ಕೊರೋನಾ ತಾಂಡವ : ಮಾತೆ ಮಾಣಿಕೇಶ್ವರಿಯೂ ನುಡಿದಿದ್ದರು ಮಾರಕ ರೋಗದ ಭವಿಷ್ಯ !

ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಮಾತೇ ಮಾಣಿಕೇಶ್ವರಿ ನಿಧನರಾಗಿದ್ದು, ಅವರ ಕೊನೆಯ ಭವಿಷ್ಯವಾಣಿ ಏನಿದೆ..? ಇಲ್ಲಿದೆ ಮಾಹಿತಿ 

Mathe Manikeshwari Predicts About Future

 ಕಲಬುರಗಿ [ಮಾ.09]:  ‘ಜನ ರೊಚ್ಚಿಗೇಳ್ತಾರ, ಹೊಸ ಹೊಸ ರೋಗ ಬರ್ತಾವ, ಕೆಲವು ಜನ ಧರ್ಮ ಸ್ಥಾಪನಾಕ್ಕ ಬರ್ತಾರ, ನಾನೂ ಮತ್ತೆ ಪುನರ್ಜನ್ಮ ಪಡ್ದು ಬರ್ತೀನಿ, ಪಾಪಾತ್ಮಗಳು ನಾಶ ಆಗ್ತಾವ, ದೇವರೇ ರಾಜ್ಯ ಪಾಲನಾ ಮಾಡ್ತಾನ’

-​ಇದು ಕಲ್ಯಾಣ ಕರ್ನಾಟಕದ ನಡೆದಾಡುವ ದೇವರೆಂದೇ ಜನಮಾನಸದಲ್ಲಿ ನೆಲೆಯೂರಿರುವ ಮಾತೆ ಮಾಣಿಕೇಶ್ವರಿ ಅವರ ಕೊನೆಯ ಸಂದೇಶದ ತುಣುಕುಗಳು. ಅವರ ಆಪ್ತ ಸಹಾಯಕ ಶಿವಯ್ಯನವರು ಈ ಮಾತನ್ನು ಹಂಚಿಕೊಂಡಿದ್ದು, ಮಾತೆಯವರು ಶುಕ್ರವಾರ ರಾತ್ರಿಯೇ ಶುಕ್ರವಾರ ರಾತ್ರಿಯೇ ದೇಹತ್ಯಾಗದ ಸೂಚನೆ ನೀಡಿದ್ದರೆ ಎಂಬ ಪ್ರಶ್ನೆ ಭಕ್ತವಲಯದಲ್ಲಿ ಹರಿದಾಡುತ್ತಿದೆ.

‘ಲಕ್ಷಾಂತರ ಭಕ್ತರ ಬಯಕೆ ಈಡೇರಿಸಿದ್ದ ಮಾಣಿಕೇಶ್ವರಿ ಅಮ್ಮನ ಕೊನೆಯ ಆಸೆ ಈಡೇರಲೇ ಇಲ್ಲ’..

ಮಾತೆ ಶುಕ್ರವಾರ ರಾತ್ರಿಯೇ ಶಿವಯ್ಯ ಜೊತೆ ಮಾತನಾಡುತ್ತ ತಾವು ಶ್ರೀಶೈಲಕ್ಕೆ ಹೋಗಿ ಬರೋದಾಗಿ ಹೇಳಿದ್ದರಂತೆ. ಅದೇ ಸಂದರ್ಭದಲ್ಲಿ ಮಾತೆ ಕೊನೆಯ ಸಂದೇಶಗಳನ್ನು ಹೇಳಿದ್ದರು ಎಂದು ಶಿವಯ್ಯ ಸ್ಮರಿಸುತ್ತಾರೆ. ‘ಜನ ರೊಚ್ಚಿಗೇಳ್ತಾರ, ಹೊಸ ಹೊಸ ರೋಗ ಬರ್ತಾವ, ಕೆಲವು ಜನ ಧರ್ಮ ಸ್ಥಾಪನಾಕ್ಕ ಬರ್ತಾರ, ನಾನೂ ಮತ್ತೆ ಪುನರ್ಜನ್ಮ ಪಡ್ದು ಬರ್ತೀನಿ, ಪಾಪಾತ್ಮಗಳು ನಾಶ ಆಗ್ತಾವ, ದೇವರೇ ರಾಜ್ಯ ಪಾಲನಾ ಮಾಡ್ತಾನ, ಮನುಷ್ಯ ಘೋರ ಮೃಗದಂತೆ ವರ್ತಿಸುತ್ತಾನೆ.

ಸಜ್ಜನರ ಕಾಪಾಡಲು, ಧರ್ಮ ಸ್ಥಾಪನೆಗೆ ದೇವರು ಮತ್ತೆ ಅವತಾರ ತಾಳಿ ಬರುತ್ತಾನೆ’ ಎಂದು ಒಗಟಾಗಿ ಮಾತಾಜಿ ನುಡಿದರು. ಈ ಮಾತನ್ನು ಕೇಳಿಯೇ ತಾವು ಸ್ನಾನಕ್ಕೆಂದು ಮಾತೆಗೆ ಅಣಿಗೊಳಿಸುವಾಗಲೇ ಮಾತೆಯವರು ಲಿಂಗೈಕ್ಯರಾದ ಸಂಗತಿ ಗಮನಕ್ಕೆ ಬಂತು ಎಂದು ಶಿವಯ್ಯ ಭಾವುಕರಾಗಿ ಹೇಳಿದರು.

Latest Videos
Follow Us:
Download App:
  • android
  • ios