ಬೆಳಗಾವಿ(ಮಾ.18): ಕನ್ನಡ ನೆಲ, ಜಲ, ಭಾಷೆಗೆ ಕನ್ನಡಿಗರ ದನಿಯಾಗಿ ಪಾಟೀಲ ಪುಟ್ಟಪ್ಪ ಅವರ ನಂಟು ಗಡಿ ಜಿಲ್ಲೆ ಬೆಳಗಾವಿ ಸದಾ ಸ್ಮರಣೀಯ. ಗಡಿ ವಿಚಾರ ಬಂದಾಗ ಸದಾ ಕೆಚ್ಚೆದೆಯ ಹೋರಾಟಕ್ಕೆ ಮುಂದಾಗುತ್ತಿದ್ದ ಪಾಪು ಅವರು ಸದಾ ಕನ್ನಡವೇ ಮನಸು ಎಂಬುವುದರಲ್ಲಿ ಎರಡು ಮಾತಿಲ್ಲ. ನೇರ, ನಿಷ್ಠುರವಾದಿಯಾಗಿದ್ದ ಅವರು ಕನ್ನಡ, ಗಡಿ ವಿಚಾರ ಬಂದಾಗಲೆಲ್ಲ ದಿಟ್ಟ ಹೋರಾಟದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಪಾಪು. 

ಪಾಪು ಅಂತಿಮ ದರ್ಶನಕ್ಕೆ ಜನಸಾಗರ: ಅಂತಿಮ ಯಾತ್ರೆಯ ಫೋಟೋಸ್

ಗಡಿ ಬಗ್ಗೆ ಸದಾ ತಂಟೆ ತೆಗೆಯುತ್ತಿದ್ದ ಮರಾಠಿಗರಿಗೆ ಸದಾ ಕೆಂಡದ ಉತ್ತರ ನೀಡುತ್ತಿದ್ದ ಪಾಪು ಅವರು ಅವರಿಗೆ ಸದಾ ಬೆಂಕಿಯಾಗಿಯೇ ಇದ್ದರು. ಹೀಗಾಗಿ ಮರಾಠಿಗರು ಕೂಡ ಪಾಪು ಅವರ ಹೋರಾಟವನ್ನು ಭಾಷೆಯಿಂದಾಚೆಗೂ ಒಪ್ಪಿಕೊಂಡಿದ್ದರು. 

ಮರಾಠಿಗರೂ ಒಪ್ಪಿದ್ದರು ಪಾಪು ಹೋರಾಟ: 

ಪಾಪು ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಕನ್ನಡದ ಕುರಿತಾದ ಅವರ ಶ್ರದ್ಧೆ ಮತ್ತು ನಿಷ್ಠೆಯನ್ನು ಗಮನಿಸಿ ಅಂದಿನ ಮರಾಠಿ ಪ್ರಮುಖ ಪತ್ರಿಕೆಯೊಂದು ತನ್ನ ಸಂಪಾದಕೀಯ ಪುಟದಲ್ಲಿ (6.8.1989) ಪಾಪು ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದರಲ್ಲಿ ಮರಾಠಿಯಲ್ಲಿ ಪಾಪು ಅಂತಹ ಹೋರಾಟಗಾರರು ಇದ್ದಿದ್ದರೆ ಬೆಳಗಾವಿಯಲ್ಲಿ ಗಡಿಯಂತಹ ಸಮಸ್ಯೆಗಳು ಇರುತ್ತಿರಲಿಲ್ಲ. ಮರಾಠಿ ಮಾತೆಯೂ ಸಹಿತ ಇಂದು ಮರಾಠಿ ಪುಟ್ಟಪ್ಪನಂತಹ ಅವತಾರದ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದಾಳೆ ಎಂದು ಮುಕ್ತ ಕಂಠದಿಂದ ಹೊಗಳಿತ್ತು. 

