ಮರೆಯಾದ ಮಯೂರ ಚಿತ್ರ ಮಂದಿರ
ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಬೃಹತ್ ಚಿತ್ರ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಲ್ಲಿನ ಮಯೂರ ಚಿತ್ರಮಂದಿರ ಇನ್ನು ಮುಂದೆ ಇತಿಹಾಸದ ಪುಟ ಸೇರಲಿದೆ. ಡಾ. ರಾಜ್‌ಕುಮಾರ್ ಅಭಿನಯಿಸಿದ್ದ ಮಯೂರ ಚಿತ್ರ ಪ್ರದರ್ಶಿಸುವ ಮೂಲಕ ಆರಂಭಗೊಂಡಿದ್ದ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ಕ್ರಾಂತಿ ಕಡೆಯ ಚಿತ್ರ.
ಶಿಡ್ಲಘಟ್ಟ : ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಬೃಹತ್ ಚಿತ್ರ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಲ್ಲಿನ ಮಯೂರ ಚಿತ್ರಮಂದಿರ ಇನ್ನು ಮುಂದೆ ಇತಿಹಾಸದ ಪುಟ ಸೇರಲಿದೆ. ಡಾ. ರಾಜ್‌ಕುಮಾರ್ ಅಭಿನಯಿಸಿದ್ದ ಮಯೂರ ಚಿತ್ರ ಪ್ರದರ್ಶಿಸುವ ಮೂಲಕ ಆರಂಭಗೊಂಡಿದ್ದ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ಕ್ರಾಂತಿ ಕಡೆಯ ಚಿತ್ರ.
ಶಿಡ್ಲಘಟ್ಟನಗರದಲ್ಲಿನ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದಲ್ಲಿ ಚಿಂತಾಮಣಿ ವೃತ್ತ ಇದ್ದು ಅಲ್ಲಿರುವ ಮಯೂರ ಚಿತ್ರ ಮಂದಿರದಿಂದಾಗಿ ಅಲ್ಲಿನ ವೃತ್ತಕ್ಕೆ ಮಯೂರ ವೃತ್ತ ಎಂದು ಹೆಸರಾಗಿದೆ. ಮಯೂರ ಚಿತ್ರ ಮಂದಿರ ಕೇವಲ ಚಿತ್ರ ಮಂದಿರವಾಗದೆ ಶಿಡ್ಲಘಟ್ಟದ ಪಾಲಿಗೆ ಲ್ಯಾಂಡ್ ಮಾರ್ಕ್ ಆಗಿತ್ತು.
ಮಯೂರ ಚಿತ್ರ ಮಂದಿರವನ್ನು ಇದೀಗ ನೆಲಸಮ ಮಾಡಲಾಗಿದೆ. ಮಯೂರ ಚಿತ್ರ ಮಂದಿರ ಇಲ್ಲವಾದರೂ ಮಯೂರ ವೃತ್ತ ಮಾತ್ರ ಶಾಶ್ವತವಾಗಿರಲಿದೆ. 1981ರಲ್ಲಿ ನಿರ್ಮಾಣವಾಗಿದ್ದ ಮಯೂರ ಚಿತ್ರ ಮಂದಿರದಲ್ಲಿ ಡಾ.ರಾಜ್ ಕುಮಾರ್ ಅವರ ಮಯೂರ ಚಿತ್ರವನ್ನೇ ಪ್ರದರ್ಶನ ಮಾಡುವ ಮೂಲಕ ಆರಂಭಿಸಿದ್ದ ಚಿತ್ರಮಂದಿರವನ್ನು ಆಗಿನ ಶಾಸಕರಾಗಿದ್ದ ದಿವಂಗತ ಎಸ್.ಮುನಿಶಾಮಪ್ಪ ಅವರು ಉದ್ಘಾಟಿಸಿದ್ದರು.
ಆರಂಭದ ದಿನಗಳಲ್ಲಿ ಕೇವಲ ಕನ್ನಡ ಚಲನ ಚಿತ್ರಗಳನ್ನಷ್ಟೆಪ್ರದರ್ಶನ ನೀಡುತ್ತಿದ್ದ ಇದರಲ್ಲಿ ನಂತರ ವರ್ಷಗಳಲ್ಲಿ ತೆಲುಗು, ಹಿಂದಿ ಚಿತ್ರಗಳನ್ನು ಸಹ ಪ್ರದರ್ಶಿತವಾಗುತ್ತಿದ್ದವು, ಇತ್ತೀಚೆಗೆ ತೆರೆ ಕಂಡ ಕಾಂತರ ಕನ್ನಡ ಚಿತ್ರ 50 ದಿನಗಳ ಸಂಭ್ರಮದಿಂದ ಆಚಿರಿಸಿಕೊಂಡಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಮಯೂರ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಂಡ ಕಡೆಯ ಚಿತ್ರ.
