‘ಕೈ’ಸಂಪರ್ಕದಲ್ಲಿ ಬಿಜೆಪಿ, ಜೆಡಿಎಸ್‌ನ ಕೆಲವರು
- ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿ
- ಹೆಸರನ್ನು ಬಹಿರಂಗಪಡಿಸಲಾಗದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ
- ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೊಸ ಬಾಂಬ್
ಮೈಸೂರು (ಜು.05): ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್‌ನ ಸಂಪರ್ಕದಲ್ಲಿದ್ದು ಸದ್ಯ ಅವರ ಹೆಸರನ್ನು ಬಹಿರಂಗಪಡಿಸಲಾಗದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೊಸ ಬಾಂಬ್ ಸಿಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿ ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶವಾಗಿರಬೇಕು, ಸದ್ಯಕ್ಕೆ ಮುಂದಿನ ಸಿಎಂ ವಿಚಾರ ಅಪ್ರಸ್ತುತ. ಇಂತಹ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಇಮೇಜ್‌ಗೆ ಧಕ್ಕೆ ತರುತ್ತವೆ, ನಗೆ ಪಾಟಲಿಗೆ ಕಾರಣವಾಗುತ್ತದೆ. ಬಿಜೆಪಿ, ಜೆಡಿಎಸ್‌ನ ಕೆಲ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಹೆಸರು ಈಗ ಬಹಿರಂಗ ಪಡಿಸಲಾಗದು’ ಎಂದರು.
'ಜನರ ಅಭಿಪ್ರಾಯ ಕೇಳಿ ಯಾವ ಪಕ್ಷ ಸೇರಬೇಕೆಂದು ನಿರ್ಧಾರ: ಬಿಜೆಪಿ ಸೇರಿ ಸೋತಿದ್ದು ಸಾಕು' ...
ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ಆದ ಬೆಲ್ಲದ್, ವಿಶ್ವನಾಥ್, ಯತ್ನಾಳ್, ಈಶ್ವರಪ್ಪ, ಯೋಗೇಶ್ವರ್ ಸೇರಿದಂತೆ ಬಹುತೇಕರೇ ಭ್ರಷ್ಟಾಚಾರ ನಡೆದಿರುವುದನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ.
ಹೀಗೆ ಹೇಳಿಕೆ ನೀಡಿದವರ ಮೇಲೆ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಮೇಲೆ ಭ್ರಷ್ಟಾಚಾರ ನಡೆದಿರುವುದು ಸತ್ಯವಲ್ಲವೇ? ಹಾಗಾಗಿ ರಾಜ್ಯದಲ್ಲಿರುವುದು ಅತ್ಯಂತ ಭ್ರಷ್ಟಸರ್ಕಾರ ಎಂದು ಅವರು ಟೀಕಿಸಿದರು.