ನಿದ್ರೆ ಕೆಡಿಸುವವರ ಎಚ್ಚರಿಸುತ್ತಲೇ ಚಿರನಿದ್ರೆಗೆ ಜಾರಿದ ಪಾಪು

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದಾಗ ಬೆಳಗಾವಿಯಲ್ಲಿ ಎಂಇಎಸ್‌ನವರು ಎಷ್ಟೇ ಹೋರಾಟ ಮಾಡಿದರೂ, ಅವಮಾನ ಮಾಡಿದರೂ ಎದೆಗುಂದದೆ ಕನ್ನಡ ಪರ ಮತ್ತು ಗಡಿ ವಿಚಾರದಲ್ಲಿ ಕೆಚ್ಚೆದೆಯ ಹೋರಾಟ ಪಾಟೀಲ ಪುಟ್ಟಪ್ಪ ಅವರದ್ದಾಗಿತ್ತು. ಈ ಕುರಿತು ಪತ್ರಕರ್ತ ಮತ್ತು ಸಾಹಿತಿ ಸರಜೂ ಕಾಟ್ಕರ್ ಅವರು ಕೂಟ ‘ನಾನು ಪಾಟೀಲ ಪುಟ್ಟಪ್ಪ’ದಲ್ಲಿಯೂ ಅನೇಕ ವಿಚಾರಗಳನ್ನು ಹೇಳಿದ್ದಾರೆ. 
ಕನ್ನಡದ ವಿಚಾರದಲ್ಲಿ ಡಾ.ಪಾಟೀಲ ಪುಟ್ಟಪ್ಪ ಅವರೆ ಹೇಳಿದಂತೆ, ಕನ್ನಡ ವಿಷಯ ಬಂದಾಗ ನಾನು ಟ್ಯಾಂಕಿನಂತೆ ಮುನ್ನುಗ್ಗುತ್ತೇನೆ. ನೀವು ದಾರಿ ಬಿಟ್ಟಿರೆ ಸರಿ. ಇಲ್ಲವೆ ಅಪ್ಪಚ್ಚಿಯಾಗುತ್ತೀರಿ ಎಂದು ಹೇಳುತ್ತಿದ್ದರು. ಅದರಂತೆಯೇ ಅವರು ನಡೆಯುತ್ತಿದ್ದರು. ಸಭಾಪತಿಗೆ ಖಾರವಾಗಿ ಉತ್ತರ ನೀಡಿದ್ದರು: ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮುಖ್ಯ ಮಂತ್ರಿಯಾಗಿದ್ದಾಗ ಪಾಪು ಅವರನ್ನು ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಆಗ ವಿಶ್ವವಿದ್ಯಾಲಯದಿಂದ ಹಿಡಿದು ಎಲ್ಲ ರಂಗಗಳಲ್ಲಿ ಕನ್ನಡ ಬಳಕೆ ಮಾಡುವುದಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದರು. 

ಕನ್ನಡ ಬಳಕೆ ವಿಷಯದಲ್ಲಿ ಅಂದಿನ ವಿಧಾನಸಭಾ ಸಭಾಪತಿಯಾಗಿದ್ದ ಬಿ.ಜಿ.ಬಣಕಾರ ಹಾಗೂ ಪಾಪು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆಗ ಪಾಪು ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಟ್ಟದ ವರೆಗೆ ತಲುಪಿತು. ಆಗ ಪುಟ್ಟಪ್ಪನವರು ಸಭಾಪತಿಗೆ ಬರೆದ ಪತ್ರದಲ್ಲಿ, ‘ನೀವು ಸ್ಪೀಕರ್ ಎಂದು ನಿಮ್ಮ ಸ್ಥಾನವೂ ದೊಡ್ಡದು. ಸದನದ ಸಭೆಯಲ್ಲಿ ನಿಮಗಿಂತಲೂ ಹೆಚ್ಚಿ ವರು ಯಾರೂ ಇಲ್ಲ. ಆದರೆ ಸಭೆಯ ಒಳಗೆ ಮತ್ತು ಹೊ ರಗೆ ನೀವು ಒಬ್ಬ ಕನ್ನಡಿಗ. ಕನ್ನಡಕ್ಕಿಂತ ನೀವು ದೊಡ್ಡವ ರೇನೂ ಅಲ್ಲ’ ಎಂದು ಖಾರವಾಗಿ ಉತ್ತರ ಬರೆದಿದ್ದರು. ಆಗ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರು ಮಧ್ಯ ಪ್ರವೇಶ ಮಾಡಿ ಪರಸ್ಥಿತಿಯನ್ನು ತಿಳಿಪಡಿಸಿದರು. 

