ಉಡುಪಿ/ಉಳ್ಳಾಲ(ಜೂ. 03): ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಸಮುದ್ರದ ನೀರು ಕೂಡ ಕೆಸರುಮಯವಾಗಿದೆ. ದ.ಕ.ಜಿಲ್ಲೆಯ ಉಳ್ಳಾಲ ಸೇರಿದಂತೆ ಕೆಲವೆಡೆ ಮಂಗಳವಾರ ಭಾರಿ ಗಾತ್ರದ ಅಲೆಗಳು ಕಂಡು ಬಂದವು.

ದ.ಕ. ಜಿಲ್ಲೆಯ ಉಳ್ಳಾಲದಾದ್ಯಂತ ಸಮುದ್ರದ ಅಲೆಗಳ ಅಬ್ಬರ ಮಂಗಳವಾರ ಹೆಚ್ಚಾಗಿವೆ. ಪರಿಣಾಮ ಸಮುದ್ರದ ಅಂಚಿನಲ್ಲಿರುವ ರೆಸಾರ್ಟ್‌ ಒಂದು ಅಪಾಯದ ಅಂಚಿಗೆ ಸಿಲುಕಿದೆ.

ದಿನ ಭವಿಷ್ಯ: ಈ ರಾಶಿಯವರ ಹಣಕಾಸು ವ್ಯತ್ಯಾಸವಾಗಲಿದೆ, ಎಚ್ಚರ!

ಕೋಟೆಪುರ, ಕೈಕೋ, ಕಿಲಿರಿಯಾನಗರ, ಮೊಗವೀರಪಟ್ನ, ಸೋಮೇಶ್ವರ, ಉಚ್ಚಿಲ ಭಾಗಗಳಲ್ಲಿ ಸಮುದ್ರ ಬಿರುಸುಗೊಂಡಿವೆ. ಆದರೆ ಮಳೆಗಾಲ ಆರಂಭದ ಮುನ್ನವೇ ಸಮುದ್ರ ತೀರದಲ್ಲಿ ಬ್ರಮ್ಸ್‌ ಹಾಕಲಾದ ಹಿನ್ನೆಲೆಯಲ್ಲಿ ಅಪಾಯದಂಚಿನಲ್ಲಿದ್ದ ಮನೆಗಳು ಸುರಕ್ಷಿತವಾಗಿದೆ. ಆದರೆ ಉಳ್ಳಾಲ ಬೀಚ್‌ ಸಮೀಪವೇ ಇರುವ ಸಮ್ಮರ್‌ ಸ್ಯಾಂಡ್‌ ರೆಸಾರ್ಟ್‌ ರಾತ್ರಿ ಹೊತ್ತಿಗೆ ಅಪಾಯದ ಅಂಚಿಗೆ ಸಿಲುಕಿದೆ.

ಏರುತ್ತಲೇ ಇದ್ದ ಚಿನ್ನಕ್ಕೆ ಬ್ರೇಕ್, ಇಳಿಕೆ ಹಾದಿಗೆ ಮರಳಿದ ಬಂಗಾರ, ಏನ್ ರೇಟು?

ಅಲೆಗಳು ರೆಸಾರ್ಟ್‌ಗೆ ಬಡಿಯಲು ಆರಂಭಿಸಿದೆ. ಕಳೆದ ವರ್ಷದ ಮಳೆಗಾಲ ಸಂದರ್ಭ ರೆಸಾರ್ಟ್‌ ತಡೆಗೋಡೆಗಳು ಸಮುದ್ರಪಾಲಾಗಿತ್ತು. ಈಗ ರೆಸಾರ್ಟ್‌ಗೆ ಅಲೆಗಳು ಬಡಿಯಲಾರಂಭಿಸಿದೆ. ನಿಸರ್ಗ ಚಂಡಮಾರುತ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದ ನಾಡದೋಣಿ ಮೀನುಗಾರರು ಮೀನುಗಾರಿಕೆಯನ್ನು ಜೂನ್‌ 1ರಿಂದಲೇ ಸ್ಥಗಿತಗೊಳಿಸಿದ್ದಾರೆ. ಸಮುದ್ರದಲ್ಲಿ ಮಳೆಯ ಜೊತೆಗೆ ಗಾಳಿಯ ವೇಗವೂ ವಿಪರೀತ ಇರುವುದರಿಂದ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.