Asianet Suvarna News Asianet Suvarna News

Omicron Variant: ಬೆಂಗ್ಳೂರಲ್ಲಿ ತಾಯಿ-ಮಗನಿಗೆ ಒಮಿಕ್ರೋನ್‌: ಸಾಮೂಹಿಕ ಪರೀಕ್ಷೆ

*  ಲಂಡನ್‌, ಡೆನ್ಮಾರ್ಕ್‌ನಿಂದ ಬಂದಿರುವ ಸೋಂಕಿತರು
*  ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆ
*  ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಸೋಂಕಿತರು
 

Mass Covid Test Due to Test Positive For Omicron to Mother and Son in Bengaluru grg
Author
Bengaluru, First Published Dec 18, 2021, 5:15 AM IST

ಬೆಂಗಳೂರು(ಡಿ.18): ಒಮಿಕ್ರೋನ್‌(Omicron) ಸೋಂಕಿತ ತಾಯಿ-ಮಗ ವಾಸವಿದ್ದ ಬೆಳ್ಳಂದೂರು ವಾರ್ಡ್‌ನ ಅಪಾರ್ಟ್‌ಮೆಂಟ್‌ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಶುಕ್ರವಾರ ಸಾಮೂಹಿಕ ಕೊರೋನಾ ಸೋಂಕು ಪರೀಕ್ಷೆ(Mass Covid Test) ನಡೆಸಲಾಗಿದೆ.

ಇತ್ತೀಚೆಗೆ ದೆಹಲಿ(Delhi) ಮದುವೆಯಲ್ಲಿ(Marriage) ಭಾಗವಹಿಸಿ ಅಲ್ಲಿನ ಒಮಿಕ್ರೋನ್‌ ಸೋಂಕಿತನ ಸಂಪರ್ಕದಿಂದ ನಗರದ ಮಹದೇವಪುರದ ಬೆಳ್ಳಂದೂರು ವಾರ್ಡ್‌ ವ್ಯಾಪ್ತಿಯ ಆದರ್ಶ ಫಾರ್ಮ್‌ ರೀಟ್ರಿಟ್‌ ವಿಲ್ಲಾದ 70 ವರ್ಷದ ತಾಯಿ ಮತ್ತು 36 ವರ್ಷದ ಮಗನಿಗೂ ಗುರುವಾರ ಒಮಿಕ್ರೋನ್‌ ಸೋಂಕು ದೃಢಪಟ್ಟಿತ್ತು. ಡಿ.3ರಂದು ದೆಹಲಿಯಿಂದ ಬೆಂಗಳೂರಿಗೆ(Bengaluru) ಆಗಮಿಸಿದಾಗ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲದ ಕಾರಣ ಕ್ವಾರಂಟೈನ್‌(Quarantine) ಆಗಿರಲಿಲ್ಲ. ಇದರಿಂದ ಸಂಪರ್ಕಿತರ ಸಂಖ್ಯೆ ಹೆಚ್ಚಿರುವ ಸಾಧ್ಯತೆಗಳಿವೆ.

Omicron Variant: ಒಮಿಕ್ರೋನ್‌ ಸೋಂಕಿತರ ಜತೆ ಸಂಪರ್ಕದಲ್ಲಿದ್ದ 39 ಜನ ಪತ್ತೆ

ಈ ಬಗ್ಗೆ ಮಾಹಿತಿ ಪಡೆದಿದ್ದ ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಾಮೂಹಿಕ ಸೋಂಕು ಪರೀಕ್ಷೆಯನ್ನು ನಡೆಸಿದ್ದಾರೆ. ಈಗಾಗಲೇ ಈ ತಾಯಿ ಮಗನ ಸಂಪರ್ಕದಲ್ಲಿದ್ದ ಇಬ್ಬರಿಗೆ ಕೊರೋನಾ(Coronavirus) ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ನ ಕೆಲವರಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ವರದಿ ನಿರೀಕ್ಷೆಯಲ್ಲಿ ಇದೆ.

ವಿದೇಶದಿಂದ ಬಂದ 8 ಪ್ರಯಾಣಿಕರಿಗೆ ಸೋಂಕು

ಬೆಂಗಳೂರು: ವಿದೇಶದಿಂದ(Foreign) ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ಬಂದಿಳಿದ ಎಂಟು ಪ್ರಯಾಣಿಕರಿಗೆ(Passengers) ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದೇಶಗಳಿಂದ ರಾಜ್ಯಕ್ಕೆ(Karnataka) ಆಗಮಿಸಿ ಸೋಂಕು ದೃಢಪಟ್ಟವರ ಸಂಖ್ಯೆ 23ಕ್ಕೆ ಹೆಚ್ಚಳವಾಗಿದೆ.

