ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ವೈಟಿಪಿಎಸ್) ಕಲ್ಲಿದ್ದಲು ವ್ಯಾಗನ್‌ಗಳನ್ನು ಸರಿಯಾಗಿ ಖಾಲಿ ಮಾಡದೆ, ನಷ್ಟ ಉಂಟುಮಾಡಿದ ಆರೋಪದ ಮೇಲೆ ಪವರ್ ಮೆಕ್ ಪ್ರೈವೆಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬೃಹತ್ ಕಳ್ಳತನದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿರ್ಧರಿಸಿದೆ.
ವರದಿ: ರಾಮಕೃಷ್ಣ ದಾಸರಿ
ರಾಯಚೂರು: ಇಲ್ಲಿನ ಯರಮರಸ್ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್ - ಆರ್‌ಪಿಸಿಎಲ್)ದ ವ್ಯಾಪ್ತಿಯಲ್ಲಿ ಅವ್ಯತವಾಗಿ ಸಾಗಿರುವ ಕಲ್ಲಿದ್ದಲು ಕಳ್ಳತನ ದಂಧೆ ಪ್ರಕರಣವು ಗಂಭೀರತೆಯನ್ನು ಪಡೆದುಕೊಂಡಿದ್ದು, ಕಲ್ಲಿದ್ದಲು ವ್ಯಾಗನ್‌ಗಳನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯವಹಿಸಿ ವೈಟಿಪಿಎಸ್‌ಗೆ ನಂಬಿಕೆ ದ್ರೋಹ ಮತ್ತು ನಷ್ಟ ಉಂಟು ಮಾಡಿ ಅಪ್ರಮಾಣಿಕವಾಗಿ ಇಲ್ಲವೇ ಮೋಸ ದಿಂದ ವಂಚಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ವೈಟಿಪಿಎಸ್‌ನ ಇಂಧನ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಚಂದ್ರಶೇಕರ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಮೆIIಪವರ್ ಮೆಕ್ ಪ್ರೈವೆಟ್ ಲಿಮಿಟೆಡ್ ಉಪಾಧ್ಯಕ್ಷ ಕೆ.ಅಜೇಯ ಕುಮಾರ, ಸೈಟ್ ಇನ್‌ಚಾರ್ಜ್ ಸುರೇಂದ್ರನಾಥ ಅವರ ವಿರುದ್ಧ ಕಲಂ:111(3),316(2), 318(3),303(2) ಸಹಿತ 2(5) ಬಿಎನ್‌ಎಸ್2023 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಭಾರಿ ದ್ರೋಹ ದೊಡ್ಡ ನಷ್ಟ
ತೆಲಂಗಾಣದ ಸಿಂಗರೇಣಿಯಿಂದ ದಿನಕ್ಕೆ ಬರುವ 3-4 ರೇಕ್ ಗಳಲ್ಲಿ ಕಲ್ಲಿದ್ದಲು ಬರುತ್ತವೆ. ನಿತ್ಯ ಸುಮಾರು 180 ರಿಂದ 240 ವ್ಯಾಗಾನ್‌ಗಳಲ್ಲಿ ಬರುವ ಕಲ್ಲಿದ್ದಲಿನಲ್ಲಿ ಸುಮಾರು 12 ರಿಂದ 16 ಸಾವಿರ ಟನ್ ಕಲ್ಲಿದ್ದಲು ಕಳ್ಳತನ ಮಾಡಲಾಗಿದೆ. ಕಳೆದ 2025 ರ ಮೇ.15 ರಿಂದ ಡಿ.11ರವರೆಗೆ ₹10 ಲಕ್ಷ ಮೌಲ್ಯದ 200 ಟನ್ ಕಲ್ಲಿದ್ದಲು ಹೊರಗಡೆ ಸಾಗಣೆ ಮಾಡಿದ್ದು, ವೈಟಿಪಿಎಸ್ ಘಟಕಗಳ ನಿರ್ವಹಣೆ ಮತ್ತು ಚಾಲನೆ ಜವಾಬ್ದಾರಿ ಹೊತ್ತಿರುವ ಪವರ್ ಮೇಕ್ ಸಂಸ್ಥೆಯ ನಿರ್ಲಕ್ಷ್ಯವನ್ನು ವೈಟಿಪಿಎಸ್ ಅಧಿಕಾರಿಗಳು ಇದೇ ಮೊದಲ ಬಾರಿಗೆ ದೂರಿನಲ್ಲಿ ಧ್ವನಿ ಎತ್ತಿದ್ದಾರೆ.
