Asianet Suvarna News Asianet Suvarna News

Karnataka Politics : ಕಾಂಗ್ರೆಸ್‌, ಜೆಡಿಎಸ್‌ ತೊರೆದು ನೂರಾರು ಮುಖಂಡರು ಬಿಜೆಪಿಗೆ ಸೇರ್ಪಡೆ

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಬಿಜೆಪಿ ಪಕ್ಷದ ಸಿದ್ದಾಂತ ಹಾಗೂ ತಾಲೂಕು ಅಭಿವೃದ್ಧಿಯನ್ನು ಮೆಚ್ಚಿ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ನೂರಾರು ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಶಾಸಕ ಮಸಾಲ ಜಯರಾಮ್‌ ಹೇಳಿದರು.

Many Leaders Join BJP in Tumakur snr
Author
First Published Dec 13, 2022, 5:09 AM IST

 ತುರುವೇಕೆರೆ (ಡಿ.13): ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಬಿಜೆಪಿ ಪಕ್ಷದ ಸಿದ್ದಾಂತ ಹಾಗೂ ತಾಲೂಕು ಅಭಿವೃದ್ಧಿಯನ್ನು ಮೆಚ್ಚಿ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ನೂರಾರು ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಶಾಸಕ ಮಸಾಲ ಜಯರಾಮ್‌ ಹೇಳಿದರು.

ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಹಲವು ಗ್ರಾಮಗಳಿಗೆ ಕೆ.ಆರ್‌.ಡಿ.ಎಲ್‌ ಯೋಜನೆಯ ಸಿಸಿ ರಸ್ತೆ ಭೂಮಿ (Land)  ಪೂಜೆ ಹಾಗೂ ಬೊಮ್ಮನಹಳ್ಳಿ ಬೆಟ್ಟದ ತಪ್ಪಲಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಭೆಯಲ್ಲಿ ಜೆಡಿಎಸ್‌ (JDS) , ಕಾಂಗ್ರೆಸ್‌ ಪಕ್ಷ ತೊರೆದ ನೂರಾರು ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