ಇದೆ ಸಮಯದಲ್ಲಿ ಅಂದಿನ ರಾಜ್ಯಪಾಲರಾದ ಅಶೋ ಕನಾಥ ಬ್ಯಾನರ್ಜಿ ಅವರಿಗೆ ತಮ್ಮ ಕಚೇರಿಯಲ್ಲಿ ಕನ್ನಡ ದಲ್ಲಿ ವ್ಯವರಿಸಬೇಕು ಎಂದೂ ಪತ್ರ ಬರೆದು ಆಗ್ರಹಿ ಸಿದ್ದರು. ಅಷ್ಟು ಮಾತ್ರವಲ್ಲ, ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಸಮಾವೇಶವಾದಾಗ ಅಲ್ಲಿ ಒಂದೆರಡು ವಿಷಯಗಳು ಇಂಗ್ಲಿಷ್‌ನಲ್ಲಿ ಮಾಡಿದಾಗ ಅದನ್ನು ಅಲ್ಲಿಯೆ ಉಗ್ರವಾಗಿ ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದರು ಪಾಪು.

ಇಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ಮುಖ್ಯ

2003ರಲ್ಲಿ ಬೆಳಗಾವಿಯಲ್ಲಿ 70ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಇದರ ಅಧ್ಯಕ್ಷರು ಪಾಪು ಅವರೇ ಆಗಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಎ ಸ್.ಎಂ.ಕೃಷ್ಣಾ ಅವರು ತಮ್ಮ ಉದ್ಘಾಟನೆ ಭಾಷಣ ಮುಗಿದ ಮೇಲೆ ಬೇರೆ ಕಾರ್ಯಕ್ರಮಕ್ಕೆ ತೆರಳಲು ವೇದಿಕೆಯಿಂದ ಇಳಿಯುತ್ತಿರುವಾಗ ಪುಟ್ಟಪ್ಪನವರು ಧ್ವನಿ ವರ್ದಕ ಕೈಯಲ್ಲಿ ಹಿಡಿದು ‘ಮುಖ್ಯಮಂತ್ರಿಗಳೆ ಇದು ಕನ್ನಡದ ಕಾರ್ಯಕ್ರಮ. ಇಲ್ಲಿ ಸಮ್ಮೇಳಾಧ್ಯಕ್ಷರ ಭಾಷಣ ಮುಖ್ಯ’ ಎಂದು ಹೇಳುತ್ತಾ ಹಿಗ್ಗಾಮುಗ್ಗಾ ತರಾ ಟೆಗೆ ತೆಗೆದುಕೊಂಡಿದ್ದರು. 

‘ಇಲ್ಲಿ ನಾನು ಹೇಳುವ ಎಲ್ಲ ಮಾತುಗಳನ್ನು ಕೇಳಲೇಬೇಕು’ ಎಂದು ಹೇಳಿದರು. ಆಗ ಮುಖ್ಯಮಂತ್ರಿಗಳು ಮತ್ತೆ ವೇದಿಕೆಗೆ ಬಂದು ಕುಳಿತು ಸಮಾರಂಭ ಮುಗಿಯುವವರಿಗೆ ಕುಳಿತರು. ಅಥಣಿಯಲ್ಲಿ ಮಹಾಜನ ಆಯೋಗ ಜಾರಿಗಾಗಿ ಬ.ಗಂ.ತುರಮುರಿಯವರ ನೈತೃತ್ವದಲ್ಲಿ 12.12,1972 ರಲ್ಲಿ ಹೊರಾಟ ನಡೆದಿತ್ತು. ಆಗ ಆ ಹೋರಾಟದಲ್ಲಿ ಗಲಾಟೆ ಮಾಡಿದ 7 ಜನರಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆಗ ಹೋರಾಟ ನೇತೃತ್ವ ವಹಿಸಿದ್ದ ತುರಮರಿ ಅವರ ಬೆನ್ನಿಗೆ ನಿಂತವರು ಅಥಣಿಯ ಎಸ್. ಬಿ.ಪಾಟೀಲ ವಕೀಲರು ಮತ್ತು ಪಾಟೀಲ ಪುಟ್ಟಪ್ಪನವರು ಜನರಿಂದ ಹಣ ಸಂಗ್ರಹಿಸಿ ಅವರನೆಲ್ಲ ನಿದೋಶಿರ್ಗಳು ಎಂದು ವಾದಿಸಿ ಗೆಲವು ಸಾಧಿಸಿಕೊಟ್ಟರು.