ವೈಟಿಪಿಎಸ್ ಹಾಗೂ ಸರ್ಕಾರದ ಘನತೆಗೆ ಧಕ್ಕೆ
ಪವರ್ ಮೇಕ್ ,ಆರ್ಪಿಸಿಎಸ್ ಮತ್ತು ಯೋಜನಾ ಮುಖ್ಯಸ್ಥರ ಒಡಂಬಡಿಕೆಯಲ್ಲಿ ನಡೆದಿರುವ ಕೆಲಸದಲ್ಲಿ ಲೋಪ ನಡೆದಿದೆ ಎಂದು ಆರೋಪಿಸಿದ್ದು. ಕಲ್ಲಿದ್ದಲು ವ್ಯಾಗಾನ್ಗಳನ್ನ ಟಿಪ್ಲರ್ಗಳ ಮೂಲಕ ಖಾಲಿ ಮಾಡುವ ಕಾರ್ಯದಲ್ಲಿ ವ್ಯಾಗಾನ್ಗಳನ್ನ ಸಂಪೂರ್ಣ ಖಾಲಿ ಮಾಡದೆ ಕಲ್ಲಿದ್ದಲನ್ನ ಹಾಗೇಯೇ ಉಳಿಸಿ ನಿಯಮ ಉಲ್ಲಂಘನೆ ಮಾಡಿ ವೈಟಿಪಿಎಸ್ ಹಾಗೂ ಸರ್ಕಾರದ ಘನತೆಗೆ ಧಕ್ಕೆಯನ್ನುಂಟು ಮಾಡಿದ್ದು, ಅವವರ ವಿರುದ್ಧ ತನಿಖೆ,ಸೂಕ್ತ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಯಚೂರು ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.
22ಕ್ಕೆ ವೈಟಿಪಿಎಸ್ ಮುಂದೆ ಧರಣಿ
ರಾಯಚೂರು: ಇಲ್ಲಿನ ವೈಟಿಪಿಎಸ್ ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕ್ಕೆ ಆಗ್ರಹಿಸಿ ಇದೇ ಡಿ.22 ರಿಂದ ವೈಟಿಪಿಎಸ್ ಮುಂದೆ ಅನಿದಿಷ್ಟ ಧರಣಿಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ನರಸಿಂಹಲು ಎಚ್ಚರಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 193 ಕೊಟಿ ರು. ವೆಚ್ಚದಲ್ಲಿ ಕಲ್ಲಿದ್ದಲು ಪೂರೈಕೆ ಟೆಂಡರ್ ಆಗಿದ್ದು, ಯರಮರಸ್ ರೈಲು ನಿಲ್ದಾಣ ಬಳಿ ಕಲ್ಲಿದ್ದಲು ಸ್ವಚ್ಚತೆ ಹೆಸರಿನಲ್ಲಿ ಅಕ್ರಮವಾಗಿ ಕಲ್ಲಿದ್ದಲು ಮಾರಾಟ ಮಾಡಲಾಗುತ್ತಿದೆ. ಈಗಾಗಲೇ 2 ಸಲ ಕೇಸ್ ದಾಖಲಾದರೂ ಅಕ್ರಮ ಕಳ್ಳತನ ಮಾತ್ರ ನಿಂತಿಲ್ಲ. ಕಲ್ಲಿದ್ದಲು ಕಳ್ಳ ಸಾಗಾಣೆಯ ಹಿಂದೆ ಪವರ್‌ಮ್ಯಾಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ ಬಾಬು, ಸಹಾಯಕ ಮೇಲ್ವಿಚಾರಕ ಹರಿಕೃಷ್ಣ. ವೈಟಿಪಿಎಸ್ ಮುಖ್ಯ ಅಭಿಯಂತರ, ಅಧೀಕ್ಷಕ ಅಭಿಯಂತರ, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ರೈಲು ಗುತ್ತಿಗೆದಾರರು
ಸೇರಿ ಅಕ್ರಮ ಕಲ್ಲಿದ್ದಲು ಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಎಲ್.ವಿ.ಸುರೇಶ, ಹನುಮೇಶ ಆರೋಲಿ ಹನುಮೇಶ ಭೇರಿ, ಫಕ್ರುದ್ದೀನ್ ಅಲಿ ಅಹ್ಮದ್, ನಾಗೇಂದ್ರ, ಎಸ್.ರಾಜು, ಭೀಮಣ್ಣ, ಚಿದಾನಂದ ಇತರರು ಇದ್ದರು.