ಒಮಿಕ್ರೋನ್‌ ಸೋಂಕು ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೊಳಪಡಿಸಲಾಗುತ್ತದೆ. ಗುರುವಾರ ತಡರಾತ್ರಿ ಲಂಡನ್‌ನಿಂದ ಬಂದ ಮತ್ತು ಶುಕ್ರವಾರ ಬೆಳಗ್ಗೆ ಡೆನ್ಮಾರ್ಕ್ನಿಂದ ಬಂದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪ್ರಯಾಣಿಕರ ಪೈಕಿ ಲಂಡನ್‌ನಿಂದ ಬಂದ ಏಳು ಪ್ರಯಾಣಿಕರು ಮತ್ತು ಡೆನ್ಮಾರ್ಕ್‌ನಿಂದ(Denmark) ಬಂದಿದ್ದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಎಂಟು ಮಂದಿಯಲ್ಲೂ ಸೋಂಕಿನ ಲಕ್ಷಣಗಳಿರಲಿಲ್ಲ. ಅವರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿ, ಕೂಡಲೇ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Omicron Threat: ದೇಶದಲ್ಲಿ ನಿತ್ಯ ಲಕ್ಷ ಒಮಿಕ್ರೋನ್‌ ಕೇಸ್‌: ಕೇಂದ್ರದ ಎಚ್ಚರಿಕೆ..!

ಡಿ.1ರಿಂದ 16ರವರೆಗೂ ಇಂಗ್ಲೆಂಡ್‌ನಿಂದ(England) ಬಂದ 10 ಮಂದಿ, ಜರ್ಮನಿಯಿಂದ(Germany) ಬಂದ ಇಬ್ಬರು, ದಕ್ಷಿಣ ಆಫ್ರಿಕಾದಿಂದ ಬಂದ ಮೂರು ಮಂದಿ ಸೇರಿ 15 ಪ್ರಯಾಣಿಕರಲ್ಲಿ (ವಿದೇಶಿಗಳಿಂದ ಬಂದು ಹೋಂ ಕ್ವಾರಂಟೈನ್‌ ಇದ್ದ ಇಬ್ಬರು ಸೇರಿದಂತೆ) ಸೋಂಕು ದೃಢಪಟ್ಟಿತ್ತು. ಶುಕ್ರವಾರ ಎಂಟು ಪ್ರಯಾಣಿಕರನ್ನು ಸೇರಿ ಒಟ್ಟಾರೆ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಇವರೆಲ್ಲರಿಗೂ ವಂಶವಾಹಿ ಪರೀಕ್ಷೆ ನಡೆಸಿದಾಗ ದಕ್ಷಿಣ ಆಫ್ರಿಕಾದಿಂದ ಬಂದ ನಾಲ್ಕು ಮಂದಿ, ಲಂಡನ್‌ನಿಂದ ಬಂದ ಒಬ್ಬರಲ್ಲಿ ಒಮಿಕ್ರೋನ್‌ ಪತ್ತೆಯಾಗಿದೆ. ಉಳಿದವರ ವಂಶವಾಹಿ ಪರೀಕ್ಷಾ ವರದಿ ಬರಬೇಕಿದ್ದು, ಬೌರಿಂಗ್‌ ಸೇರಿದಂತೆ ವಿವಿಧ ಖಾಸಗಿ ಆಸ್ಪತೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರು ಸೋಂಕಿತರು

ವಿಮಾನ ನಿಲ್ದಾಣದ ಒಳಭಾಗದಲ್ಲಿ ಖಾಸಗಿ ಪ್ರಯೋಗಾಲಯದಿಂದ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕು ಪರೀಕ್ಷೆ ವರದಿ ಬರುವವರೆಗೂ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ನಿಗದಿ ಪಡಿಸಲಾಗಿದೆ. ಒಂದು ವೇಳೆ ಸೋಂಕು ದೃಢಪಟ್ಟರೆ ಅಂತಹವರನ್ನು ಪ್ರತ್ಯೇಕವಾಗಿ ಕರೆದೊಯ್ದು ಸ್ಯಾನಿಟೈಸ್‌(Sanitize) ಮಾಡಲಾಗುತ್ತದೆ. ಆನಂತರ ಆಸ್ಪತ್ರೆ ದಾಖಲಿಸಲು ಆ್ಯಂಬುಲೆನ್ಸ್‌(Ambulance) ಹತ್ತಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ಸ್ಯಾನಿಟೈಸ್‌ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ಡೆನ್ಮಾರ್ಕ್ನಿಂದ ಬಂದಿದ್ದ ಇಬ್ಬರು ಪ್ರಯಾಣಿಕರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕೂಡಲೇ ಪೊಲೀಸರು ತಡೆದು ಆ್ಯಂಬುಲೆನ್ಸ್‌ ಹತ್ತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios