Asianet Suvarna News Asianet Suvarna News

ಮೂಗು, ಬಾಯಿ ಮುಚ್ಚುವುದಲ್ಲದೆ, ಕಣ್ಣನ್ನೂ ರಕ್ಷಿಸುವ ಮಾಸ್ಕ್‌..!

ಕೊಡಗು ಜಿಲ್ಲೆ ವಿರಾಜಪೇಟೆಯ ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿ ಸಂಸ್ಥೆಗಳು ಉಚಿತವಾಗಿ ಮಾಸ್ಕ್‌ ತಯಾರು ಮಾಡಿಕೊಡುತ್ತಿವೆ. ಓಎಚ್‌ಪಿ ಶೀಟ್‌, ಫಾಮ್‌, ಎಲಾಸ್ಟಿಕ್‌ ಮತ್ತು ಗಮ್‌ ಟೇಪ್‌ ಬಳಸಿ ಮಾಸ್ಕ್‌ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್‌ ಕೇವಲ ಮೂಗು ಬಾಯಿಯನ್ನು ಕವರ್‌ ಮುಚ್ಚುವುದಷ್ಟೇ ಅಲ್ಲದೆ ಕಣ್ಣನ್ನೂ ರಕ್ಷಿಸಲಿದೆ.

 

Mask covering eyes mouth and nose is prepared in madikeri
Author
Bangalore, First Published May 2, 2020, 9:38 AM IST

ಮಡಿಕೇರಿ(ಮೇ.02): ಕೊಡಗು ಜಿಲ್ಲೆ ವಿರಾಜಪೇಟೆಯ ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿ ಸಂಸ್ಥೆಗಳು ಉಚಿತವಾಗಿ ಮಾಸ್ಕ್‌ ತಯಾರು ಮಾಡಿಕೊಡುತ್ತಿವೆ. ಓಎಚ್‌ಪಿ ಶೀಟ್‌, ಫಾಮ್‌, ಎಲಾಸ್ಟಿಕ್‌ ಮತ್ತು ಗಮ್‌ ಟೇಪ್‌ ಬಳಸಿ ಮಾಸ್ಕ್‌ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್‌ ಕೇವಲ ಮೂಗು ಬಾಯಿಯನ್ನು ಕವರ್‌ ಮುಚ್ಚುವುದಷ್ಟೇ ಅಲ್ಲದೆ ಕಣ್ಣನ್ನೂ ರಕ್ಷಿಸಲಿದೆ.

ಅಂದರೆ ಇಡೀ ಮುಖವನ್ನು ಮುಚ್ಚುವುದರಿಂದ ಎದುರಿಗೆ ಯಾರೇ ನಿಂತು ಉಸಿರಾಡಿದರೂ ಅವರ ಉಸಿರನ್ನು ನಾವು ನೇರವಾಗಿ ಸೇವಿಸದಂತೆ ತಡೆಯಲು ಸಹಕಾರಿಯಾಗಲಿದೆ.

'ಹೊಸ ನೀತಿ ಜಾರಿ: ಪಾರದರ್ಶಕ, ಕಡಿಮೆ ದರದಲ್ಲಿ ಮರಳು ಪೂರೈಕೆಗೆ ಕ್ರಮ'

ಇಂತಹ ಐದು ಸಾವಿರ ಮಾಸ್ಕ್‌ಗಳನ್ನು ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿಗಳು ಉಚಿತವಾಗಿ ಜಿಲ್ಲಾಡಳಿತಕ್ಕೆ ಕೊಡಲಿವೆ. ಸೇವಾ ಭಾರತಿಯ 40 ಕಾರ್ಯಕರ್ತರು ಈಗಾಗಲೇ 4 ಸಾವಿರ ಮಾಸ್ಕ್‌ಗಳನ್ನು ತಯಾರು ಮಾಡಿದ್ದಾರೆ.

ಗದಗ: ಮಹಾಮಾರಿ ಕೊರೋನಾ ಗೆದ್ದ ವೃದ್ಧೆ, ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್‌

ಇನ್ನೂ ಒಂದು ಸಾವಿರ ಮಾಸ್ಕ್‌ಗಳನ್ನು ಸಿದ್ಧಪಡಿಸುತ್ತಿದ್ದು, ಒಟ್ಟು ಐದು ಸಾವಿರ ಮಾಸ್ಕ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ. ಕೆಲಸವೂ ಇಲ್ಲದೆ ಮನೆಯಲ್ಲೇ ಸುಮ್ಮನೆ ಕುಳಿತಿದ್ದ ಸೇವಾ ಭಾರತಿ ಕಾರ್ಯಕರ್ತರು ಇದೀಗ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Follow Us:
Download App:
  • android
  • ios