Asianet Suvarna News Asianet Suvarna News

ಮಂಗಳೂರಲ್ಲಿ ಗರಿಷ್ಠ ಉಷ್ಣಾಂಶ ದಾಖಲು

ಅನೇಕ ಜಿಲ್ಲೆಗಳಲ್ಲಿ ಈಗ ಕೊರೆಯುವ ಚಳಿ ಇದ್ದರೂ ಕರಾವಳಿಯಲ್ಲಿ ಮಾತ್ರ ಚಳಿಗಾಲದ ಚಳಿ ಅನುಭವ ಇನ್ನೂ ಆಗಿಲ್ಲ. ಶನಿವಾರ ದೇಶದ ಗರಿಷ್ಠ ಉಷ್ಣಾಂಶ 38.2 ಡಿಗ್ರಿ ಸೆಲ್ಶಿಯಸ್‌ ಮಂಗಳೂರಿನ ಪಣಂಬೂರಲ್ಲಿ ದಾಖಲಾಗಿತ್ತು.

maximum Temperature in mangalore
Author
Bangalore, First Published Dec 16, 2019, 8:01 AM IST

ಮಂಗಳೂರು(ಡಿ.16): ಬೆಂಗಳೂರು, ಮೈಸೂರು ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈಗ ಕೊರೆಯುವ ಚಳಿ ಇದ್ದರೂ ಕರಾವಳಿಯಲ್ಲಿ ಮಾತ್ರ ಚಳಿಗಾಲದ ಚಳಿ ಅನುಭವ ಇನ್ನೂ ಆಗಿಲ್ಲ. ಶನಿವಾರ ದೇಶದ ಗರಿಷ್ಠ ಉಷ್ಣಾಂಶ 38.2 ಡಿಗ್ರಿ ಸೆಲ್ಶಿಯಸ್‌ ಮಂಗಳೂರಿನ ಪಣಂಬೂರಲ್ಲಿ ದಾಖಲಾಗಿತ್ತು.

ಭಾರತೀಯ ಮಾಪನಶಾಸ್ತ್ರ ಇಲಾಖೆಯ ಮಾಹಿತಿಯಂತೆ ಇದು ದೃಢಪಟ್ಟಿದೆ. ಶನಿವಾರ ಹೆಚ್ಚಿದ್ದ ಉಷ್ಣಾಂಶ ಭಾನುವಾರದ ವೇಳೆಗೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದ್ದರೂ ಗಣನೀಯ ಇಳಿಕೆಯಾಗಿಲ್ಲ. ಭಾನುವಾರ ಪಣಂಬೂರಿನಲ್ಲಿ ಗರಿಷ್ಠ 36.5 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ 23.7 ಡಿಗ್ರಿ ಸೆಲ್ಶಿಯಸ್‌ ಉಷ್ಣಾಂಶ ದಾಖಲಾಗಿದೆ. ಇನ್ನು ಏಳು ದಿನಗಳ ಕಾಲ 38 ಡಿಗ್ರಿ ಸೆಲ್ಶಿಯಸ್‌ ಇರುವ ಮುನ್ಸೂಚನೆಯನ್ನೂ ಇಲಾಖೆ ನೀಡಿದೆ.

ದೇವರ ಹೆಸರಿನ ಬಾರ್‌, ವೈನ್‌ಶಾಪ್‌ ನಾಮಫಲಕ ತೆರವಿಗೆ ಕ್ರಮ

ಕಳೆದೆರಡು ವರ್ಷಗಳಿಂದ ಕರಾವಳಿ ಜಿಲ್ಲೆ ಪ್ರಕೃತಿ ವೈಪರೀತ್ಯಕ್ಕೆ ಸಿಲುಕಿದ್ದರಿಂದ ಈ ರೀತಿಯ ಹವಾಮಾನ ಬದಲಾವಣೆಗೆ ಕಾರಣವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಅಕ್ಷರ ಕಲಿಸಿದ ಗುರುವಿಗೆ ಹಳೆ ವಿದ್ಯಾರ್ಥಿಗಳಿಂದ ಕಾರ್ ಗಿಫ್ಟ್..!

Follow Us:
Download App:
  • android
  • ios