ತುಮಕೂರು: ಮಳೆಹಾನಿ ಪ್ರದೇಶದಲ್ಲಿ ಮೇಯರ್‌, ಉಪಮೇಯರ್‌ ಸುತ್ತಾಟ

ಕಳೆದ ರಾತ್ರಿಯಿಂದ ಬೆಳಗಿನ ಜಾವದವರೆಗೂ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ನೀರು ನುಗ್ಗಿದ ಸ್ಥಳಗಳಿಗೆ ನಗರ ಪಾಲಿಕೆ ಮೇಯರ್‌ ಪ್ರಭಾವತಿ, ಉಪ ಮೇಯರ್‌ ಟಿ.ಕೆ. ನರಸಿಂಹಮೂರ್ತಿ, ಆಯುಕ್ತೆ ರೇಣುಕಾ ಅವರೊಂದಿಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಶುಕ್ರವಾರ ಭೇಟಿ ಪರಿಶೀಲನೆ ಮಾಡಿದರು.

Mayor Visits flood Affected Area snr

 

 ತುಮಕೂರು (ಅ.15): ಕಳೆದ ರಾತ್ರಿಯಿಂದ ಬೆಳಗಿನ ಜಾವದವರೆಗೂ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧೆಡೆ ನೀರು ನುಗ್ಗಿದ ಸ್ಥಳಗಳಿಗೆ ನಗರ ಪಾಲಿಕೆ ಮೇಯರ್‌ ಪ್ರಭಾವತಿ, ಉಪ ಮೇಯರ್‌ ಟಿ.ಕೆ. ನರಸಿಂಹಮೂರ್ತಿ, ಆಯುಕ್ತೆ ರೇಣುಕಾ ಅವರೊಂದಿಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಶುಕ್ರವಾರ ಭೇಟಿ ಪರಿಶೀಲನೆ ಮಾಡಿದರು.

8 ಮತ್ತು 9ನೇ ವಾರ್ಡ್‌ ವ್ಯಾಪ್ತಿಯ ಗುಬ್ಬಿಗೇಟ್‌ ರಿಂಗ್‌ ರಸ್ತೆಯಲ್ಲಿ ಚರಂಡಿ ನೀರು ಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗಿ ಅವಾಂತರ ಉಂಟು ಮಾಡಿತ್ತು. ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಈ ಪರಿಸ್ಥಿತಿ ಬಂದಿದೆ, ಕೂಡಲೇ ಸರಿಪಡಿಸಿ ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಮೇಯರ್‌, ಉಪ ಮೇಯರ್‌,ಆಯುಕ್ತರು, ಆ ಭಾಗದ ನಗರಪಾಲಿಕೆ ಸದಸ್ಯ ಸೈಯದ್‌ ನಯಾಜ್‌ಅಹ್ಮದ್‌, ಕಾರ್ಯಪಾಲಕ ಇಂಜಿನಿಯರ್‌ ಆಶಾ ಇತರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಶೀಲಿಸಿ, ಸಾರ್ವಜನಿಕರ ಆಹವಾಲು ಸ್ವೀಕರಿಸಿದರು.

ಸ್ಮಾರ್ಚ್‌ ಸಿಟಿಯವರು ಇತ್ತೀಚೆಗೆ ನಿರ್ಮಾಣ ಮಾಡಿದ್ದ ರಸ್ತೆಯ ಪಶ್ಚಿಮ ಭಾಗದ ಸವೀರ್‍ಸ್‌ ರಸ್ತೆ ಬದಿಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಉಕ್ಕಿ ಅಕ್ಕಪಕ್ಕದ ಅಂಗಡಿಗಳಿಗೆ ನುಗ್ಗಿತ್ತು.ಚರಂಡಿಯ ಹೂಳು ತೆಗೆಯಬೇಕು, ಮುಖ್ಯವಾಗಿ ವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿಲ್ಲ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಆಗಿರುವ ಲೋಪವನ್ನು ಸರಿಪಡಿಸಲು ಸೂಚಿಸಬೇಕು ಎಂದು ಪಾಲಿಕೆ ಸದಸ್ಯ ಸೈಯದ್‌ ನಯಾಜ್‌ಅಹ್ಮದ್‌ ಒತ್ತಾಯಿಸಿದರು.

