Asianet Suvarna News Asianet Suvarna News

Karnataka Politics : ಹಲವು ಬಿಜೆಪಿ ಮುಖಂಡರ ರಾಜೀನಾಮೆ ಅಂಗೀಕಾರ

ತುಂಬಾಡಿಯ ಟಿ.ಡಿ.ತಿಮ್ಮಜ್ಜ, ಮಲ್ಲೇಶಪುರದ ಪ್ರಸನ್ನಕುಮಾರ್‌ ಮತ್ತು ತೋವಿನಕೆರೆಯ ಹನುಮಂತರಾಜುಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿ ಸ್ಥಾನ ಹಾಗೂ ಪಕ್ಷದ ಹುದ್ದೆಯಿಂದ ಮುಕ್ತಿಗೊಳಿಸಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ ಗುರುವಾರ ಆದೇಶ ಮಾಡಿದ್ದಾರೆ.

Many Leaders Resignation To BJP snr
Author
First Published Dec 17, 2022, 5:18 AM IST

 ಕೊರಟಗೆರೆ (ಡಿ.17):  ತುಂಬಾಡಿಯ ಟಿ.ಡಿ.ತಿಮ್ಮಜ್ಜ, ಮಲ್ಲೇಶಪುರದ ಪ್ರಸನ್ನಕುಮಾರ್‌ ಮತ್ತು ತೋವಿನಕೆರೆಯ ಹನುಮಂತರಾಜುಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಬಿಜೆಪಿ ಪಕ್ಷದ ಎಲ್ಲಾ ಜವಾಬ್ದಾರಿ ಸ್ಥಾನ ಹಾಗೂ ಪಕ್ಷದ ಹುದ್ದೆಯಿಂದ ಮುಕ್ತಿಗೊಳಿಸಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ ಗುರುವಾರ ಆದೇಶ ಮಾಡಿದ್ದಾರೆ.

ತುಮಕೂರು (Tumakur )  ಬಿಜೆಪಿ  (BJP) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ.ತಿಮ್ಮಜ್ಜ, ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್‌, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಹನುಮಂತರಾಜು ತಮ್ಮ ಹುದ್ದೆಗೆ ವಾರದ ಹಿಂದೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಪರಿಶೀಲನೆ ನಡೆಸಿದ ಮಧುಗಿರಿ ಜಿಲ್ಲಾಧ್ಯಕ್ಷ ಅಂಗೀಕರಿಸಿ 3 ಜನರನ್ನು ಪಕ್ಷದ ಹುದ್ದೆಯಿಂದ ಮುಕ್ತಿಗೊಳಿಸಿದ್ದಾರೆ. ಕೊರಟಗೆರೆ ವಿಧಾನ ಕ್ಷೇತ್ರ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ 3 ಜನ ಮುಖಂಡರು ಭಾರತೀಯ ಜನತಾ ಪಕ್ಷದ ಯಾವುದೇ ಸಭೆಯಾಗಲಿ ಅಥವಾ ಕಾರ್ಯಕ್ರಮ ಆಗಲಿ ಆಯೋಜನೆ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.