ಬಾಣಸಂದ್ರ ಗ್ರಾ.ಪಂ ಎ.ಹೊಸಹಳ್ಳಿ 30 ಲಕ್ಷ, ಪಾಳ್ಯಕ್ಕೆ 30 ಲಕ್ಷ, ವೆಂಕಟಾಪುರಕ್ಕೆ 40ಲಕ್ಷ, ಸೋಮಲಾಪುರ ಕ್ಕೆ 20 ಲಕ್ಷ, ಬೊಮ್ಮೇನಹಳ್ಳಿಗೆ 20 ಲಕ್ಷ, ಗುಡ್ಡದಹಳ್ಳಿ 20 ಲಕ್ಷ ಹಾಗೂ ಹೇಮಾವತಿ ನಾಲೆಯಿಂದ ಚಿಕ್ಕನಕಟ್ಟೆಗೆ ನೀರಾವರಿ ಯೋಜನೆ ನಿರ್ಮಾಣಕ್ಕೆ 85 ಲಕ್ಷ ಸೇರಿ ಸುಮಾರು 2 ಕೋಟಿಗೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಗಡಿ ಭಾಗ ಸೇರಿದಂತೆ ಇತರೆಡೆಗೂ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಈ ಭಾಗದಲ್ಲಿ ಬಿಜೆಪಿ ಪಕ್ಷ ಸಧೃಡವಾಗಿದೆ. ಜೆಡಿಎಸ್‌ ಮುಖಂಡರಾಗಿದ್ದ ಬಾಣಸಂದ್ರ ಪ್ರಕಾಶ್‌ ಸೇರಿದಂತೆ 11 ಗ್ರಾ.ಪಂ ಸದಸ್ಯರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮೊದಲ ಬಾರಿಗೆ ಗ್ರಾ.ಪಂ ಅಧಿಕಾರ ಹಿಡಿದು ಇತಿಹಾಸ ಸೃಷ್ಟಿಸಿದೆ. ಗ್ರಾ.ಪಂ ಬಿಜೆಪಿ ಭಧ್ರಕೋಟೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಸುಧಾಶ್ರಿನಿವಾಸ್‌, ಸದಸ್ಯ ಎಸ್‌.ಪ್ರಕಾಶ್‌, ವೀಣಾ ಪಾಂಡುರಂಗಯ್ಯ, ಅಪೀಜಮ್ಮ, ಬಿ.ಎನ್‌.ಪ್ರಕಾಶ್‌, ಸಾವಿತ್ರಮ್ಮ, ಬಿ.ಪಿ.ದೇವೀರಮ್ಮತಮ್ಮಣ್ಣಗೌಡ, ಹೆಚ್‌.ಕೆ.ಮಹದೇವಯ್ಯ, ರಾಧಚನ್ನಕೇಶವ, ರುಕ್ಮಿಣಿಬಸವರಾಜು ಸೇರಿದಂತೆ ಹಲವು ಮುಖಂಡರನ್ನು ಶಾಸಕ ಮಸಾಲ ಜಯರಾಮ್‌ ಪಕ್ಷದ ಬಾವುಟ, ಶಾಲು ಹಾಕುವ ಮೂಲಕ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷಿತ್ರ್ಮೕನಾರಾಯಣ್‌, ಬಿಜೆಪಿ ತಾಲೂಕು ಅಧ್ಯಕ್ಷ ಮೃತ್ಯುಂಜಯ್ಯ, ಮುಖಂಡರಾದ ಕೊಂಡಜ್ಜಿವಿಶ್ವನಾಥ್‌, ಕಡೇಹಳ್ಳಿಸಿದ್ದೇಗೌಡ, ವಕೀಲಮುದ್ದೆಗೌಡ, ದುಂಡಾ ರೇಣುಕಪ್ಪ, ಮಾವಿನಹಳ್ಳಿ ವಿಜಯಕುಮಾರ್‌, ವಿ.ಬಿ.ಸುರೇಶ್‌, ವಿ.ಟಿ.ವೆಂಕಟರಾಮಯ್ಯ, ಮಲ್ಲೇಶ್‌, ಸೋಮಶೇಖರ್‌, ಕುಮಾರ್‌, ಪ್ರಕಾಶ್‌, ನವೀನ್‌, ಬಸವರಾಜು, ಜಯಶಂಕರ್‌, ಚಿದಾನಂದ್‌, ವೀರೇಂದ್ರಪಾಟೀಲ್‌, ನಿಜಗುಣಮೂರ್ತಿ, ಸಂಪತ್‌ ಸೇರಿದಂತೆ ಹಲವು ಮುಖಂಡರು ಇದ್ದರು.

JDS ಸಂಘಟನೆ ಚುರುಕು

ಬಸವರಾಜ ಹಿರೇಮಠ
ಧಾರವಾಡ(ಡಿ.09): 
ರಾಜ್ಯದ ದಕ್ಷಿಣದಲ್ಲಿ ಪಂಚರತ್ನ ಅಭಿಯಾನದಿಂದ ಸಂಘಟನೆಯತ್ತ ಮುನ್ನುಗ್ಗುತ್ತಿರುವ ಜಾತ್ಯತೀತ ಜನತದಾಳ (ಜೆಡಿಎಸ್‌), ಉತ್ತರದಲ್ಲಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಊರೂರು ತಿರುಗಿ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ ಧಾರವಾಡ ಜಿಲ್ಲೆಯಲ್ಲಿ ಪಕ್ಷವನ್ನು ಒಗ್ಗೂಡಿಸುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಸಿ.ಎಂ. ಇಬ್ರಾಹಿಂ ನಾಲ್ಕು ಬಾರಿ ಜಿಲ್ಲೆಗೆ ಆಗಮಿಸಿ ಸಭೆಗಳನ್ನು ನಡೆಸಿದ್ದಾರೆ. ಈ ಬಾರಿ ಬಿಜೆಪಿ, ಕಾಂಗ್ರೆಸ್‌ಗೆ ಸವಾಲು ಒಡ್ಡಿ ಅಧಿಕಾರ ಹಿಡಿಯುವ ಭರದಲ್ಲಿ ವಿಧಾನಸಭಾ ಕ್ಷೇತ್ರ, ಜಿಪಂ ಕ್ಷೇತ್ರ ಹಾಗೂ ಬೂತ್‌ ಮಟ್ಟದಲ್ಲಿ ಜೆಡಿಎಸ್‌ ಕಾರ್ಯ ಯೋಜನೆ ರೂಪಿಸುತ್ತಿದೆ.

