ರಾಯಚೂರು: ಮಸ್ಕಿಯ 3 ವರ್ಷದ ನಿಧಿಶ್ರೀ ಇಂಡಿಯಾ ಬುಕ್ ಆಪ್ ರೆಕಾರ್ಡ್‌ಗೆ ಸೇರ್ಪಡೆ
ಮಸ್ಕಿ ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಬಸನಗೌಡ ಪೊಲೀಸ್ ಪಾಟೀಲ್ ಅವರ ಮೊಮ್ಮಗಳು ನಿಧಿಶ್ರೀ ಪಾಟೀಲ್ ಸಾಧನೆ ಮಾಡಿದ ಪುಟಾಣಿ.
ಮಸ್ಕಿ(ಫೆ.02): ಪದ, ಚಿನ್ಹೆ ಹಾಗೂ ವಿವಿಧ ವಸ್ತುಗಳನ್ನು ಗುರುತಿಸಿ ಹೇಳುವ ಜ್ಞಾಪಕ ಶಕ್ತಿ ಇರುವ 3 ವರ್ಷದ ಮಗುವೊಂದು 2023ನೇ ಸಾಲಿನ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಬಸನಗೌಡ ಪೊಲೀಸ್ ಪಾಟೀಲ್ ಅವರ ಮೊಮ್ಮಗಳು ನಿಧಿಶ್ರೀ ಪಾಟೀಲ್ ಸಾಧನೆ ಮಾಡಿದ ಪುಟಾಣಿ.
ರಾಯಚೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ 2 ಎಕರೆ ಹೊಲ ಗಿಫ್ಟ್: ಗ್ರಾ.ಪಂ. ಸದಸ್ಯನ ಆಹ್ವಾನ
ಸಂಸ್ಕೃತ ಶ್ಲೋಕ, ಇಂಗ್ಲೀಷ ರೈಮ್ಸ್ ಪದ, ರಾಷ್ಟ್ರೀಯ ಚಿಹ್ನೆ, ವಾಹನ, ಪಕ್ಷಿ, ಪ್ರಾಣಿಗಳ, ವೃತ್ತಿ, ಅಂಕಿ-ಸಂಖ್ಯೆ ದೇಹದ ಅಂಗಾಂಗ, ವಿವಿಧ ಬಣ್ಣ, ಹಣ್ಣು ಮತ್ತು ತರಕಾರಿಗಳನ್ನು ಗುರುತಿಸಿ ಹೇಳುವ ಜ್ಞಾಪಕ ಶಕ್ತಿ ಇರುವ ಮಗುವಿನ ಎಲ್ಲಾ ಚಿತ್ರ, ವಿಡಿಯೋಗಳನ್ನು ಇಂಡಿಯಾ ಬುಕ್ ಆಪ್ ರೆಕಾರ್ಡ್‌ಗೆ ಕಳುಹಿಸಲಾಗಿದೆ. ಅದನ್ನು ಪರಿಶೀಲಿಸಿದ ಸಂಸ್ಥೆಯವರು, ಮಗುವಿನ ಹೆಸರು ಆಯ್ಕೆ ಮಾಡಿಕೊಂಡು ಪ್ರಮಾಣಪತ್ರವನ್ನು ಮಗುವಿನ ಪೋಷಕರಿಗೆ ಕಳುಹಿಸಿದ್ದಾರೆ. ಇದರಿಂದ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.