ಮಂಗಳೂರು(ಡಿ.16): ವೈನ್‌ಶಾಪ್‌, ಬಾರ್‌ ಇತ್ಯಾದಿಗಳಿಗೆ ದೇವರ ಹೆಸರಿನ ನಾಮಫಲಕಗಳಿದ್ದರೆ ಅಂತಹವುಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುನರುಚ್ಚರಿಸಿದ್ದಾರೆ.

ಬೆಳ್ತಂಗಡಿ ಅಳದಂಗಡಿಯ ಸುಂಕದಕಟ್ಟೆಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ನಡೆದ ಪಾದುಕಾನ್ಯಾಸ ಸಹಿತ ಷಡಾಧಾರ ನಿಧಿಕುಂಭ ಪ್ರತಿಷ್ಠೆ ಸಂದರ್ಭ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

ಅಕ್ಷರ ಕಲಿಸಿದ ಗುರುವಿಗೆ ಹಳೆ ವಿದ್ಯಾರ್ಥಿಗಳಿಂದ ಕಾರ್ ಗಿಫ್ಟ್..!

ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲು ನಿರ್ಧರಿಸಲಾಗಿದೆ. ದೇವಸ್ಥಾನಗಳು ಸಾಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ದೇವರ ಹೆಸರಿನಲ್ಲಿ ವೈನ್‌ಶಾಪ್‌, ಬಾರ್‌ಗಳಿಗೆ ನಾಮಫಲಕಗಳನ್ನಿಟ್ಟುಕೊಂಡಿದ್ದರೆ ಅದನ್ನು ಶೀಘ್ರ ತೆರವುಗೊಳಿಸಲು ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ಪ್ರಜಾಪ್ರಭುತ್ವದಲ್ಲಿ ಚರ್ಚೆಯ ಮೂಲಕ ನಿರ್ಧಾರಕೈಗೊಳ್ಳಲು ಸಾಧ್ಯ. ಸಮತೋಲನದಲ್ಲಿ ಆಡಳಿತ ನಡೆಸಿದರೆ ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ.

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಅಳದಂಗಡಿಯ ಮಹಾಗಣಪತಿ ದೇವಸ್ಥಾನ ಸುಂದರವಾಗಿ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಇದಕ್ಕೆ ಇನ್ನು ಹತ್ತೇ ದಿವಸಗಳಲ್ಲಿ ಇಲಾಖೆಯಿಂದ ಗರಿಷ್ಠ ಪ್ರಮಾಣದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಕೋಟ ಭರವಸೆ ನೀಡಿದ್ದಾರೆ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ ಭಟ್‌ ಮಾತನಾಡಿ, ಪಾಶ್ಚಾತ್ಯೀಕರಣದಿಂದಾಗಿ ನಮ್ಮ ಮನೆಯ ಸಂಸ್ಕೃತಿ ಸಂಸ್ಕಾರಗಳು ಮೂಲೆಗುಂಪಾಗುತ್ತಿವೆ. ಇದರಿಂದ ಸಮಾಜದ ಸ್ಥಿತಿಯೂ ಅಪಾಯಕ್ಕೆ ತಲುಪಲಿದೆ. ಇದನ್ನು ತಡೆಯುವಲ್ಲಿ ದೇವಸ್ಥಾನಗಳೂ ಪ್ರಮುಖ ಪಾತ್ರ ವಹಿಸಬೇಕು. ಸಮಾಜವನ್ನುಳಿಸುವ ಕಾರ್ಯ ದೇಗುಲಗಳಿಂದಲೂ ಸಾಧ್ಯ ಎಂದರು. ಶಾಸಕ ಹರೀಶ ಪೂಂಜ, ದೇಗುಲಕ್ಕೆ ಸರ್ಕಾರದಿಂದ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ನಾನು ಸದಾ ಸಿದ್ಧ ಎಂದಿದ್ದಾರೆ.

ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯರಾದ ವಿನುಷಾ ಪ್ರಕಾಶ್‌, ದೇವಳದ ಪ್ರಧಾನ ಅರ್ಚಕ ಎ. ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಿ.ಕೆ. ಚಂದ್ರಶೇಖರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿನೊಚ್ಚ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ನಿಧಿಕುಂಭ ಪ್ರತಿಷ್ಠೆಯು ಪೊಳಲಿ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ನೂರಾರು ಭಕ್ತ ಬಂಧುಗಳು ಕುಂಭಕ್ಕೆ ಚಿನ್ನ,ಬೆಳ್ಳಿ ನಾಣ್ಯಗಳನ್ನು ಅರ್ಪಿಸಿದ್ದಾರೆ.

ಪ್ರವಾಹ ನಾಡಲ್ಲೀಗ ಸಾಂಪ್ರದಾಯಿಕ ಕಟ್ಟ ಆಂದೋಲನ

ಅಂಬೇಡ್ಕರ್‌ ಕೇವಲ ಒಂದು ವರ್ಗಕ್ಕೇ ಸೀಮಿತರಲ್ಲ. ಅವರೊಬ್ಬ ರಾಷ್ಟ್ರೀಯ ಪುರುಷ. ಅಸ್ಪೃಶ್ಯತೆಯಿಂದ ಮತಾಂತರಗಳಾಗಿವೆ. ಗೋ ಸಂರಕ್ಷಣೆ, ಸ್ತ್ರೀ ರಕ್ಷಣೆ ಆಗಬೇಕಾದರೆ ಗಂಡು ಮತ್ತು ಹೆಣ್ಣುಗಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಇದನ್ನು ದೇವಸ್ಥಾನಗಳೂ ಮಾಡಲು ಸಾಧ್ಯ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.