ರಾಯಚೂರು (ಸೆ.29): ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಗುರು ಸಾರ್ವ​ಭೌಮ ವಿದ್ಯಾಪೀಠದಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬನ ವಿಶಿಷ್ಟಆಸೆಯನ್ನು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಈಡೇರಿಸುವುದರ ಮೂಲಕ ಆತನ ಮುಖದಲ್ಲಿ ಸಂತಸ ಮೂಡಿಸಿದ್ದಾರೆ.

ಮಠದ ಸಂಸ್ಕೃತ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳು ಸಾಲಾಗಿ ಕುಳಿತು ಊಟ ಮಾಡುತ್ತಿದ್ದ ಸಮದಯಲ್ಲಿ ಸುಬುಧೇಂದ್ರ ತೀರ್ಥರು ಪರಾಮರ್ಶಿಸಲು ತೆರಳಿದ್ದರು. ಈ ವೇಳೆ ಸಾಲಿನ ಕೊನೆಯಲ್ಲಿ ಕುಳಿತ್ತಿದ್ದ ಹೈದರಾಬಾದ್‌ ಮೂಲದ ವಿದ್ಯಾರ್ಥಿಯೊಬ್ಬ ನನಗೆ ಪಾನಿ ಪೂರಿ ತಿನ್ನುವ ಆಸೆಯಾಗಿದೆ ಎಂದು ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದ. 

ಪಾನಿಪುರಿ ಮಾರುವಾತನ ಪ್ರೀತಿಸಿದ ಅಪ್ರಾಪ್ತೆ, ಹೃದಯ ಕದ್ದವನೊಂದಿಗೆ ಬಾಲಕಿ ಪರಾರಿ! ..

ತಕ್ಷಣ ಇದಕ್ಕೆ ಸ್ಪಂದಿಸಿದ ಶ್ರೀಗಳು, ಆತನ ಜೊತೆಗೆ ಇತರೆ ವಿದ್ಯಾರ್ಥಿಗಳಿಗೂ ಮಠದ ಭೋಜನ ಶಾಲೆಯಿಂದ ಪಾನಿಪೂರಿ ಮಾಡಿಸಿ ತಿನ್ನಿಸಿದ್ದಾರೆ. ವಿದ್ಯಾರ್ಥಿ ಸ್ವಾಮೀಜಿಗಳ ಮುಂದೆ ತನ್ನ ಆಸೆ ಹೇಳಿಕೊಳ್ಳುತ್ತಿರುವುದು ಹಾಗೂ 200 ವಿದ್ಯಾರ್ಥಿಗಳು ಪಾನಿಪೂರಿ ತಿನ್ನುತ್ತಿರುವ ವಿಡಿಯೋ ವೈರಲ್‌ ಆಗಿದೆ.