ವರ್ಷದ ಹಿಂದೆ ನಕಲಿ ದಾಖಲೆ ಸೃಷ್ಟಿಅಪ್ರಾಪ್ತೆಯನ್ನು ವಿವಾಹವಾಗಿದ್ದ ಆಸಾಮಿಯೊಬ್ಬ ಮತ್ತೊಬ್ಬ ಅಪ್ರಾಪ್ತೆಯನ್ನು ಅಪಹರಿಸಿದ ಆರೋಪದ ಮೇರೆಗೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ತುಮಕೂರು(ನ.23): ವರ್ಷದ ಹಿಂದೆ ನಕಲಿ ದಾಖಲೆ ಸೃಷ್ಟಿಅಪ್ರಾಪ್ತೆಯನ್ನು ವಿವಾಹವಾಗಿದ್ದ ಆಸಾಮಿಯೊಬ್ಬ ಮತ್ತೊಬ್ಬ ಅಪ್ರಾಪ್ತೆಯನ್ನು ಅಪಹರಿಸಿದ ಆರೋಪದ ಮೇರೆಗೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪಾವಗಡ ತಾಲೂಕಿನ ನಾಗಲಾಪುರ ಮಂಜುನಾಥ್‌ ಎಂಬಾತನೇ ಬಾಲಕಿಯನ್ನು ಅಪಹರಣ ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದು, ವೈ.ಎನ್‌.ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

MLA ಮಗ ಎಂದು ಹೇಳಿ ರೇಪ್ ಮಾಡ್ತಿದ್ದ MBA ಪದವೀಧರ..!

ನಾಗಲಾಪುರ ಗ್ರಾಮದ ಮಂಜುನಾಥ್‌ 1 ವರ್ಷದ ಹಿಂದಷ್ಟೆವಯಸ್ಸಿನ ನಕಲಿ ಧೃಡೀಕರಣ ಆಧಾರದ ಮೇಲೆ ಹಿರಿಯರ ಸಮ್ಮುಖದಲ್ಲಿ ದೊಡ್ಡಹಳ್ಳಿ ಗ್ರಾಮದ ಅಪ್ರಾಪ್ತೆ ಬಾಲಕಿಯೊಬ್ಬರನ್ನು ವಿವಾಹವಾಗಿದ್ದರೆನ್ನಾಗಿದೆ. ಇದಾದ ವರ್ಷದ ನಂತರ ತುಮಕೂರಿನ ಸರ್ಕಾರಿ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಆಪ್ರಾಪ್ತೆ ಬಾಲಕಿಯನ್ನು ಮತ್ತೆ ಅಪಹರಿಸಿ ಮತ್ತೊಂದು ವಿವಾಹವಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಇದನ್ನು ತಿಳಿದು ಮೊದಲನೇ ಪತ್ನಿ ಪೋಷಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ವೈ.ಎನ್‌.ಹೊಸಕೋಟೆ ಪೊಲೀಸರು ಆರೋಪಿಗಾಗಿ ಶೋಧ ಕೈಗೊಂಡಿದ್ದರು. ದೂರು ನೀಡಿದ 2 ತಿಂಗಳ ಬಳಿಕ ಆರೋಪಿ ಮಂಜುನಾಥ್‌ನನ್ನು ಪತ್ತೆ ಹಚ್ಚಿದ ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಡ್ಯ: JDS ಭದ್ರ ಕೋಟೆ ಭೇದಿಸಲು ಪ್ಲಾನ್ ಬದಲಿಸಿದ BJP

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸಮಾಜ ಸೇವಕ ಹನುಮಂತನಹಳ್ಳಿ ರಮೇಶ್‌, ಇಬ್ಬರು ಹೆಣ್ಣು ಮಕ್ಕಳಿಗೂ ನ್ಯಾಯ ಸಿಗಲಿ ಆರೋಪಿಗೆ ಶಿಕ್ಷೆಯಾಗಲಿ ಎಂದು ಈ ಸಂಬಂಧ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ ಸಂಬಂಧಪಟ್ಟಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.