ಸರಿಪಡಿಸಲುಕ್ರಮ ತೆಗೆದುಕೊಳ್ಳದಿದ್ದರೆ ನಾಗರೀಕರೊಂದಿಗೆ ಸೇರಿ ರಸ್ತೆ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ನಗರದ ಬಹುತೇಕ ಚರಂಡಿಗಳು ಕಸ ತುಂಬಿಕೊಂಡು ನೀರು ಸರಾಗ ಹರಿಯದ ದುಸ್ಥಿತಿಯಲ್ಲಿವೆ. ಮಳೆ ಸುರಿದಾಗ ಇಂತಹ ಅವಾಂತರ ಉಂಟಾಗುತ್ತದೆ. ಅಂತಹ ಕಡೆ ಚರಂಡಿ ಕಸ, ಹೂಳು ತೆಗೆದು ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಉಪ ಮೇಯರ್‌ ಟಿ.ಕೆ. ನರಸಿಂಹಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ರಾತ್ರಿ ಸುರಿದ ಮಳೆಯಿಂದ ಅಮಾನಿಕೆರೆಗೆ ಒಳಹರಿವು ಹೆಚ್ಚಾಗಿ ಬೆಳಗ್ಗೆಯಿಂದ ಕೆರೆಭರ್ತಿಯಾಗಿ ಕೋಡಿ ನೀರು ಭೋರ್ಗರೆದು ಹರಿಯುತ್ತಿದೆ. ಮೇಯರ್‌, ಉಪಮೇಯರ್‌, ಅಯುಕ್ತರು ಅಮಾನಿಕೆರೆ ಕೋಡಿ ಸ್ಥಳಕ್ಕೆ ಭೇಟಿ ನೀಡಿದರು, ಮಳೆ ಹೆಚ್ಚಾದರೆ ಕೋಡಿಯಲ್ಲಿ ನೀರಿನ ಪ್ರಮಾಣವೂ ಏರಿಕೆಯಾಗುತ್ತದೆ.ಮುನ್ನೆಚ್ಚರಿಕೆ ಕ್ರಮವಾಗಿಕೋಡಿ ಭಾಗದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಬೇಕು, ಅವರಿಗೆ ಸೂಕ್ತ ಅನುಕೂಲ ಮಾಡಬೇಕುಎಂದು 3ನೇ ವಾರ್ಡಿನ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ಆಯುಕ್ತರು, ಮೇಯರ್‌ಗೆ ಹೇಳಿದರು.

ಮಳೆ ಸಂದರ್ಭದಲ್ಲಿ ಹಾನಿಗೀಡಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಾಗರೀಕರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಿ ಎಂದು ಮೇಯರ್‌ ಪ್ರಭಾವತಿ ಅಧಿಕಾರಿಗಳಿಗೆ ಸೂಚಿಸಿದರು.

 .ಮಳೆಹಾನಿ ಪ್ರದೇಶದಲ್ಲಿ ಮೇಯರ್‌, ಉಪಮೇಯರ್‌ ಸುತ್ತಾಟ

ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಸಮಸ್ಯೆ: ಸ್ಥಳೀಯರ ಆಕ್ರೋಶ

 ರಾಜ್ಯದಲ್ಲಿ ಮುಂದಿನ ಐದಾರು ದಿನ ಭರ್ಜರಿ ಮಳೆಯಾಗುವ ಸಾಧ್ಯತೆಯಿದೆ. ನೈಋುತ್ಯ ಮುಂಗಾರು ಮಾರುತ ಮರಳುವಿಕೆ, ಅರಬ್ಬಿ ಸಮುದ್ರ, ಉತ್ತರ ಅಂಡಮಾನ್‌ ಸಮುದ್ರ ಭಾಗ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣ ಆಗಿರುವ ಮೇಲ್ಮೈ ಸುಳಿಗಾಳಿಗಳು ಮಳೆಯ ಅಬ್ಬರವನ್ನು ಹೆಚ್ಚಿಸಲಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ. ರಾಜ್ಯದ ಕೆಲವೆಡೆ ತುಂತುರು ಮಳೆ, ಇನ್ನು ಕೆಲವೆಡೆ ಭರ್ಜರಿ ಮಳೆಯ ಸಾಧ್ಯತೆಯಿದ್ದು, ಒಟ್ಟಾರೆ ಮುಂದಿನ ಕೆಲ ದಿನ ರಾಜ್ಯದಲ್ಲಿ ಮಳೆಯ ವಾತಾವರಣ ಇರಲಿದೆ. 

ಅಕ್ಟೋಬರ್‌ ಕೊನೆಯ ವಾರದಲ್ಲಿ ಹಿಂಗಾರು ಮಾರುತದಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಶನಿವಾರ ಬೆಳಗ್ಗೆ 8.30ರವರೆಗೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ಉತ್ತರಕನ್ನಡ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ಚಾಮರಾಜನಗರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. 

ಮಳೆ ಹಾನಿ ಸ್ಥಳಕ್ಕೆ ಖುದ್ದು ಹೋಗಿ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಖಡಕ್‌ ಸೂಚನೆ

ಆ ಬಳಿಕ ಭಾನುವಾರ ಬೆಳಗ್ಗೆ 8.30ರವರೆಗೆ ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಇರಲಿದೆ. ಭಾನುವಾರ ಬೆಳಗ್ಗೆಯಿಂದ ಸೋಮವಾರದ ತನಕ ಚಾಮರಾಜನಗರ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಆ ಬಳಿಕವೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಅಗುವ ಸಂಭವ ಇದೆ.

ಗುಡುಗು ಸಹಿತ ಭಾರಿ ಮಳೆ: ನಗರದಲ್ಲಿ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ನಗರದ ರಸ್ತೆ, ಜಂಕ್ಷನ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತುಕೊಂಡು ಅವಾಂತರ ಸೃಷ್ಟಿಸಿದೆ. ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರಿಸುತ್ತಿರುವ ಮಳೆರಾಯ ಶುಕ್ರವಾರವೂ ತನ್ನ ಅಬ್ಬರವನ್ನು ಮುಂದುವರೆಸಿದೆ. ಶಿವಾನಂದ ವೃತ್ತ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋ

Latest Videos
Follow Us:
Download App:
  • android
  • ios