ಫಲಿತಾಂಶಕ್ಕಾಗಿ ಕಸರತ್ತು:

ಧಾರವಾಡದಲ್ಲಿ ಪಕ್ಷದ ಕಚೇರಿ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ವಿಧಾನಸಭಾ ಚುನಾವಣಾ ಆಕಾಂಕ್ಷಿಗಳ ಸಭೆ, ಕಲಘಟಗಿ ಹಾಗೂ ಅಳ್ನಾವರ ಸುತ್ತಿರುವ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತನ್ನ ತಂಡದೊಂದಿಗೆ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಏನೆಲ್ಲಾ ಕಸರತ್ತು ಹಾಕುತ್ತಿದ್ದಾರೆ.

ದೆಹಲಿ ತಂತ್ರಗಾರಿಕೆಯೊಂದಿಗೆ ಕರ್ನಾಟಕದಲ್ಲೂ ಅಖಾಡಕ್ಕಿಳಿಯಲಿದೆ ಆಪ್‌..!

2ನೇ ಹಂತದ ನಾಯಕರಿಗೆ ಮಣೆ:

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಸ್ತುತ ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ತೀವ್ರ ಪೈಪೋಟಿ ನಡೆದಿದೆ. ಒಂದೊಂದು ಕ್ಷೇತ್ರಕ್ಕೆ ಅದರಲ್ಲೂ ಕಾಂಗ್ರೆಸ್ಸಿನಲ್ಲಿ ಹತ್ತಾರು ಅಭ್ಯರ್ಥಿಗಳು ಟಿಕೆಟ್‌ಗಾಗಿ ಹಾತೊರೆಯುತ್ತಿದ್ದಾರೆ. ಆದರೆ, ಒಂದು ಕ್ಷೇತ್ರಕ್ಕೆ ಒಬ್ಬರಿಗೆ ಮಾತ್ರ ಟಿಕೆಟ್‌ ಸಿಗುವ ಹಿನ್ನೆಲೆಯಲ್ಲಿ ಉಳಿದ ಎರಡು ಅಥವಾ ಮೂರನೇ ಹಂತದ ನಾಯಕರನ್ನು ಜೆಡಿಎಸ್‌ ಸೆಳೆಯಲು ಯೋಜನೆ ರೂಪಿಸಿದೆ.

ಜೆಡಿಎಸ್‌ಗೆ ಸೇರ್ಪಡೆ:

ಮೂಲಗಳ ಪ್ರಕಾರ ಜನವರಿ ತಿಂಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸಿನಿಂದ ಸಾಕಷ್ಟುಮುಖಂಡರು ಜೆಡಿಎಸ್‌ಗೆ ಬರಲಿದ್ದಾರೆ ಎಂಬ ಮಾಹಿತಿ ಇದೆ. ಈಗಾಗಲೇ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೆ ಜೆಡಿಎಸ್‌ನಿಂದಲೂ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಆಯಾ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದವರಿಗೆ ಮಣೆ ಹಾಕುವುದಲ್ಲದೇ ಈ ಬಾರಿ ಅಧಿಕಾರ ಪಡೆಯಬೇಕೆಂಬ ನಿಟ್ಟಿನಲ್ಲಿ ಪ್ರಬಲ ಜಾತಿ ಹಾಗೂ ಪ್ರಭಾವ ಇದ್ದವರನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸಲಾಗಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಮಾಹಿತಿ ನೀಡಿದರು.

Follow Us:
Download App:
  • android
  • ios