೇರಿರು ವುದು ಮತ್ತು ಪಕ್ಷದ ಅಭ್ಯರ್ಥಿಯಾಗಿರುವುದು ಸ್ವಾಗತಾರ್ಹವಾಗಿದ್ದು, ಪಕ್ಷದ ಅಭ್ಯರ್ಥಿ ಯಾರೇ ಆದರೂ ಪ್ರಮಾಣಿಕವಾಗಿ ಶ್ರಮಿಸಿ ಅವರ ಗೆಲುವಿಗೆ ಕಾರಣರಾಗುವುದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ಮುಖಂಡರಾದ ಶಿವಕುಮಾರ್, ಕಾಂತರಾಜ್, ರವಿನಾರಾಯಣರೆಡ್ಡಿ, ಅಗಲಗುರ್ಕಿ ಚಂದ್ರ ಶೇಖರ್, ಮಾಜಿ ಶಾಸಕ ಜ್ಯೋತಿರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

medical college will build in chikkaballapur if only bjp win byelection says ct raviತುಮಕೂರು: ಸರ್ಕಾರಿ ಶಾಲೆ ಶಿಕ್ಷಕಿಯ ಡ್ಯಾನ್ಸ್ ಪಾಠ ವೈರಲ್.

Latest Videos
Follow Us:
Download App:
  • android
  • ios