ಕೆಲ ಶಾಸಕರಿ ಬಿಜೆಪಿಗೆ ಬರಲಿದ್ದಾರೆ

 ಚಿಕ್ಕಬಳ್ಳಾಪುರ (ಡಿ. 16):  ಬರುವ ದಿನಗಳಲ್ಲಿ ಕಾಂಗ್ರೆಸ್‌ ನಿಂದ ಕೆಲ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಸಚಿವ ಡಾ.ಕೆ.ಸುಧಾಕರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಬರುವ ಶಾಸಕರ ಸಂಖ್ಯೆ ಈಗಲೇ ಹೇಳುವುದಿಲ್ಲ. ಆದರೆ ಬಿಜೆಪಿ ಸೇರಲಿರುವ ಶಾಸಕರನ್ನು ನೀವೇ ಮುಂದಿನ ದಿನಗಳಲ್ಲಿ ನೋಡಲಿದ್ದೀರಿ ಎಲ್ಲವನ್ನು ಮುಂಚೇಯೆ ಹೇಳುವುದಿಲ್ಲ ಎಂದು ಸುಧಾಕರ್‌ ಕುತೂಹಲಕಾರಿ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಬರುವುದಿಲ್ಲ. ಮೇ ಮೂರರವರೆಗೂ ನಮಗೆ ಅವಕಾಶ ಇದೆ. ಮೇ ಎರಡನೇ ವಾರದಲ್ಲಿ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ನಾನು ಮಾಡಿದ್ದೇನೆ. ಚುನಾವಣೆ ಯಾವಾಗ ಬೇಕಾದರೂ ನಡೆಸಲಿ ನಮ್ಮ ಪಕ್ಷ ಚುನಾವಣೆ ಎದುರಿಸಲು ಸನ್ನದ್ದವಾಗಿದೆಯೆಂದರು. 2023ರಲ್ಲಿ ಸ್ಪಷ್ಟಬಹುಮತದೊಂದಿಗೆ ಮತ್ತೆ ನಾವೇ ಅಧಿಕಾರಕ್ಕೆ ರಾಜ್ಯದಲ್ಲಿ ಬರಲಿದ್ದೇವೆಂದರು. ಚುನಾವಣೆಗೆ ಕಾಂಗ್ರೆಸ್‌ ನೇಮಿಸಿರುವ 32 ಮಂದಿ ತಂಡ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ನಾನು ಅವರ ಬಗ್ಗೆ ಎಷ್ಟುಕಡಿಮೆ ಮಾತನಾಡುತ್ತೇನೆ ಅಷ್ಟುಒಳ್ಳೆಯದು ಅವರಿಗೆ ಎಂದರು.

ಕರ್ನಾಟಕದಲ್ಲಿ ಮೋದಿ ಆಟ ನಡೆಯಲ್ಲ: ಪ್ರಿಯಾಂಕ್‌ ಖರ್ಗೆ

ಅವರಲ್ಲಿ ಯಾವುದೇ ಐಕ್ಯತೆ, ಒಗ್ಗಟ್ಟು ಉಳಿದಿಲ್ಲ. ಕಾಂಗ್ರೆಸ್‌ನಲ್ಲಿ ಪರಸ್ಪರ ಕಾಲೆಳೆಯುವರ ಸಂಖ್ಯೆ ಹೆಚ್ಚಾಗಿದೆ. ನಾಯಕರು ಪರಸ್ಪರ ಕೈ ಎತ್ತಿ ಒಗ್ಗಟ್ಟು ತೋರಿಸಬಹುದು. ಆದರೆ ಚುನಾವಣೆ ವೇಳೆಗೆ ಅದು ಮುಂದುವರೆಯಲ್ಲ. ಆ ಪಕ್ಷದಲ್ಲಿಟ್ಟು ನೋಡಿ ಬಂದಿದ್ದೇನೆಂದು ಸಚಿವ ಸುಧಾಕರ್‌ ಹೇಳಿದರು. ಅದು ಈಗಲೂ ಮುಂದುವರೆಯುತ್ತಿದೆ ಎಂದರು. ಯಡಿಯೂರಪ್ಪರನ್ನು ಪಕ್ಷದಲ್ಲಿ ಕಡಗಣಿಸಲಾಗುತ್ತಿದೆ ಎಂಬುದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಪಕ್ಷದ ಪರಮೋಚ್ಚ ನಾಯಕರು, ಅವರು ಕೂಡ ಪಕ್ಷವನ್ನು ಕಟ್ಟಿಬೆಳೆಸಿದ್ದಾರೆ. ಸಿಎಂ ಹಾಗೂ ಬಿಎಸ್‌ವೈ ನಡುವಿನ ಸಂಬಂದ ಹಾಲು ಜೇನಿನ ಸಂಬಂದ, ಅವರನ್ನು ಬಹಳ ಪ್ರೀತಿ, ಗೌರವದಿಂದ ನೋಡಲಾಗುತ್ತಿದೆ. ತಮ್ಮಲ್ಲಿರುವ ಭಿನ್ನಮತವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆಂದರು.

ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ

ವಿಜಯ್‌ ಮಲಗಿಹಾಳ

ಬೆಂಗಳೂರು (ಡಿ.10): ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಫಲಿತಾಂಶ ದಾಖಲಿಸಿದ ಬೆನ್ನಲ್ಲೇ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಬೇಕಿರುವ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗುಜರಾತ್‌ ಫಲಿತಾಂಶಕ್ಕೆ ಮುನ್ನ ಹಾಗೂ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘದ ಪ್ರಮುಖರ ಜತೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿದ್ದಾರೆ. ಇದೆಲ್ಲದರ ಜೊತೆಗೆ, ಗುಜರಾತ್‌ ಫಲಿತಾಂಶದ ಹುಮ್ಮಸ್ಸಿನಲ್ಲಿರುವ ಬಿಜೆಪಿ ಹೈಕಮಾಂಡ್‌ ಕರ್ನಾಟಕದಲ್ಲಿ ಹಲವು ಪ್ರಯೋಗಗಳಿಗೆ ಕೈಹಾಕುವ ವದಂತಿ ಜೋರಾಗಿದೆ.

ಈ ಪ್ರಯೋಗ ಪಕ್ಷದ ಸಂಘಟನೆಗೆ ಸಂಬಂಧಿಸಿದ್ದೋ ಅಥವಾ ರಾಜ್ಯ ಸರ್ಕಾರದ ಆಡಳಿತಕ್ಕೆ ಸಂಬಂಧಿಸಿದ್ದೋ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣೆಗೆ ಇನ್ನು ಹೆಚ್ಚೆಂದರೆ ಐದಾರು ತಿಂಗಳು ಇರುವಾಗ ಸಂಪುಟ ಪುನಾರಚನೆ ಅಥವಾ ವಿಸ್ತರಣೆಯಂತಹ ಕಸರತ್ತು ನಡೆಸಬೇಕೇ? ಸರ್ಕಾರದಲ್ಲಿ ಜಾತಿ ಸಮೀಕರಣ ಸರಿದೂಗಿಸಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಂತಹ ಪ್ರಯೋಗ ನಡೆಸಬೇಕೇ? ಅಥವಾ ಪಕ್ಷ ಹಾಗೂ ಸರ್ಕಾರದಲ್ಲಿ ಇನ್ಯಾವುದಾದರೂ ರೀತಿಯ ಬದಲಾವಣೆ ತರುವ ಅಗತ್ಯವಿದೆಯೇ ಎಂಬುದರ ಬಗ್ಗೆ ಪಕ್ಷದಲ್ಲಿ ಗಂಭೀರ ಚರ್ಚೆಗಳು ನಡೆದಿವೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ

ವಾರದಲ್ಲಿ ಸಂಪುಟ ಸರ್ಕಸ್‌?: ಇದೇ ತಿಂಗಳ 19ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಆರಂಭವಾಗಲಿದೆ. ಸಂಪುಟ ಕಸರತ್ತು ಸೇರಿದಂತೆ ಏನಾದರೂ ಬದಲಾವಣೆ ಮಾಡುವುದಿದ್ದರೆ ಅಷ್ಟರೊಳಗಾಗಿ ಮಾಡಿ ಮುಗಿಸುವ ಸಾಧ್ಯತೆಯಿದೆ. ಬಿಜೆಪಿಯ ಮಾತೃಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ರಾಜ್ಯ ನಾಯಕ ಮುಕುಂದ್‌ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು. ಎರಡು ದಿನಗಳ ಹಿಂದಷ್ಟೇ ಸಂಘದ ರಾಷ್ಟ್ರೀಯ ನಾಯಕರಾದ ದತ್ತಾತ್ರೇಯ ಹೊಸಬಾಳೆ ಅವರೂ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು. 