ಇಲ್ಲಿನ ಮೊದಲ ದರ್ಜೆ ಗುತ್ತಿಗೆದಾರ ಸೀತಾರಾಮಯ್ಯ ಹಾಗೂ ಅವರ ಸಹೋದರ ಎನ್.ವೆಂಕಟನಾರಾಯಣಯ್ಯ ಅಣ್ಣ ತಮ್ಮಂದಿರು ನಿರ್ಮಿಸಿದ್ದ ಮಯೂರ ಚಿತ್ರ ಮಂದಿರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೆ ಅತಿ ದೊಡ್ಡದಾದ 900 ಆಸನಗಳುಳ್ಳ ಬೃಹತ್ ಸಿನಿಮಾ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಸಣ್ಣ ಸಿನಿಮಾಗಳಿಗೇಕೆ ಇಲ್ಲಿ ಜಾಗವಿಲ್ಲ
ಆರ್. ಕೇಶವಮೂರ್ತಿ
ಪ್ರತಿ ವರ್ಷ 200ರಿಂದ 250 ಸಿನಿಮಾಗಳು ತೆರೆಕಾಣುತ್ತಿವೆ. ಈ ಪೈಕಿ ಸ್ಟಾರ್ ನಟರ ಚಿತ್ರ ಐದಾರು. ಉಳಿದವು ಸಣ್ಣ ಬಜೆಟ್‌ನ ಚಿತ್ರಗಳು. ಚಿತ್ರರಂಗವನ್ನು ಸಾಕುವುದು ಇವೇ. ಆದರೂ ಈ ಚಿತ್ರಗಳಿಗೆ ಎಲ್ಲ ರೀತಿಯ ಸಮಸ್ಯೆಗಳು...ಎಂದಿದ್ದು ನಿರ್ದೇಶಕ ಪುರಿ ಜಗನ್ನಾಥ್. ಸಾಧುಕೋಕಿಲ ಕೂಡ ‘ದೊಡ್ಡ ಬಜೆಟ್‌ನ ಸ್ಟಾರ್ ನಟರ ಚಿತ್ರಗಳ ಮೋಹದಲ್ಲಿ ಸಣ್ಣ ಚಿತ್ರಗಳನ್ನು ನೋಡುವುದು ಮರೆಯಬೇಡಿ’ ಎಂದಿದ್ದರು.
ಹಾನಗಲ್‌ನ ಶಿವಯೋಗಿ ಕುಮಾರ ಸ್ವಾಮಿಗಳ ಕಥೆ;ವಿರಾಟಪುರ ವಿರಾಗಿ ಎಲ್ಲರ ಸಿನಿಮಾ ಎಂದ ಬಿ ಎಸ್ ಲಿಂಗದೇವರು
ಕಳೆದ ವರ್ಷ ತೆರೆಗೆ ಬಂದ ಪ್ಯಾನ್ ಇಂಡಿಯಾ ಹಾಗೂ ಅದ್ದೂರಿ ಬಜೆಟ್ ಸಿನಿಮಾಗಳ ಹೊರತಾಗಿ ಸಣ್ಣ ಬಜೆಟ್‌ನ ಚಿತ್ರಗಳು ಬಂದ ಪುಟ್ಟಹೋದ ಪುಟ್ಟಎನ್ನುವಂತಾಗಿದೆ. ಬಹಳಷ್ಟುಚಿತ್ರಗಳು ಚೆನ್ನಾಗಿದ್ದರೂ ಪ್ರೇಕ್ಷಕರು ಆ ಚಿತ್ರಗಳನ್ನು ನೋಡಿಲ್ಲ. ಅಥವಾ ಪ್ರೇಕ್ಷಕರು ನೋಡುವ ಮುನ್ನವೇ ಅವು ಥಿಯೇಟರ್‌ಗಳಿಂದ ಮಾಯ ಆಗಿವೆ. ಜನವರಿ ಮೊದಲ ವಾರದಲ್ಲಿ ತೆರೆಗೆ ಬಂದ 9 ಚಿತ್ರಗಳು ಅನಾಥ ಭಾವನೆ ಎದುರಿಸುತ್ತಿವೆ. ಈ ನೋವಲ್ಲಿರುವ ನಿರ್ದೇಶಕರ ಮಾತುಗಳು ಇಲ್ಲಿವೆ.
1. ನಿರ್ದೇಶಕ ಲಿಂಗದೇವರು, ವಿರಾಟಪುರ ವಿರಾಗಿ ನಿರ್ದೇಶಕ; ‘ನಾವು ಪ್ರೇಕ್ಷಕರ ಅಭಿರುಚಿಯನ್ನು ಕರಪ್‌್ಟಮಾಡಿದ್ದೇವೆ. ಹೊಡಿ ಬಡಿ ಚಿತ್ರಗಳನ್ನೇ ಅವರ ಮುಂದಿಟ್ಟು, ಇದೇ ಸಿನಿಮಾ ಎಂದಿದ್ದೇವೆ. ಪ್ರೇಕ್ಷಕರು ಅಂಥ ದೊಡ್ಡ ಸಿನಿಮಾಗಳ ಗುಂಗಿನಲ್ಲಿ ಇದ್ದಾರೆ. 160 ಶೋಗಳ ಟಿಕೆಟ್‌ಗಳು ಮುಂಗಡವಾಗಿ ಸೇಲ್ ಆಗಿದ್ದರೂ ‘ವಿರಾಟಪುರ ವಿರಾಗಿ’ ಚಿತ್ರಕ್ಕೆ ಥಿಯೇಟರ್‌ಗಳು ಸಿಗುತ್ತಿಲ್ಲ . ಈ ಕರಪ್‌್ಟವಾತಾವರಣ ಸಂಪೂರ್ಣವಾಗಿ ಬದಲಾಗಬೇಕು. ಆಗ ದೊಡ್ಡ ಸಿನಿಮಾ, ಚಿಕ್ಕ ಸಿನಿಮಾ ಎನ್ನುವ ಭಾವನೆ ದೂರವಾಗುತ್ತದೆ.’