Asianet Suvarna News Asianet Suvarna News

BPL ಕಾರ್ಡ್‌ ಹಿಂದಿರುಗಿಸಲು ಮಾ. 15 ಕೊನೆಯ ದಿನ

ಹಿಂತಿರುಗಿಸದಿದ್ದರೆ ಅಂಥವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮತ್ತು ದಂಡ ವಸೂಲಿ| ತಹಸೀಲ್ದಾರ್‌ ಕಚೇರಿಯ ಆಹಾರ ಶಾಖೆಗೆ ಅಥವಾ ಆಯಾ ಗ್ರಾಮದ ನ್ಯಾಯಬೆಲೆ ಅಂಗಡಿ ವಿತರಕರಿಗೆ ಮಾ. 15ರೊಳಗಾಗಿ ಹಿಂತಿರುಗಿಸಲು ಸೂಚಿಸಿದ ತಹಸೀಲ್ದಾರ್‌| 

March 15 th Last Date for Return BPL Card grg
Author
Bengaluru, First Published Mar 4, 2021, 10:21 AM IST

ಕೊಪ್ಪಳ(ಮಾ.04): ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಆರ್ಥಿಕವಾಗಿ ಮುಂದುವರಿದಿರುವವರು ಹಾಗೂ ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿಯನ್ನು ಪಡೆದುಕೊಂಡಿರುವವರು ಸ್ವಯಂಪ್ರೇರಿತವಾಗಿ ಕೊಪ್ಪಳ ತಾಲೂಕಿನ ತಹಸೀಲ್ದಾರ್‌ ಕಚೇರಿಯ ಆಹಾರ ಶಾಖೆಗೆ ಅಥವಾ ಆಯಾ ಗ್ರಾಮದ ನ್ಯಾಯಬೆಲೆ ಅಂಗಡಿ ವಿತರಕರಿಗೆ ಮಾ. 15ರೊಳಗಾಗಿ ಹಿಂತಿರುಗಿಸಬೇಕು. 

ಒಂದು ವೇಳೆ ಹಿಂತಿರುಗಿಸದಿದ್ದರೆ ಅಂಥವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವುದು ಎಂದು ಕೊಪ್ಪಳ ತಹಸೀಲ್ದಾರ್‌ ಎಚ್ಚರಿಸಿದ್ದಾರೆ.

ಕೊಪ್ಪಳ: ಲಂಚಕ್ಕೆ ಬೇಡಿಕೆ, ಎಸಿಬಿ ಬಲೆಗೆ ಬಿದ್ದ ಬಿಇಒ, ಎಸ್‌ಡಿಸಿ

ಸರ್ಕಾರಿ ನೌಕರರು, ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲ ಖಾಸಗಿ ನೌಕರರು, ಸರ್ಕಾರಿ ಅನುದಾನಿತ ಮಂಡಳಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ಜಿಎಸ್‌ಟಿ, ವೃತ್ತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು ಬಿಪಿಎಲ್‌ ಪಡಿತರ ಚೀಟಿಯನ್ನು ಹಿಂದಿರುಗಿಸಬೇಕು ಎಂದಿದ್ದಾರೆ.
 

Follow Us:
Download App:
  • android
  • ios