ಕೊರೋನಾ ವಿರುದ್ಧ ಹೋರಾಟ: ರೈಲ್ವೆ ಇಲಾಖೆಯಿಂದ ಪಿಪಿಇ ಕಿಟ್‌ ತಯಾರಿಕೆ

ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯಿಂದ ಪಿಪಿಇ ಕಿಟ್‌| ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿನ ರೈಲ್ವೆ ಕಾರ್ಯಾಗಾರಗಳು ಉತ್ತಮ ಗುಣಮಟ್ಟದ ಪಿಪಿಇ ಸೂಟ್‌ಗಳನ್ನು ಯಶಸ್ವಿಯಾಗಿ ಪುನರಾವರ್ತಿಸಿವೆ| ಈವರೆಗೆ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ಕಾರ್ಯಾಗಾರವು 450 ಪಿಪಿಇ ಕಿಟ್‌ಗಳನ್ನು ತಯಾರಿಸಿದೆ ಮತ್ತು ಸ್ಥಾಪಿತ ಮಾನದಂಡಗಳ ಪ್ರಕಾರ ಮೈಸೂರು ಕಾರ್ಯಾಗಾರವು 200 ಕವರಲ್‌ ಪಿಪಿಇ ಸೂಟ್‌ಗಳನ್ನು ಗುಣಮಟ್ಟದಲ್ಲಿ ತಯಾರಿಸಿದೆ|

Manufacture of PPE Kit from Railway Department

ಹುಬ್ಬಳ್ಳಿ(ಏ.30): ನೈರುತ್ಯ ರೈಲ್ವೆ ವಲಯ ಕೋವಿಡ್‌ ವಿರುದ್ಧದ ಹೋರಾಟಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದೆ. ಇದೀಗ ಕೊರೋನಾ ವಾರಿಯರ್ಸ್‌ಗಳಿಗೆ ಜೀವ ರಕ್ಷಕ ಸಾಧನಗಳು ಹಾಗೂ ಉಪಕರಣಗಳನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದೆ. ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲೂ ರೈಲ್ವೆ ಪಿಪಿಇ (ವೈಯಕ್ತಿಕ ರಕ್ಷಣಾ ಸಾಧನ) ತಯಾರಿಸಲು ಪ್ರಾರಂಭಿಸಿದೆ.

ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿನ ರೈಲ್ವೆ ಕಾರ್ಯಾಗಾರಗಳು ಉತ್ತಮ ಗುಣಮಟ್ಟದ ಪಿಪಿಇ ಸೂಟ್‌ಗಳನ್ನು ಯಶಸ್ವಿಯಾಗಿ ಪುನರಾವರ್ತಿಸಿವೆ. ಈವರೆಗೆ ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ಕಾರ್ಯಾಗಾರವು 450 ಪಿಪಿಇ ಕಿಟ್‌ಗಳನ್ನು ತಯಾರಿಸಿದೆ ಮತ್ತು ಸ್ಥಾಪಿತ ಮಾನದಂಡಗಳ ಪ್ರಕಾರ ಮೈಸೂರು ಕಾರ್ಯಾಗಾರವು 200 ಕವರಲ್‌ ಪಿಪಿಇ ಸೂಟ್ಗಳನ್ನು ಕಟ್ಟುನಿಟ್ಟಾದ ಗುಣಮಟ್ಟದಲ್ಲಿ ತಯಾರಿಸಿದೆ. ಈ ಕಿಟ್‌ ತಯಾರಿಸಲು 20 ಸಿಬ್ಬಂದಿ, ಹುಬ್ಬಳ್ಳಿ ಕಾರ್ಯಾಗಾರದಿಂದ 12 ಮತ್ತು ಮೈಸೂರು ಕಾರ್ಯಾಗಾರದಿಂದ 8 ಮಂದಿಗೆ ವಿಡಿಯೋಗಳ ಮೂಲಕ ತರಬೇತಿ ನೀಡಲಾಗಿದೆ. 

ಅಜ್ಜಿ ಮನೆಗೆ ತೆರಳಿದ್ದ ಬಾಲಕಿಗೆ ಕೊರೋನಾ, ಅಜಾದ್ ಕಾಲೋನಿ ಸೀಲ್‌ಡೌನ್!

ಉತ್ಪಾದನೆಗಳನ್ನು ಮತ್ತಷ್ಟು ಹೆಚ್ಚಿಸಲು ಎರಡೂ ಕಾರ್ಯಾಗಾರಗಳು ಏಪ್ರಿಲ್‌ ಅಂತ್ಯದ ವೇಳೆಗೆ ಒಟ್ಟು 900 ಕಿಟ್‌ಗಳನ್ನು ಮತ್ತು 2020ರ ಮೇ ಅಂತ್ಯದ ವೇಳೆಗೆ 3,900 ತಯಾರಿಸುವ ಯೋಜನೆ ಇಟ್ಟುಕೊಂಡಿದೆ. ಪಿಪಿಇ ಮಾದರಿಗಳನ್ನು ಪರೀಕ್ಷಿಸುವ ಭಾರತದ ಏಕೈಕ ಸಂಶೋಧನಾ ಸಂಸ್ಥೆಯಾದ ಕೊಯಮತ್ತೂರು ಮೂಲದ ದಕ್ಷಿಣ ಭಾರತ ಜವಳಿ ಸಂಸ್ಥೆ ಅನುಮೋದಿಸಿದ ವಿಶೇಷ ಬಟ್ಟೆಯೊಂದಿಗೆ ಈ ಸೂಟ್‌ ತಯಾರಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.
 

Latest Videos
Follow Us:
Download App:
  • android
  • ios