ಸಂಘ ಪರಿವಾರದ ಈ ಇಬ್ಬರು ಪ್ರಮುಖ ನಾಯಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿಗೆ ಇಂಬು ಸಿಕ್ಕಂತಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ವಂತ ಬಲದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಗುರಿ ಹೊಂದಿರುವ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿನ ಪಕ್ಷ ಮತ್ತು ಸರ್ಕಾರದ ವರ್ಚಸ್ಸು ವೃದ್ಧಿಸುವುದು ಹೇಗೆಂಬ ಬಗ್ಗೆ ಭಾರೀ ಲೆಕ್ಕಾಚಾರ ನಡೆಸಿದ್ದಾರೆ. ಪಕ್ಷದ ಬಗ್ಗೆ ಜನರ ವಿಶ್ವಾಸ ಹೆಚ್ಚಿಸಿ ಚುನಾವಣೆಯಲ್ಲಿ ಬಹುಮತ ಸಾಧಿಸಲು ಅನುಕೂಲ ಆಗುವಂತೆ ಈಗಿರುವ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳನ್ನು ತರಬೇಕು ಎಂಬ ನಿಲವಿಗೆ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.

ಪ್ರತಿಪಕ್ಷ ಕಾಂಗ್ರೆಸ್‌ ದಿನೇದಿನೇ ರಾಜ್ಯದಲ್ಲಿ ಬಲಗೊಳ್ಳುತ್ತಿರುವುದನ್ನು ಗಮನಿಸುತ್ತಿರುವ ಸಂಘ ಪರಿವಾರದ ನಾಯಕರು ಅದಕ್ಕೆ ಪ್ರತಿಯಾಗಿ ಬಿಜೆಪಿಯಲ್ಲೂ ಜಾತಿ ಸಮೀಕರಣ ಆಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಸಿಗಬಹುದು. ಕೆಲವರಿಗೆ ಸಂಪುಟದಿಂದ ಕೊಕ್‌ ನೀಡಬಹುದು. ಒಂದೆರಡು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬಹುದು. ಪಕ್ಷದ ಸಂಘಟನೆಯಲ್ಲಿ ಕೆಲವು ಬದಲಾವಣೆಗಳನ್ನು ತಂದು ಸಂಘಟನೆ ಸಾಮರ್ಥ್ಯ ಹೊಂದಿದವರಿಗೆ ಪ್ರಮುಖ ಸ್ಥಾನಮಾನ ಕೊಡಬಹುದು ಎಂಬಿತ್ಯಾದಿ ಚರ್ಚೆಗಳು ಆಗುತ್ತಿವೆ.

ಹಾಗಂತ ಬದಲಾವಣೆಗಳ ಬಗ್ಗೆ ಒಂದೇ ದಿನದಲ್ಲಿ ನಿರ್ಧಾರ ಕೈಗೊಂಡಿಲ್ಲ. ಕಳೆದ ಹಲವು ದಿನಗಳಿಂದ ಚಿಂತನ ಮಂಥನ ನಡೆಯುತ್ತಲೇ ಇತ್ತು. ಗುಜರಾತ್‌ ಚುನಾವಣೆಯ ಫಲಿತಾಂಶ ಹೊರಬೀಳಲಿ ಎಂಬ ಗಡುವನ್ನೂ ಹಾಕಿಕೊಂಡಿದ್ದರು. ಈಗ ಆ ಗಡುವು ಮುಗಿದಿದೆ. ದಾಖಲೆಯ ಫಲಿತಾಂಶ ಬಂದಿದೆ. ಹೀಗಾಗಿ, ಆ ಅಲೆಯ ಆಧಾರದ ಮೇಲೆ ಕರ್ನಾಟಕದಲ್ಲೂ ಕೆಲವೊಂದು ಬದಲಾವಣೆ ಕೈಗೊಳ್ಳುವುದು ಸೂಕ್ತ ಎಂಬ ಒಮ್ಮತಾಭಿಪ್ರಾಯಕ್ಕೆ ಪಕ್ಷ ಹಾಗೂ ಸಂಘ ಪರಿವಾರದ ನಾಯಕರು ಬರತೊಡಗಿದ್ದಾರೆ. ಆದರೆ, ಅಷ್ಟುಸುಲಭವಲ್ಲ ಎಂಬುದೂ ಅವರಿಗೆ ಗೊತ್ತಿದೆ. ಹೀಗಾಗಿಯೇ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

Follow Us:
Download App:
  • android
  • ios